ಮಹಾತ್ಮ ಗಾಂಧೀಜಿ ಎಲ್ರಿಗೂ ಗೊತ್ತು? ಆದ್ರೆ, ಅವರ ಇಷ್ಟದ ಖಾದ್ಯ ನಿಮ್ಗೆ ಗೊತ್ತೆ?
ಗಾಂಧೀಜಿಯವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ವಾ…? ಅವರ ಲೈಫ್ ಸ್ಟೈಲ್ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಸಸ್ಯಹಾರದ ಪ್ರಿಯರು ಅಂತ ಎಲ್ಲರಿಗೂ ತಿಳಿದಿದೆ. ಆದ್ರೆ ಅವರ ಫೇವರೇಟ್ ಡಿಶಸ್ ಯಾರಿಗೂ ತಿಳಿದಿಲ್ಲ ಅವುಗಳು ಯಾವುವು ಅಂತ ತಿಳಿಸ್ತೀವಿ ನೋಡಿ. ಗಾಂಧೀಜಿಯವರು ಸರಳ ಜೀವಿ ಅಂತ ಎಲ್ಲರಿಗೂ ಗೊತ್ತಿದೆ. ಅವ್ರು ಮಾಡುವ ಊಟದಲ್ಲೂ ಸಹ ಸರಳತನವಿತ್ತು. ಅವರಿಗೆ ಕೇವಲ ರೈಸ್ ಮತ್ತು ದಾಲ್ ಇದ್ರೆ ಸಾಕಾಗಿತ್ತು, ಬೇರೆ ಏನೂ ಬಯಸುತ್ತಿರಲಿಲ್ಲ. ಗಾಂಧೀಜಿಯವರು ಗುಜರಾತಿ ಮೂಲದವರಾಗಿರುವ ಕಾರಣ ಚಪಾತಿ […]
ಗಾಂಧೀಜಿಯವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ವಾ…? ಅವರ ಲೈಫ್ ಸ್ಟೈಲ್ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಸಸ್ಯಹಾರದ ಪ್ರಿಯರು ಅಂತ ಎಲ್ಲರಿಗೂ ತಿಳಿದಿದೆ. ಆದ್ರೆ ಅವರ ಫೇವರೇಟ್ ಡಿಶಸ್ ಯಾರಿಗೂ ತಿಳಿದಿಲ್ಲ ಅವುಗಳು ಯಾವುವು ಅಂತ ತಿಳಿಸ್ತೀವಿ ನೋಡಿ.
ಗಾಂಧೀಜಿಯವರು ಸರಳ ಜೀವಿ ಅಂತ ಎಲ್ಲರಿಗೂ ಗೊತ್ತಿದೆ. ಅವ್ರು ಮಾಡುವ ಊಟದಲ್ಲೂ ಸಹ ಸರಳತನವಿತ್ತು. ಅವರಿಗೆ ಕೇವಲ ರೈಸ್ ಮತ್ತು ದಾಲ್ ಇದ್ರೆ ಸಾಕಾಗಿತ್ತು, ಬೇರೆ ಏನೂ ಬಯಸುತ್ತಿರಲಿಲ್ಲ.
ಗಾಂಧೀಜಿಯವರು ಗುಜರಾತಿ ಮೂಲದವರಾಗಿರುವ ಕಾರಣ ಚಪಾತಿ ಇವರ ಫೇವರೆಟ್ ಆಗಿತ್ತು. ಹೆಚ್ಚಾಗಿ ಚಪಾತಿಯನ್ನೇ ತಿನ್ನುವ ಅಭ್ಯಾಸ ಇವರದ್ದಾಗಿತ್ತು. ಜೀವನದುದ್ದಕ್ಕೂ ತಮ್ಮ ಊಟದಲ್ಲಿ ಚಪಾತಿ ತಿನ್ನುವುದನ್ನು ಮರೆತಿರಲಿಲ್ಲ. ಇವರ ಮಧ್ಯಾಹ್ನದ ಊಟದಲ್ಲಿ ಚಪಾತಿ ಕಡ್ಡಾಯ.
ಮೊಸರು ತಿಂದ್ರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ ಅಂತಾರೆ , ಅದಕ್ಕಾಗಿ ಗಾಂಧೀಜಿಯವರು ತಮ್ಮ ಊಟದಲ್ಲಿ ಮೊಸರು ತಿನ್ನುತ್ತಿದ್ದರು. ಗಾಂಧೀಜಿಯವರ ಊಟದಲ್ಲಿ ಒಂದು ಭಾಗವಾಗಿ ಸುಟ್ಟ ಬದನೆಕಾಯಿ ಅಥವಾ ಬೇಯಿಸಿದ ಬದನೆಕಾಯಿ ಸೆವಿಸ್ತಿದ್ರು.
ಗಾಂಧೀಜಿಯವರು ಪ್ಯೂರ್ ಮತ್ತು ಸತ್ವಿಕ್ ಫುಡ್ನಲ್ಲಿ ನಂಬಿಕೆ ಇಟ್ಟವರು. ಟೆಂಪರ್ ರೇಸ್ ಮಾಡುವ ಆಹಾರವನ್ನು ಅವರು ದೂರ ಇಟ್ಟಿದ್ರು. ಬೇಯಿಸಿದ ತರಕಾರಿಯನ್ನು ಅವ್ರು ಹೆಚ್ಚು ಸೇವಿಸ್ತಿದ್ರು. ಅದ್ರಲ್ಲೂ ಉಪ್ಪು ಹಾಕದೆ ಬೇಯಿಸಿದ ಬೀಟ್ರೂಟ್ ಮತ್ತು ಮೂಲಂಗಿಯನ್ನು ಹೆಚ್ಚು ಸೇವನೆ ಮಾಡ್ತಿದ್ರು. ಸೋರೆಕಾಯಿಯಲ್ಲಿ ನ್ಯೂಟ್ರಿಷಿಯಸ್ ಅಂಶಗಳು ಹೆಚ್ಚು ಇರುವ ಕಾರಣ, ಇದರ ಸೀಸನ್ ಇದ್ದಾಗ ಗಾಂಧೀಜಿಯವರು ಬೇಯಿಸಿದ ಸೋರೆಕಾಯಿಯನ್ನು ಸೇವನೆ ಮಾಡುತ್ತಿದ್ದರು.
ಸಾಫ್ಟ್ ಆಗಿರುವ ಹಾಲಿನ ಪೇಡಾ ಗುಜರಾತಿಯವರ ಫೇವರೆಟ್ ಡೆಸರ್ಟ್ ಆಗಿತ್ತು. ಈಗಾಗ್ಲೇ ತಿಳಿಸಿದಂತೆ
ಗಾಂಧೀಜಿಯವರು ಗುಜರಾತಿ ಮೂಲದವರಾಗಿರುವುದರಿಂದ ಪೇಡ ಹೆಚ್ಚಾಗಿ ತಿನ್ನುತ್ತಿದ್ದರು. ಅದರಲ್ಲೂ ಸ್ಥಳೀಯ ಹಸುವಿನ ಹಾಲಿನಿಂದ ಮಾಡಿದ ಪೇಡಾವನ್ನು ಅಷ್ಟೇ ಸೇವಿಸ್ತಿದ್ರು. ಅಲ್ಲದೆ ಅವರಿಗೆ ಮೇಕೆಹಾಲು ತುಂಬ ಇಷ್ಟ.
Published On - 3:43 pm, Thu, 3 October 19