World Tourism Day 2021: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ, ಆಶಯ ಮತ್ತು ವಿಶೇಷತೆಗಳೇನು? ಇಲ್ಲಿದೆ ವಿವರ

| Updated By: preethi shettigar

Updated on: Sep 27, 2021 | 7:16 AM

World Tourism Day: ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಪ್ರವಾಸೋದ್ಯಮ ಚೇತರಿಕೆಗೆ ಸಮಯವೂ ಕೂಡಿಬಂದಂತಾಗಿದೆ. ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 27 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದ ವಿಶೇಷ ಲೇಖನ ಇಲ್ಲಿದೆ.

World Tourism Day 2021: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ, ಆಶಯ ಮತ್ತು ವಿಶೇಷತೆಗಳೇನು? ಇಲ್ಲಿದೆ ವಿವರ
World Tourism Day 2021
Follow us on

ಸುಮಾರು ಎರಡು ವರ್ಷಗಳಿಂದ ಬಹುತೇಕರು ಮನೆಯಲ್ಲೇ ಇದ್ದಾರೆ. ಕೊವಿಡ್19 ಸಾಂಕ್ರಾಮಿಕ ಹಾಗೂ ಲಾಕ್​ಡೌನ್ ನಿರ್ಬಂಧಗಳ ಕಾರಣದಿಂದ ಹೊರಗೆ ಹೊರಡಲು ಆಗಿಲ್ಲ. ಜನರ ಸ್ವಾತಂತ್ರ್ಯವನ್ನು ಕೊರೊನಾ ಕಸಿದುಕೊಂಡಿದೆ ಎಂಬಷ್ಟರ ಮಟ್ಟಿಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೆ, ಈಗ ಕೊರೊನಾ ಎರಡನೇ ಅಲೆಯ ಬಳಿಕ ಹಾಗೂ ಲಾಕ್​ಡೌನ್ ತೆರೆಯುತ್ತಿರುವಂತೆ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಜನರು ಮತ್ತೆ ಹೊರಗೆ ಹೊರಡಲು, ಪ್ರಯಾಣ ಮಾಡಲು ಸಜ್ಜಾಗಿದ್ದಾರೆ. ಇತರ ಸ್ಥಳಗಳಿಗೆ ಜನ ತೆರಳುತ್ತಿದ್ದಾರೆ ಮತ್ತು ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಪ್ರಯಾಣ ಅಥವಾ ಪ್ರವಾಸವು ಸಂತಸ, ಸಂಭ್ರಮ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ. ಕೊರೊನಾ ಅವಧಿಯ ಬಳಿಕ ಅಂತಹ ಅವಕಾಶ ಮತ್ತೆ ಸಿಗುತ್ತಿದೆ. ಬಹುತೇಕರು ಪ್ರವಾಸ ಯೋಜನೆ ಹಾಕಿಕೊಂಡಿರಬಹುದು. ಆದರೆ, ಎಲ್ಲದರ ನಡುವೆ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಮರೆಯಬೇಡಿ. ಜೋಪಾನವಾಗಿ ಪ್ರವಾಸದ ಸಂಭ್ರಮ ಆಚರಿಸಿಕೊಳ್ಳುವುದು ಒಳಿತು. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಪ್ರವಾಸೋದ್ಯಮ ಚೇತರಿಕೆಗೆ ಸಮಯವೂ ಕೂಡಿಬಂದಂತಾಗಿದೆ. ವಿಶ್ವ ಪ್ರವಾಸೋದ್ಯಮ ದಿನ (World Tourism Day) ಯನ್ನು ಪ್ರತೀ ವರ್ಷ ಸೆಪ್ಟೆಂಬರ್ 27 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದ ವಿಶೇಷ ಲೇಖನ ಇಲ್ಲಿದೆ.

