Chocolate Day: ಇವತ್ತು ಚಾಕೊಲೇಟ್ ಡೇ.. ಲಡ್ಡು ಬಂದು ಬಾಯಿಗೆ ಬಿತ್ತಾ ಎನ್ನುವ ಮುಂಚೆ ಇದನ್ನೊಮ್ಮೆ ಓದಿಕೊಂಡು ಹೋಗಿ

Valentine's Week 2021: ಹುಡುಗರು ಚಾಕೊಲೇಟ್ ಇಷ್ಟಪಟ್ಟು ತಿನ್ನುವುದನ್ನು ಮಾಮೂಲಿ ಎನ್ನುವಂತೆ ನೋಡುವವರೇ ಕಮ್ಮಿಯಾಗಿಬಿಟ್ಟಿದ್ದಾರೆ. ಚಾಕೊಲೇಟ್ ಜಾಹೀರಾತುಗಳಲ್ಲೂ ಹುಡುಗಿಯರಿಗೇ ಹೆಚ್ಚು ಪ್ರಾಧಾನ್ಯತೆ ಇದೆ ಎನ್ನುವುದೂ ಸುಳ್ಳೇನಲ್ಲ.

Chocolate Day: ಇವತ್ತು ಚಾಕೊಲೇಟ್ ಡೇ.. ಲಡ್ಡು ಬಂದು ಬಾಯಿಗೆ ಬಿತ್ತಾ ಎನ್ನುವ ಮುಂಚೆ ಇದನ್ನೊಮ್ಮೆ ಓದಿಕೊಂಡು ಹೋಗಿ
ಸಂಗ್ರಹ ಚಿತ್ರ
Follow us
| Updated By: Digi Tech Desk

Updated on:Feb 09, 2021 | 12:30 PM

ಪ್ರೇಮಿಗಳ ದಿನಾಚರಣೆಗೆ (Valentine’s Day) ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಸದ್ಯ ಪ್ರೇಮಿಗಳ ವಾರದಲ್ಲಿ ನಾವು ಹೆಜ್ಜೆ ಹಾಕುತ್ತಿದ್ದೇವೆ. ಇಂದು ಕ್ಯಾಲೆಂಡರ್​ ಪ್ರಕಾರ ಮಂಗಳವಾರ (Tuesday) ಆದರೆ, ಪ್ರೇಮಿಗಳ ಪಾಲಿಗೆ ಇದು ಚಾಕೊಲೇಟ್ ಡೇ! ಹೌದು, ಪ್ರೇಮಿಗಳ ವಾರದ ಮೂರನೇ ದಿನವನ್ನು ಚಾಕೊಲೇಟ್ ಡೇ (Chocolate Day) ಎಂದು ಆಚರಿಸಲಾಗುತ್ತೆ. ರೋಸ್​ ಡೇ, ಪ್ರಪೋಸ್ ಡೇ ನಂತರ ನಿಮ್ಮ ಮನಕದ್ದವರಿಗೆ ಸಿಹಿತಿನಿಸನ್ನೋ ಅಥವಾ ಚಾಕೊಲೇಟನ್ನೋ ನೀಡುವ ಮೂಲಕ ಸಿಹಿ-ಕಹಿ ತುಂಬಿದ ಬದುಕಿನಲ್ಲಿ ಸಿಹಿಗೇ ಹೆಚ್ಚು ಪ್ರಾಧಾನ್ಯತೆ ನೀಡೋಣ ಎಂದು ಸಂದೇಶ ಸಾರುವ ಘಳಿಗೆಯಿದು.

