AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ನಿರಂತರವಾಗಿ ಹರಿವ ಪ್ರೇಮದ ತೊರೆಯಲ್ಲಿ ಮಿಂದೇಳುತ್ತಲೇ ಇರೋಣ.. ಧನ್ಯವಾದ ಓದುಗರೇ

Thank You: ಪ್ರೇಮಿಗಳ ದಿನಾಚರಣೆ ಮುಗಿದರೇನಂತೆ? ಯಾವ ಕಾಲಕ್ಕೂ ಬತ್ತದೆ ನಿರಂತರವಾಗಿ ಹರಿವ ಪ್ರೇಮದ ತೊರೆಯಲ್ಲಿ ನಾವು ಮಿಂದೇಳುತ್ತಲೇ ಇರೋಣ. ಪ್ರೀತಿಯೇ ಜಗವನ್ನು ಚೆಂದಗಾಣಿಸುವುದು, ಪ್ರೀತಿಯೇ ಈ ಬದುಕನ್ನು ಸಾರ್ಥಕಗೊಳಿಸುವುದು ಎನ್ನುವುದನ್ನು ಸ್ಮರಿಸುತ್ತಲೇ ಮುನ್ನಡಿ ಇಡೋಣ.

Valentine's Day: ನಿರಂತರವಾಗಿ ಹರಿವ ಪ್ರೇಮದ ತೊರೆಯಲ್ಲಿ ಮಿಂದೇಳುತ್ತಲೇ ಇರೋಣ.. ಧನ್ಯವಾದ ಓದುಗರೇ
ಧನ್ಯವಾದ ಓದುಗರೇ
Skanda
|

Updated on:Feb 15, 2021 | 11:29 AM

Share

ಕಾಲ ಬದಲಾದಂತೆ ಎಲ್ಲಾ ಸಂಗತಿಗಳ ವ್ಯಾಖ್ಯಾನವೂ ಬದಲಾಗುತ್ತದೆ. ಎಲ್ಲವೂ ಕಾಲಕ್ಕೆ ತಕ್ಕಂತೆ ಭಿನ್ನವಾಗುತ್ತಾ, ವಿಭಿನ್ನವಾಗುತ್ತಾ, ಮಾರ್ಪಾಡುಗೊಳ್ಳುತ್ತಾ ಹೋಗುತ್ತದೆ. ಬದಲಾವಣೆ ಜಗದ ನಿಯಮ ಎನ್ನುವುದನ್ನು ನಾವೂ ಒಪ್ಪಿಕೊಂಡಿದ್ದೇವೆ. ಈ ಪರಿಧಿಯಲ್ಲಿ ಪ್ರೇಮವೂ ಇದೆಯಾ? ಜಗತ್ತು ರೂಪಾಂತರಗೊಂಡಂತೆ, ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಪ್ರೀತಿಯನ್ನು ವ್ಯಕ್ತಪಡಿಸುವ ಬಗೆ ಬದಲಾಗಿರಬಹುದು. ಆದರೆ, ಅದರ ಭಾವ? ಅಂದಿನ ಮೀರಾಮಾಧವರ ಪ್ರೀತಿ, ರೋಮಿಯೋ ಜೂಲಿಯೆಟ್ ನಡುವಿನ ಪ್ರೇಮ, ಲೈಲಾ ಮಜನುವಿನ ಒಲವು.. ಎಲ್ಲವೂ ಇಂದಿಗೂ ಹಸಿರಾಗಿದೆ, ನಮ್ಮೆಲ್ಲರ ಎದೆಯಲ್ಲಿ ಹರಿಯುತ್ತಲೇ ಇದೆ. ಹೀಗಾಗಿಯೇ ಪ್ರೇಮವನ್ನು ನಿಷ್ಕಲ್ಮಶ, ನಿಷ್ಕಾಮ, ನಿರಂಕುಶ ಭಾವ ಎನ್ನುವುದು.

ಈ ಪೀಳಿಗೆಯವರು ಪ್ರೀತಿ, ಪ್ರೇಮವನ್ನು ಹೇಗೆ ಪರಿಗಣಿಸುತ್ತಾರೆ? ಅವರ ಭಾವವನ್ನು ಹೇಗೆ ಅಕ್ಷರಕ್ಕಿಳಿಸುತ್ತಾರೆ? ತಂತ್ರಜ್ಞಾನವನ್ನೇ ಸರ್ವಸ್ವವಾಗಿಸಿಕೊಂಡ ಯುವ ಜನತೆ ಪ್ರೇಮಪತ್ರ, ಪ್ರೇಮಬರಹಗಳಂಥ ಮಾದರಿಗಳನ್ನು ಇನ್ನೂ ಇಷ್ಟಪಡುತ್ತಾರಾ? ಎನ್ನುವ ಕುತೂಹಲದೊಂದಿಗೆ ಈ ಬಾರಿಯ ಪ್ರೇಮಿಗಳ ದಿನಾಚರಣೆ ಸಲುವಾಗಿ ಟಿವಿ9 ಕನ್ನಡ ಡಿಜಿಟಲ್​ ಪ್ರೇಮ ಬರಹಗಳನ್ನು ಓದುಗರಿಂದ ಆಹ್ವಾನಿಸಿತ್ತು. ‘‘ಪ್ರೇಮವೆಂದರೆ ಹಾಗೆ.. ನೆಲಕ್ಕೆ ಬಿದ್ದ ಮುಂಜಾನೆಯ ಮಂಜಿನಂತೆ, ಮಳೆಗಾಲದ ಕೋಲ್ಮಿಂಚಿನಂತೆ, ಬೆರಳ ನಟಿಕೆಯಂತೆ, ಜಾರಿಬಿದ್ದ ಉಲ್ಕೆಯಂತೆ. ಆ ಕ್ಷಣದಲ್ಲಿ ಅನುಭವಿಸಿದಾಗಲೇ ಅದು ಆವರಿಸಿಕೊಳ್ಳಬಲ್ಲದು. ಇಂತಹ ಪ್ರೇಮದ ಅನುಭವ ನಿಮಗೂ ಆಗಿರಬಹುದು. ಮತ್ತೇಕೆ ತಡ, ಎದೆಯ ಪ್ರೇಮರಾಗವನ್ನು ಅಕ್ಷರಕ್ಕಿಳಿಸಿ’’. ಎಂಬ ಒಕ್ಕಣೆಯೊಂದಿಗೆ ಪ್ರೇಮಬರಹಗಳನ್ನು ಆಹ್ವಾನಿಸಿದ್ದೆವು. ನಮ್ಮ ಈ ಕರೆಗೆ ಓಗೊಟ್ಟ ಓದುಗ ಬಂಧುಗಳು ನಾವೆಣಿಸಿರದ ಪ್ರಮಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಗೆ ನಾವು ಆಭಾರಿ.

