Ugadi 2021: ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕು; ಮಾಂಸಾಹಾರ ಪ್ರಿಯರಿಗೆ ಭರ್ಜರಿ ಊಟ

|

Updated on: Apr 13, 2021 | 11:27 AM

Ugadi Festival 2021: ಯುಗಾದಿ ಹಬ್ಬದ ಮಾರನೇ ದಿನ ಮಾಂಸಹಾರ ಸೇವಿಸುವವರು ಭರ್ಜರಿ ಅಡುಗೆ ಮಾಡಿ ಊಟ ಸವಿಯುತ್ತಾರೆ. ವರ್ಷವಿಡೀ ನಮ್ಮ ಜೀವನ ಖುಷಿಯಿಂದರಲಿ, ಬದುಕು ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸುತ್ತಾರೆ.

Ugadi 2021: ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕು; ಮಾಂಸಾಹಾರ ಪ್ರಿಯರಿಗೆ ಭರ್ಜರಿ ಊಟ
ಮಾಂಸಾಹಾರಿ ಅಡುಗೆ
Follow us on

ಇಂದು ಯುಗಾದಿ ಹಬ್ಬ. ಎಲ್ಲೆಲ್ಲೂ ರಂಗಿನ ಮೆರಗು. ಹೊಸ ಚಿಗುರಿನ ಸಂವತ್ಸರದ ಹೊಸ ವಸಂತ ಕಾಲ. ಚೈತ್ರ ಮಾಸದ ಮೊದಲ ದಿನವಿದು. ಬೇವು-ಬೆಲ್ಲ ತಿಂದು ಈ ವರ್ಷದ ಕೊನೆಯವರೆಗೂ ಜೀವನದಲ್ಲಿ ಸಂತೋಷ, ನೆಮ್ಮದಿಯ ಜೊತೆಗೆ ಕಷ್ಟ ಬಂದಾಗ ಕುಗ್ಗದೇ ಧೈರ್ಯದಿಂದ ಎದುರಿಸುವ ಶಕ್ತಿ ಕೊಡು ಎಂದು ದೇವರಲ್ಲಿ ಭಕ್ತಿಯಿಂದ ಬೇಡಿಕೊಳ್ಳುವ ದಿನ. ಹೊಸ ಉಡುಪು, ಹೊಸ ಚೈತನ್ಯದ ಬದುಕು. ಜೊತೆಗೆ ಭರವಸೆಯ ಬೆಳಕು ಈ ಮೂರು ನಮ್ಮ ಬಾಳಿನಲ್ಲಿ ಸದಾ ಇರಲಿ. ಭರವಸೆಯತ್ತ ಬೆಳಕು ಸಾಗಿದರೆ ಬದುಕಿನಲ್ಲಿ ಹೊಸ ರೂಪು ಪಡೆಯಲು ಸಾಧ್ಯ. 

ಯುಗಾದಿ ಆಚರಣೆಯ ನಂತರ ಮಾರನೇ ದಿನ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವರ್ಷ ತೊಡಕು ಆಚರಣೆಯ ನಡೆಯುತ್ತಿದೆ. ವರ್ಷದ ತೊಡಕು ದಿನ ಮಾಂಸದೂಟ ತಯಾರಿಸಲಾಗುತ್ತದೆ. ಕಾಲ ಬದಲಾದಂತೆ ಹಳೇ ಸಂಪ್ರದಾಯಗಳಲ್ಲಿಯೂ ಬದಲಾವಣೆ ಕಂಡು ಬಂದಿದೆ. ಯುಗಾದಿಯ ಮರುದಿನದ ಸಂಭ್ರಮ, ಸಂಪ್ರದಾಯ ಬಗ್ಗೆ ಲೇಖಕ, ಕವಿ ರಾಜೇಂದ್ರ ಪ್ರಸಾದ್ ಟಿವಿ9 ಡಿಜಿಟಲ್ ಜತೆ ಮಾತನಾಡಿದ್ದು, ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ.

