ದೇಶಾದ್ಯಂತ ನವರಾತ್ರಿಯ ಸಂಭ್ರಮ ಕಳೆಕಟ್ಟಿದೆ. ಅನೇಕರು ಉಪವಾಸ ವ್ರತ ಕೈಗೊಂಡು ನವರಾತ್ರಿಯನ್ನು ಸಂಭ್ರಮದಿಂದ ಆಚರಿಸ್ತಿದ್ದಾರೆ. ಇನ್ನು ಕೆಲವರು, ಅವರದ್ದೇ ಆದ ಸಂಪ್ರದಾಯದ ಮೂಲಕ ನವರಾತ್ರಿ ವ್ರತವನ್ನು ಕೈಗೊಂಡಿದ್ದಾರೆ. ಜನಸಾಮಾನ್ಯರು, ಆಧ್ಯಾತ್ಮ ಸಾಧಕರು ಸೇರಿದಂತೆ ಎಲ್ಲರೂ ನವದುರ್ಗೆಯರನ್ನು ಆರಾಧಿಸುತ್ತಿದ್ದಾರೆ.
ಕೂಷ್ಮಾಂಡದೇವಿ ಮಂತ್ರ
ಸುರಾಸಂಪೂರ್ಣಕಲಶಂ ರುದಿರಾಪ್ಲು ತಮೇವ ಚ
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ
ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನಲಾಗುತ್ತೆ. ಈ ದೇವಿಗೆ ಕುಂಬಳಕಾಯಿ ಬಲಿ ಅತ್ಯಂತ ಪ್ರಿಯ ಎಂಬ ನಂಬಿಕೆ ಇದೆ. ಹೀಗಾಗೇ ಯೋಗ ಸಾಧಕರು ಕೂಷ್ಮಾಂಡ ದೇವಿಗೆ ಕುಂಬಳಕಾಯಿ ಬಲಿ ನೀಡುವ ಸಂಪ್ರದಾಯವಿದೆ. ಈಕೆಯನ್ನು ಶ್ರದ್ಧಾ–ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳನ್ನು ಪರಿಹರಿಸ್ತಾಳೆ, ಅಜ್ಞಾನವನ್ನು ದೂರ ಮಾಡ್ತಾಳೆ ಅನ್ನೋದು ಇವಳ ಭಕ್ತರ ನಂಬಿಕೆ.
ಕೂಷ್ಮಾಂಡ ದೇವಿ ಆರಾಧನೆಯ ಫಲಗಳು
* ರೋಗ ಪರಿಹಾರ
* ದುಃಖ ದೂರ
* ಆಯಸ್ಸು, ಆರೋಗ್ಯ ವೃದ್ಧಿ
* ಜೀವನದಲ್ಲಿ ಯಶಸ್ಸು ಪ್ರಾಪ್ತಿ
ಆಯಸ್ಸು ವೃದ್ಧಿಗಾಗಿ ಸಾಧಕರು ನವರಾತ್ರಿಯ ನಾಲ್ಕನೇ ಕೂಷ್ಮಾಂಡ ದೇವಿಯನ್ನು ಸಾಧಕರು ವಿಶೇಷವಾಗಿ ಆರಾಧಿಸ್ತಾರೆ. ಹೀಗೆ ದೇವಿಯನ್ನು ಆರಾಧಿಸೋದ್ರಿಂದ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆ ನಿಲ್ಲುತ್ತೆ. ಮನಸ್ಸು ಏಕಾಗ್ರತೆ ಸಾಧಿಸುತ್ತೆ ಅಂತಾ ಧರ್ಮಶಾಸ್ತ್ರ ಹೇಳುತ್ತೆ.
Published On - 4:44 pm, Wed, 2 October 19