ಸಾಧಾರಣವಾಗಿ ಎಲ್ಲರ ಬದುಕಿಗೆ ಚಾಕೊಲೇಟ್ ಪರಿಚಯವಾಗೋದು ಚಿಕ್ಕ ವಯಸ್ಸಿನಲ್ಲೇ. ಹಟ ಮಾಡಿದಾಗ ಸಮಾಧಾನಪಡಿಸುವುದರಿಂದ ಹಿಡಿದು ಹುಟ್ಟುಹಬ್ಬದಂದು ಶಾಲೆಯಲ್ಲಿ ಹಂಚುವ ತನಕವೂ ಚಾಕೊಲೇಟ್​ ನಮ್ಮ ಆಪತ್ಕಾಲದ ಬಂಧುವಿನಂತೆ ಕೆಲಸ ಮಾಡುತ್ತೆ. ಆದರೆ, ಬೆಳೆಯುತ್ತಾ ಹೋದಂತೆ ಈ ಚಾಕೊಲೇಟ್​ ಹುಡುಗಿಯರಿಗೆ ಮಾತ್ರ ಸೀಮಿತವೇನೋ ಎಂಬಂತಹ ದೃಷ್ಟಿಕೋನ ಪಡೆದುಕೊಳ್ಳುವುದು ಮಾತ್ರ ವಿಪರ್ಯಾಸ. ಹುಡುಗರು ಚಾಕೊಲೇಟ್ ಇಷ್ಟಪಟ್ಟು ತಿನ್ನುವುದನ್ನು ಮಾಮೂಲಿ ಎನ್ನುವಂತೆ ನೋಡುವವರೇ ಕಮ್ಮಿಯಾಗಿಬಿಟ್ಟಿದ್ದಾರೆ. ಚಾಕೊಲೇಟ್ ಜಾಹೀರಾತುಗಳಲ್ಲೂ ಹುಡುಗಿಯರಿಗೇ ಹೆಚ್ಚು ಪ್ರಾಧಾನ್ಯತೆ ಇದೆ. 5 ಸ್ಟಾರ್ ಜಾಹೀರಾತಿನಲ್ಲಿ ಬರುವ  ರಮೇಶ್-ಸುರೇಶ್​ ಜೋಡಿ ಬಿಟ್ಟರೆ  ಹುಡುಗರು ಹೆಚ್ಚು ಕಾಣುವುದು ಚ್ಯೂಯಿಂಗ್ ಗಮ್ ಆ್ಯಡ್​ಗಳಲ್ಲಿ ಅಥವಾ ಹುಡುಗಿಯರಿಗೆ ಚಾಕೊಲೇಟ್ ತಿನ್ನಿಸಿ ಮನಗೆಲ್ಲಲು ಪರದಾಡುವ ಆ್ಯಡ್​ಗಳಲ್ಲಿ. ಇದೆಲ್ಲದರ ಪ್ರಭಾವವಾಗಿ ಸಿಹಿ ಚಾಕೊಲೇಟ್​ಗಳು ಹುಡುಗಿಯರಿಗಷ್ಟೇ ಸೀಮಿತವೆಂಬಂತಾಗಿವೆ.

ಬ್ರೇಕ್​ ದ ರೂಲ್! ಇಂಥದ್ದೊಂದು ಅಲಿಖಿತ ನಿಯಮವನ್ನು ಈ ಬಾರಿ ಮುರಿದುಬಿಡಿ ನೋಡೋಣ! ಚಾಕೊಲೇಟ್ ಎಂದರೆ ಹುಡುಗರು, ಹುಡುಗಿಯರಿಗೆ ನೀಡುವ ಸಂಗತಿ ಎನ್ನುವುದಕ್ಕೆ ಒಂಚೂರು ಟ್ವಿಸ್ಟ್ ಕೊಡಿ. ನಿಮ್ಮಿಷ್ಟದ ಹುಡುಗನಿಗೆ ಅವನು ಕನಸು ಮನಸಿನಲ್ಲೂ ಊಹಿಸಿರದಂಥ ಹೆಸರಿನ ಚಾಕೊಲೇಟ್ ಒಂದನ್ನು ಕೊಟ್ಟು ನೋಡಿ. ಕೊಡುವಾಗ ಪರ್ಸನೈಲ್ಸ್ಡ್ ಚಾಕೊಲೇಟ್ ಕೊಟ್ಟರೆ ಇನ್ನೂ ಚೆಂದ. ಅದಿಲ್ಲದಿದ್ದರೆ ಒಂದು ಚೆಂದದ ಮಾತನ್ನೋ, ಹೇಳದೇ ಉಳಿದ ಗುಟ್ಟನ್ನೋ ಒಂದು ಪುಟಾಣಿ ಚೀಟಿಯಲ್ಲಿ ಬರೆದು ಕೊಡಿ. ನಿಮ್ಮಿಂದ ಚಾಕೊಲೇಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿಯೇ ಇರದ ಹುಡುಗನಿಗೆ ಅಚ್ಚರಿಯ ಉಡುಗೊರೆ ಕೈಗಿಟ್ಟಂತಾಗುತ್ತದೆ.

