AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿ ಆರಾಧನೆಯಿಂದ ಸಿಗುವ ಫಲಗಳೇನು?

ದೇಶಾದ್ಯಂತ ನವರಾತ್ರಿಯ ಸಂಭ್ರಮ ಕಳೆಕಟ್ಟಿದೆ. ಅನೇಕರು ಉಪವಾಸ ವ್ರತ ಕೈಗೊಂಡು ನವರಾತ್ರಿಯನ್ನು ಸಂಭ್ರಮದಿಂದ ಆಚರಿಸ್ತಿದ್ದಾರೆ. ಇನ್ನು ಕೆಲವರು, ಅವರದ್ದೇ ಆದ ಸಂಪ್ರದಾಯದ ಮೂಲಕ ನವರಾತ್ರಿ ವ್ರತವನ್ನು ಕೈಗೊಂಡಿದ್ದಾರೆ. ಜನಸಾಮಾನ್ಯರು, ಆಧ್ಯಾತ್ಮ ಸಾಧಕರು ಸೇರಿದಂತೆ ಎಲ್ಲರೂ ನವದುರ್ಗೆಯರನ್ನು ಆರಾಧಿಸುತ್ತಿದ್ದಾರೆ. ಇಂದು ನವರಾತ್ರಿಯ ನಾಲ್ಕನೇ ದಿನ. ಇಂದು ದೇವಿಯ ಕೂಷ್ಮಾಂಡ ರೂಪವನ್ನು ಆರಾಧಿಸೋದು ವಿಶೇಷ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೇಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತೆ. ಇವಳು ಆದಿಶಕ್ತಿಯ ಪ್ರತಿರೂಪ. […]

ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿ ಆರಾಧನೆಯಿಂದ ಸಿಗುವ ಫಲಗಳೇನು?
ಸಾಧು ಶ್ರೀನಾಥ್​
| Edited By: |

Updated on:Oct 21, 2020 | 8:29 AM

Share

ದೇಶಾದ್ಯಂತ ನವರಾತ್ರಿಯ ಸಂಭ್ರಮ ಕಳೆಕಟ್ಟಿದೆ. ಅನೇಕರು ಉಪವಾಸ ವ್ರತ ಕೈಗೊಂಡು ನವರಾತ್ರಿಯನ್ನು ಸಂಭ್ರಮದಿಂದ ಆಚರಿಸ್ತಿದ್ದಾರೆ. ಇನ್ನು ಕೆಲವರು, ಅವರದ್ದೇ ಆದ ಸಂಪ್ರದಾಯದ ಮೂಲಕ ನವರಾತ್ರಿ ವ್ರತವನ್ನು ಕೈಗೊಂಡಿದ್ದಾರೆ. ಜನಸಾಮಾನ್ಯರು, ಆಧ್ಯಾತ್ಮ ಸಾಧಕರು ಸೇರಿದಂತೆ ಎಲ್ಲರೂ ನವದುರ್ಗೆಯರನ್ನು ಆರಾಧಿಸುತ್ತಿದ್ದಾರೆ.