World Tourism Day 2021: ಇತಿಹಾಸ
ಯುನೈಟೆಡ್ ನೇಷನ್ಸ್​ನ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಸೆಪ್ಟೆಂಬರ್ 27, 1980 ರಂದು ಸ್ಥಾಪನೆ ಆದದ್ದಾಗಿದೆ. ಪ್ರವಾಸೋದ್ಯಮವು ಹೇಗೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳಿಗೆ ವಿಶ್ವಾದ್ಯಂತ ಪರಿಣಾಮ ಬೀರುತ್ತದೆ ಎಂದು ಹೇಳಲು ಮತ್ತು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.

World Tourism Day 2021: ಉದ್ದೇಶ ಮತ್ತು ಆಶಯ
ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನದ ಥೀಮ್ ಒಟ್ಟಾರೆ ಅಭಿವೃದ್ಧಿಗೆ ಪ್ರವಾಸೋದ್ಯಮ (Tourism for Inclusive Growth) ಎಂಬುದು ಆಗಿದೆ. ಅಂದರೆ, ಪ್ರವಾದೋದ್ಯಮ ವಿಭಾಗ ಅವಲಂಬಿಸಿರುವ ಜನರಿಗೆ ಸಹಾಯ ಮಾಡುವುದಾಗಿದೆ. ಯುನೈಟೆಡ್ ನೇಷನ್ಸ್ ವರ್ಲ್ಡ್ ಟೂರಿಸಂ ಆರ್ಗನೈಸೇಷನ್ (UNWTO) ವಾಣಿಜ್ಯ ವ್ಯವಹಾರ, ಪ್ರವಾಸಿಗಳು, ಯುಎನ್ ಏಜನ್ಸಿಗಳು, ಹಾಗೂ ಇತರರನ್ನು ಪ್ರವಾಸೋದ್ಯಮ ದಿನವನ್ನು ಪರಿಣಾಮಕಾರಿಯಾಗಿ ಆಚರಿಸುವಂತೆ ಕೇಳಿಕೊಂಡಿದೆ.

ಜಗತ್ತು ಮತ್ತೆ ತೆರೆದುಕೊಳ್ಳುತ್ತಿದೆ. ಭವಿಷ್ಯತ್ತಿಗಾಗಿ ನೋಡುತ್ತಿದೆ. ಹಾಗಾಗಿ ಪ್ರವಾಸೋದ್ಯಮ ಎಲ್ಲಾ ವಿಧದಿಂದಲೂ ಪರಿಣಾಮಕಾರಿ ಆಗಿರುವಂತೆ ನೋಡಲು ತಿಳಿಸಿದೆ. ಈ ಬಾರಿಯ ಪ್ರವಾಸೋದ್ಯಮ ದಿನದಂದು ಪ್ರವಾಸೋದ್ಯಮ ಬೆಳೆಯುವಂತೆ ನೋಡಿಕೊಳ್ಳಲು ನಾವು ಸಂಕಲ್ಪಿಸೋಣ. ಅದರ ಲಾಭಗಳು ಎಲ್ಲಾ ವಲಯದ ಜನರಿಗೆ ಅಂದರೆ, ದೊಡ್ಡ ಏರ್​ಲೈನ್​ನಿಂದ ತೊಡಗಿ ಸಣ್ಣ ಕುಟುಂಬ ವ್ಯವಹಾರಸ್ಥರಿಗೂ ಸಿಗಲಿ ಎಂದು UNWTO ಮುಖ್ಯ ಕಾರ್ಯದರ್ಶಿ ಜುರಾಬ್ ಪೊಲೊಲಿಕಾಶ್ವಿಲಿ ಹೇಳಿದ್ದಾರೆ.

ಇದನ್ನೂ ಓದಿ: ಯುಎನ್ ಡಬ್ಲ್ಯುಟಿಒಗೆ ಭಾರತದ ಮೂರು ಹಳ್ಳಿಗಳು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳೆಂದು ನಾಮಿನೇಟ್ ಆಗಿವೆ

ಇದನ್ನೂ ಓದಿ: ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಓಪನ್, ಬಂದ್ ಆಗಿದ್ದ ಜಲಸಾಹಸ ಕ್ರೀಡೆಗಳಿಗೆ ಅನುಮತಿ ಕೊಟ್ಟ ಜಿಲ್ಲಾಡಳಿತ