ಹುಡುಗರೇ.. ನೀವು ಚಾಕೊಲೇಟ್​ ಕೊಡದೇ ಕೂರಬೇಡಿ ಮತ್ತೆ! ಈ ಲೇಖನದಲ್ಲಿ ಹುಡುಗಿಯರಿಗೆ ಬ್ರೇಕ್ ​ದ ರೂಲ್​ ಎಂದು ಹೇಳಿದ್ದಾರೆ. ಹಾಗಾಗಿ ನಾವೂ ಚಾಕೊಲೇಟ್ ಕೊಡದೇ ರೂಲ್​ ಬ್ರೇಕ್​ ಮಾಡ್ತೀವಿ ಅನ್ನೋ ಸಾಹಸಕ್ಕೆ ಹುಡುಗರು ಕೈ ಹಾಕೋಕೆ ಹೋಗಬೇಡಿ. ನಿಮ್ಮ ಮನಮೆಚ್ಚಿದ ಹುಡುಗಿಗೆ ನೀವು ಚಾಕೊಲೇಟ್ ಕೊಡ್ತೀರಿ ಅನ್ನೋದು ಸರ್​ಪ್ರೈಸ್​ ವಿಷಯ ಅಲ್ಲದೇ ಇರಬಹುದು. ಆದರೆ, ನೀವು ಏನೇ ಕೊಟ್ಟರೂ ಆಕೆ ಖುಷಿಯಿಂದ ಸ್ವೀಕರಿಸುತ್ತಾಳೆ. ಹಾಗಾಗಿ ಅವಳ ಸಂತಸಕ್ಕೆ ಬ್ರೇಕ್​ ಹಾಕದೇ ಒಂದೊಳ್ಳೇ ಚಾಕೊಲೇಟ್ ಕೊಟ್ಟುಬಿಡಿ.

ಇನ್ನುಳಿದ ದಿನಗಳಾವುವು?

ಫೆಬ್ರವರಿ 10, 2021 ಬುಧವಾರ: ಟೆಡ್ಡಿ ಡೇ ಮುದ್ದುಮುದ್ದಾದ ಟೆಡ್ಡಿ ಬೇರ್​ ಪ್ರೇಮಕ್ಕೆ ವಿಶಿಷ್ಟ ಮೆರಗು ನೀಡುತ್ತವೆ. ಪ್ರೇಮದ ಪ್ರತೀಕವಾಗಿ ಟೆಡ್ಡಿ ಬೇರ್​ ಅಥವಾ ಇನ್ನಿತರ ಗೊಂಬೆಗಳನ್ನು ನಿಮ್ಮ ಪ್ರೇಮಿಗೆ ನೀಡುವ ಮೂಲಕ ಬಾಂಧವ್ಯವನ್ನು ಮತ್ತಷ್ಟು ಸುಂದರಗೊಳಿಸಬಹುದು.

ಫೆಬ್ರವರಿ 11, 2021 ಗುರುವಾರ: ಪ್ರಾಮಿಸ್ ಡೇ ಪ್ರೇಮದಲ್ಲಿ ನಂಬಿಕೆ ಮುಖ್ಯ. ಪ್ರೇಮಿಗಳು ಒಬ್ಬರಿಗೊಬ್ಬರು ಜೀವನ ಪರ್ಯಂತ ಜೊತೆಗಿರುವ ಭರವಸೆಯನ್ನು ಕೊಟ್ಟುಕೊಳ್ಳುವ ಮೂಲಕ ಈ ದಿನವನ್ನು ಆಚರಿಸಲಿ ಎನ್ನುವುದು ಮೂಲ ಉದ್ದೇಶ. ಬದುಕಿನ ಏರಿಳಿತಗಳಲ್ಲೂ ಜೊತೆಯಾಗಿರುವೆ ಎಂಬ ಭರವಸೆಯೇ ಪ್ರೇಮವನ್ನು ಮತ್ತಷ್ಟು ಗಟ್ಟಿಗೊಳಿಸುವುದರಿಂದ ಈ ದಿನಕ್ಕೆ ವಿಶೇಷ ಅರ್ಥವಿದೆ.