ಇಂದು ನವರಾತ್ರಿಯ ನಾಲ್ಕನೇ ದಿನ. ಇಂದು ದೇವಿಯ ಕೂಷ್ಮಾಂಡ ರೂಪವನ್ನು ಆರಾಧಿಸೋದು ವಿಶೇಷ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೇಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತೆ. ಇವಳು ಆದಿಶಕ್ತಿಯ ಪ್ರತಿರೂಪ. ಇವಳ ವಾಹನ ಸಿಂಹ. ತೇಜೋಮಯಿ ರೂಪ ಹೊಂದಿರುವ ಕೂಷ್ಮಾಂಡ ದೇವಿ ಅಷ್ಟಭುಜಗಳನ್ನು ಹೊಂದಿದ್ದಾಳೆ. ತನ್ನ ಅಷ್ಟಭುಜಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ, ಗದೆಯನ್ನು ಹಿಡಿದಿದ್ದಾಳೆ. ಕೂಷ್ಮಾಂಡ ದೇವಿಯ ಪ್ರಭೆ ಸೂರ್ಯನಿಗೆ ಸಮಾನ ಎಂದು ಹೇಳಲಾಗುತ್ತೆ. ಅಲ್ಲದೇ ಕೂಷ್ಮಾಂಡ ದೇವಿ ಕಾಳಿದಾಸನಿಗೆ ಜ್ಞಾನ ನೀಡಿದ ದೇವಿ ಎಂತಲೂ ಪುರಾಣದಲ್ಲಿ ಉಲ್ಲೇಖವಿದೆ. ಈ ಕೂಷ್ಮಾಂಡ ದೇವಿಯ ತಾಂತ್ರಿಕ ಪೂಜೆ ಶ್ರೇಷ್ಠ. ಈ ದೇವಿ ಸ್ತುತಿಯಿಂದ ರಕ್ಷಣೆ ಸಿಗುತ್ತೆ ಅನ್ನೋ ನಂಬಿಕೆ ಇದೆ. ಕೂಷ್ಮಾಂಡ ದೇವಿಯ ಆರಾಧನೆಗೆ ವಿಶೇಷ ಮಂತ್ರವಿದೆ. ಆ ಮಂತ್ರವನ್ನು ಪಠಿಸಿ ಕೂಷ್ಮಾಂಡ ದೇವಿಯ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ.

ಕೂಷ್ಮಾಂಡದೇವಿ ಮಂತ್ರ

ಸುರಾಸಂಪೂರ್ಣಕಲಶಂ ರುದಿರಾಪ್ಲು ತಮೇವ ಚ ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ

ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನಲಾಗುತ್ತೆ. ಈ ದೇವಿಗೆ ಕುಂಬಳಕಾಯಿ ಬಲಿ ಅತ್ಯಂತ ಪ್ರಿಯ ಎಂಬ ನಂಬಿಕೆ ಇದೆ. ಹೀಗಾಗೇ ಯೋಗ ಸಾಧಕರು ಕೂಷ್ಮಾಂಡ ದೇವಿಗೆ ಕುಂಬಳಕಾಯಿ ಬಲಿ ನೀಡುವ ಸಂಪ್ರದಾಯವಿದೆ. ಈಕೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳನ್ನು ಪರಿಹರಿಸ್ತಾಳೆ, ಅಜ್ಞಾನವನ್ನು ದೂರ ಮಾಡ್ತಾಳೆ ಅನ್ನೋದು ಇವಳ ಭಕ್ತರ ನಂಬಿಕೆ.

ಕೂಷ್ಮಾಂಡ ದೇವಿ ಆರಾಧನೆಯ ಫಲಗಳು

* ರೋಗ ಪರಿಹಾರ * ದುಃಖ ದೂರ * ಆಯಸ್ಸು, ಆರೋಗ್ಯ ವೃದ್ಧಿ * ಜೀವನದಲ್ಲಿ ಯಶಸ್ಸು ಪ್ರಾಪ್ತಿ

ಆಯಸ್ಸು ವೃದ್ಧಿಗಾಗಿ ಸಾಧಕರು ನವರಾತ್ರಿಯ ನಾಲ್ಕನೇ ಕೂಷ್ಮಾಂಡ ದೇವಿಯನ್ನು ಸಾಧಕರು ವಿಶೇಷವಾಗಿ ಆರಾಧಿಸ್ತಾರೆ. ಹೀಗೆ ದೇವಿಯನ್ನು ಆರಾಧಿಸೋದ್ರಿಂದ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆ ನಿಲ್ಲುತ್ತೆ. ಮನಸ್ಸು ಏಕಾಗ್ರತೆ ಸಾಧಿಸುತ್ತೆ ಅಂತಾ ಧರ್ಮಶಾಸ್ತ್ರ ಹೇಳುತ್ತೆ.

Published On - 4:44 pm, Wed, 2 October 19

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?