ಯುಗಾದಿ ದಿನ ನಾವು ಎಷ್ಟು ಸಂತೋಷದಿಂದ ಸಮಯ ಕಳೆಯುತ್ತೇವೆಯೋ ಅಷ್ಟೇ ಸಂತೋಷ ಜೀವನ ಪೂರ್ತಿ ನಮ್ಮದಾಗಿರುತ್ತದೆ ಎಂಬುದು ಭಾರತೀಯರಲ್ಲಿರುವ ಒಂದು ಆಶಾ ಭಾವನೆ. ಹಾಗಾಗಿ ಯುಗಾದಿ ದಿನ ಪೂರ್ತಿ ಪೂಜೆ ಮಾಡುತ್ತಾ ನಿಸ್ವಾರ್ಥದಿಂದ ದೇವರಲ್ಲಿ ಬೇಡಿಕೊಳ್ಳುವ ಸಂಪ್ರದಾಯದ ಜೊತೆ ಆಚರಣೆ ಮೊದಲಿನಿಂದಲೂ ಬಂದಂಥದ್ದು. ಹೊಟ್ಟೆ ತುಂಬ ತಿಂದು ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಜನರದ್ದು.

ಯುಗಾದಿಯ ಹಬ್ಬದ ದಿನ ಸಾಮಾನ್ಯವಾಗಿ ಸಸ್ಯಾಹಾರವನ್ನು ಸೇವಿಸುತ್ತಾರೆ. ಆದರೆ ಮಾಂಸಹಾರ ಸೇವಿಸುವವರು ಹಬ್ಬದ ಮಾರನೇ ದಿನ ತಮಗಿಷ್ಟದ ಮಾಂಸಾಹಾರ ಅಡುಗೆಯ ಸಿದ್ಧತೆ ಮಾಡಿ ಭರ್ಜರಿ ಊಟ ಮಾಡುತ್ತಾರೆ. ಮನೆಯವರೆಲ್ಲ ಒಟ್ಟಿಗೆ ಕೂತು, ನಗುನಗುತ್ತಾ ಇಡೀ ದಿನವನ್ನು ಕಾಲ ಕಳೆಯುತ್ತಾರೆ.

ಈಗಿನ ದಿನಮಾನಗಳಲ್ಲಿ ಮಾಂಸ ಬಹುಬೇಗ ಅಂಗಡಿಗಳಲ್ಲಿ ಸಿಗುತ್ತವೆ.‌ ಆದರೆ ಮೊದಲೆಲ್ಲಾ ಹಬ್ಬಕ್ಕೆಂದು ಮಾಂಸವನ್ನು ಖರೀದಿ ಮಾಡುವಾಗ ಹುಡುಕಾಡಬೇಕಿತ್ತು. ಹಬ್ಬದ ಪೂರಕವಾಗಿ ಮೊದಲೇ ಮಾಂಸದ ಅಡಿಗೆ ತೆರಳಿ ಅಡುಗೆಗೆ ಮಾಂಸ ಖರೀದಿಸಬೇಕಿತ್ತು. ಆದ್ದರಿಂದ ಯುಗಾದಿ ಹಬ್ಬ ಎದುರು ಬರುತ್ತಿದ್ದಂತೆಯೇ ಎರಡು ದಿನಗಳ ಮೊದಲಿನಿಂದಲೇ ಹಬ್ಬಕ್ಕೆ ತಯಾರು ಮಾಡಿಕೊಳ್ಳುತ್ತಿದ್ದರು.

ಕೆಲವೆಡೆ ಯುಗಾದಿ ಹಬ್ಬದ ದಿನವೇ ಮಾಂಸಾಹಾರವನ್ನು ಸೇವಿಸುತ್ತಾರೆ. ಇನ್ನು ಕೆಲವೆಡೆ ಹಬ್ಬದ ದಿನ ಸಸ್ಯಾಹಾರ ಸೇವಿಸಿ ಮರುದಿನ ಮಾಂಸಹಾರವನ್ನು ಸೇವಿಸುತ್ತಾರೆ. ಮಟನ್ ಕೈಮಾ, ಮಟನ್ ಕರಿ ಈ ರೀತಿಯಾದ ಇಷ್ಟವಾದ ಮಾಂಸಾಹಾರ ಪದಾರ್ಥಗಳನ್ನು ಮಾಡಿ ಸವಿಯುತ್ತಾರೆ. ಯುಗಾದಿ ಹಬ್ಬಕ್ಕೆ ನೆಂಟರಿಷ್ಟರು ಬರುವುದು ಕಡಿಮೆ. ಮನೆ ಮಗಳಿಗೆ ಮದುವೆಯಾಗಿ ಹೊಸ ಜೋಡಿಯಾಗಿದ್ದರೆ ಅವರನ್ನು ಕರೆಸಿ ವಿಶೇಷ ಊಟ ಬಡಿಸುವ ಸಂಪ್ರದಾಯವಿದೆ.