ಫೆಬ್ರವರಿ 12, 2021 ಶುಕ್ರವಾರ: ಹಗ್​ ಡೇ ಪ್ರೇಮಿಗಳ ವಾರದ ಆರನೇ ದಿನ ಹಗ್​ ಡೇ. ಒಬ್ಬರನ್ನೊಬ್ಬರು ಆಪ್ತವಾಗಿ ಅಪ್ಪಿಕೊಳ್ಳುವುದು ಸಂಬಂಧಕ್ಕೆ ಸೇತುವೆಯಾಗಬಲ್ಲದು. ಜೊತೆಗೆ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಬೆಚ್ಚನೆಯ ಭಾವವನ್ನು ಮೂಡಿಸಬಲ್ಲದು. ಆದ್ದರಿಂದ ಪ್ರಾಮಿಸ್​ ಡೇ ಮರುದಿನ ಒಬ್ಬರನ್ನೊಬ್ಬರು ತಬ್ಬಿಕೊಂಡು ಪ್ರೇಮದ ಬೆಚ್ಚನೆಯ ಅನುಭೂತಿಯನ್ನು ಅನುಭವಿಸಲೆಂದು ಈ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ 13, ಶನಿವಾರ: ಕಿಸ್​ ಡೇ ಮುತ್ತು ಪ್ರೇಮದ ಅತಿ ಮಧುರ ಸಂಕೇತ. ಮನಸ್ಸಿಗೆ ಹತ್ತಿರಾದವರು ನೀಡುವ ಒಂದೇ ಒಂದು ಮುತ್ತು ಮನಸ್ಸಿನ ಭಾರವನ್ನೆಲ್ಲಾ ಕರಗಿಸಬಲ್ಲದು. ಅದು ಆಪ್ತತೆಯನ್ನು ಹೆಚ್ಚಿಸುವ ಜೊತೆಗೆ ಪ್ರೇಮದ ಇನ್ನೊಂದು ಮಜಲನ್ನೂ ಪರಿಚಯಿಸುತ್ತದೆ. ಆದ್ದರಿಂದ ಪ್ರೇಮಿಗಳ ವಾರದ ಏಳನೇ ದಿನ ಅತ್ಯಂತ ವಿಶೇಷವಾಗಿದೆ.

ಫೆಬ್ರವರಿ 14, ಭಾನುವಾರ: ಪ್ರೇಮಿಗಳ ದಿನ ಇದು ಪ್ರೇಮಿಗಳ ವಾರದ ಕಡೆಯ ಮತ್ತು ಮಹತ್ವದ ದಿನ. ಇದನ್ನು ಪ್ರೇಮದ ಸಂತ ಎಂದೇ ಕರೆಯಲ್ಪಟ್ಟ 3ನೇ ಶತಮಾನದ ರೋಮ್​ ಸಂತನೊಬ್ಬನ ನೆನಪಲ್ಲಿ ಆಚರಿಸಲಾಗುತ್ತದೆ. ಏಳು ದಿನಗಳಲ್ಲಿ ಅನುಭವಿಸಿದ ಒಟ್ಟು ಭಾವದ ಮೊತ್ತವೇ ಪ್ರೇಮಿಗಳ ದಿನ. ಇದು ಪ್ರೀತಿಯನ್ನು ಸಂಭ್ರಮಿಸುವ ದಿನ.

Valentine day: ಮನಕದ್ದ ಹುಡುಗಿಯ ಮನಗೆಲ್ಲಲು ಇದಕ್ಕಿಂತಲೂ ಉತ್ತಮ ಉಡುಗೊರೆ ಇನ್ನೊಂದಿಲ್ಲ

Published On - 12:12 pm, Tue, 9 February 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್