ಕರ್ನಾಟಕದ ವಿವಿಧ ಭಾಗಗಳಿಂದ ಯುವಜೋಡಿಗಳು, ನವವಿವಾಹಿತರು, ಕಾಲೇಜು ವಿದ್ಯಾರ್ಥಿಗಳು, ಹಿರಿಯರು, ಮನೋವೈದ್ಯರು ಹೀಗೆ ನಮ್ಮ ಊಹೆಗೂ ಮೀರಿ ವಿವಿಧ ವಲಯದವರು ಬರೆದ ಪ್ರೇಮಪತ್ರ, ವಿರಹ ವೇದನೆಯ ಬರಹ, ಹಾಸ್ಯ ಸಂಗತಿಗಳು, ಎಚ್ಚರಿಕೆಯ ಮಾತುಗಳು, ಸೂಕ್ಷ್ಮ ಸಂಗತಿಗಳು, ವೈಜ್ಞಾನಿಕ ಲೇಖನಗಳು ನಮ್ಮನ್ನು ಅಚ್ಚರಿಗೊಳಿಸಿವೆ. ಶುದ್ಧ ಕನ್ನಡದಲ್ಲಿ, ಭಾವನಾತ್ಮಕವಾಗಿ ಬರೆದ ಸಾಲುಗಳು ಕಲ್ಲು ಎದೆಯಲ್ಲೂ ಪ್ರೇಮದ ಒರತೆಯನ್ನು ಹುಟ್ಟುಹಾಕುವಂತಿವೆ. ಕಾಲ ಬದಲಾಗಿದೆ, ಪ್ರೀತಿ, ಪ್ರೇಮ ಕಲುಷಿತಗೊಂಡಿದೆ ಎಂಬ ಮಾತುಗಳು ಸುಳ್ಳು ಎಂದು ನಿರೂಪಿಸುವಂತಿರುವ ಬರಹಗಳು ಒಂದಷ್ಟು ಭರವಸೆಯನ್ನೂ ಮೂಡಿಸಿವೆ. ಪ್ರೇಮ ಎಂದೆಂದಿಗೂ ಶುದ್ಧರೂಪಿ. ಅದು ಸಾರ್ವಕಾಲಿಕ ಸತ್ಯ ಎನ್ನುವುದನ್ನು ನಮ್ಮ ಓದುಗರು ತೋರಿಸಿಕೊಟ್ಟಿದ್ದಾರೆ. ಮತ್ತೆ ಮತ್ತೆ ಮೆಲುಕು ಹಾಕುವಂತಹ ಲೇಖನಗಳನ್ನು ಕಳುಹಿಸಿ ಪ್ರೇಮಿಗಳ ದಿನಾಚರಣೆಗೆ ಅರ್ಥ ತುಂಬಿದ್ದಾರೆ.

ಪ್ರೇಮಿಗಳ ದಿನಾಚರಣೆ ಮುಗಿದರೇನಂತೆ? ಯಾವ ಕಾಲಕ್ಕೂ ಬತ್ತದೆ ನಿರಂತರವಾಗಿ ಹರಿವ ಪ್ರೇಮದ ತೊರೆಯಲ್ಲಿ ನಾವು ಮಿಂದೇಳುತ್ತಲೇ ಇರೋಣ. ಪ್ರೀತಿಯೇ ಜಗವನ್ನು ಚೆಂದಗಾಣಿಸುವುದು, ಪ್ರೀತಿಯೇ ಈ ಬದುಕನ್ನು ಸಾರ್ಥಕಗೊಳಿಸುವುದು ಎನ್ನುವುದನ್ನು ಸ್ಮರಿಸುತ್ತಲೇ ಮುನ್ನಡಿ ಇಡೋಣ. ಈ ಮೂಲಕ ಪ್ರೇಮಿಗಳ ದಿನಕ್ಕೆ ಅರ್ಥ ತುಂಬಿದ ಎಲ್ಲಾ ಬರಹಗಾರರಿಗೂ, ಓದುಗರಿಗೂ ಧನ್ಯವಾದಗಳನ್ನು ತಿಳಿಸಲಿಚ್ಛಿಸುತ್ತೇವೆ. ನವಿರು ಬರಹಗಳನ್ನು ಮತ್ತೊಮ್ಮೆ ಓದಿ ಪುಳಕಗೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್​ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?

Published On - 11:28 am, Mon, 15 February 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