ಪ್ರಸ್ತುತ ದಿನಮಾನಗಳಲ್ಲಿ ಆಚಾರ- ವಿಚಾರ ಸಂಪ್ರದಾಯವನ್ನು ಗಮನಿಸಿದಾಗ ಮೊದಲಿಗಿಂತ ಇದೀಗ ನಮ್ಮ ಮಾತು, ಸಂಪ್ರದಾಯ ಎಲ್ಲವೂ ಬದಲಾಗಿದೆ. ಜೊತೆಗೆ ಕಾಲ ಬದಲಾಗುತ್ತಾ ಸಾಗಿದಂತೆ ಊಟೋಪಚಾರದಲ್ಲೂ ಹಲವಾರು ಬದಲಾವಣೆಗಳ ಜೊತೆ, ವಿಭಿನ್ನ ಅಡುಗೆಗಳು ಸೇರಿಕೊಂಡಿವೆ.

ಮೋಜಿಗಾಗಿ  ಜೂಜು
ಮೊದಲೆಲ್ಲಾ ಯುಗಾದಿ ಹಬ್ಬ ಬಂತೆಂದರೆ ಜೂಜು ಆಡುತ್ತಿದ್ದರು.‌ ಮಕ್ಕಳಿಂದ ಹಿಡಿದು ವಯಸ್ಕರ ತನಕ ಜೂಜು ಆಡುವುದು ಸಾಮಾನ್ಯವಾಗಿತ್ತು. ಆದರೆ ಕಾಲ ಕಳೆದಂತೆ ಜೂಜು ನಶಿಸಿವೆ. ಇದೀಗ ಹೆಚ್ಚು ಜೂಜು ಆಡುವುದು ಕಂಡು ಬರುತ್ತಿಲ್ಲ.

ಯುಗಾದಿ ಹಬ್ಬದ ಮರುದಿನ ಮಾಂಸಾಹಾರದ ಊಟ ಸಾಂಪ್ರದಾಯಿಕವಾಗಿ ಮೊದಲಿನಿಂದಲೂ ಬಂದಂಥದ್ದು, ಈಗಲೂ ಕೂಡಾ ಈ ಪದ್ಧತಿ ರೂಢಿಯಲ್ಲಿದೆ. ಹಬ್ಬದ ಮಾರನೇ ದಿನ ಮನೆಯವರೆಲ್ಲ ಸೇರಿ ನಮಗಿಷ್ಟದ ಪದಾರ್ಥವನ್ನು ಸಿದ್ಧಪಡಿಸಿಕೊಂಡು ಜತೆ ಕೂತು ಸಂಭ್ರಮದಿಂದ ಊಟ ಮಾಡುವುದರಿಂದ ವರ್ಷ ಪೂರ್ತಿ ಇದೇ ಸಂಭ್ರಮ ನಮ್ಮ ಜೀವನದಲ್ಲಿ ಇರುತ್ತದೆ ಎಂದು ಹಳ್ಳಿಯ ಜನರು ನಂಬಿದ್ದಾರೆ. ಜೊತೆಗೆ ಆಚರಣೆಯಲ್ಲಿ ಸಂಪ್ರದಾಯವನ್ನು ಪಾಲಿಸುತ್ತಾ ಬರುತ್ತಿದ್ದಾರೆ.

ಇದನ್ನೂ ಓದಿ: Happy Ugadi 2021: ಯುಗಾದಿ ಹಬ್ಬದ ದಿನ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರ

Happy Ugadi 2021: ಯುಗಾದಿ ಹಬ್ಬದ ದಿನ ಚಂದ್ರನನ್ನು ಪ್ರಾರ್ಥಿಸಿದರೆ ಸಕಲ ಸಂಕಷ್ಟವೂ ಪರಿಹಾರ

Published On - 11:24 am, Tue, 13 April 21