ಯುಎನ್ ಡಬ್ಲ್ಯುಟಿಒಗೆ ಭಾರತದ ಮೂರು ಹಳ್ಳಿಗಳು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳೆಂದು ನಾಮಿನೇಟ್ ಆಗಿವೆ
ವಿಶ್ವದೆಲ್ಲೆಡೆಯ ಗ್ರಾಮೀಣ ಸಮುದಾಯಗಳಲ್ಲಿ ಒಂದು ಸಕಾರಾತ್ಮಕ ಬದಲಾಣೆ ತರುವ ಶಕ್ತಿ ಪ್ರವಾಸೋದ್ಯಮಕ್ಕಿದೆ ಅಂತ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ (ಯುಎನ್ ಡಬ್ಲ್ಯುಟಿಒ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುರಾಬ್ ಪೊಲೊಲಿಕಾಶ್ವಿಲಿ ಹೇಳಿದ್ದಾರೆ. ಇದನ್ನು ಇಲ್ಲಿ ಯಾಕೆ ಉಲ್ಲೇಖಿಸಬೇಕಾಗಿದೆ ಭಾರತದ ಮೂರು ಗ್ರಾಮಗಳನ್ನು ‘ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿಗಳು’ ಅಂತ ಯುಎನ್ ಡಬ್ಲ್ಯುಟಿಒಗೆ ನಾಮಿನೇಟ್ ಆಗಿವೆ. ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳಿಗೆ ಡಬ್ಲ್ಯುಟಿಒ ಅರ್ಜಿಗಳನ್ನು ಆಹ್ವಾನಿಸಿತ್ತು ಮತ್ತು ಸೆಪ್ಟೆಂಬರ್ 15 ಅರ್ಜಿ ಕಳಿಸಲು ಕೊನೆಯ ದಿನವಾಗಿತ್ತು. ಸಾಂಸ್ಕೃತಿಕ ಪರಂಪರೆ ಪ್ರಚಾರ ಮತ್ತು ಸಂರಕ್ಷಣೆ ಮತ್ತು […]
ವಿಶ್ವದೆಲ್ಲೆಡೆಯ ಗ್ರಾಮೀಣ ಸಮುದಾಯಗಳಲ್ಲಿ ಒಂದು ಸಕಾರಾತ್ಮಕ ಬದಲಾಣೆ ತರುವ ಶಕ್ತಿ ಪ್ರವಾಸೋದ್ಯಮಕ್ಕಿದೆ ಅಂತ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ (ಯುಎನ್ ಡಬ್ಲ್ಯುಟಿಒ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುರಾಬ್ ಪೊಲೊಲಿಕಾಶ್ವಿಲಿ ಹೇಳಿದ್ದಾರೆ. ಇದನ್ನು ಇಲ್ಲಿ ಯಾಕೆ ಉಲ್ಲೇಖಿಸಬೇಕಾಗಿದೆ ಭಾರತದ ಮೂರು ಗ್ರಾಮಗಳನ್ನು ‘ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿಗಳು’ ಅಂತ ಯುಎನ್ ಡಬ್ಲ್ಯುಟಿಒಗೆ ನಾಮಿನೇಟ್ ಆಗಿವೆ. ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳಿಗೆ ಡಬ್ಲ್ಯುಟಿಒ ಅರ್ಜಿಗಳನ್ನು ಆಹ್ವಾನಿಸಿತ್ತು ಮತ್ತು ಸೆಪ್ಟೆಂಬರ್ 15 ಅರ್ಜಿ ಕಳಿಸಲು ಕೊನೆಯ ದಿನವಾಗಿತ್ತು.
ಸಾಂಸ್ಕೃತಿಕ ಪರಂಪರೆ ಪ್ರಚಾರ ಮತ್ತು ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸತತವಾಗಿ ಬದ್ಧವಾಗಿರುವ ಗ್ರಾಮಗಳನ್ನು ಯುಎನ್ ಡಬ್ಲ್ಯುಟಿಒ ಗುರುತಿಸುತ್ತಿದೆ.
ಯುಎನ್ ಡಬ್ಲ್ಯುಟಿಒ ಪಟ್ಟಿಯಲ್ಲಿರುವ ಭಾರತ ಮೂರು ಗ್ರಾಮಗಳೆಂದರೆ, ಮಧ್ಯ ಪ್ರದೇಶದ ಲಾದ್ಪುರ ಖಾಸ್, ಮೇಘಾಲಯದ ಕಾಂಗ್ಥಾಂಗ್ ಗ್ರಾಮ ಮತ್ತು ತೆಲಂಗಾಣದ ಪೊಚಂಪಲ್ಲಿ ಗ್ರಾಮ.
ಮಧ್ಯ ಪ್ರದೇಶ, ವನ್ಯಜೀವಿ ಮತ್ತು ಕೋಟೆಗಳಿಗೆ ಹೆಸರಾಗಿರುವಂತೆಯೇ ಕರಕುಶಲ, ಕಲೆ ಮತ್ತ ಬೇರೆ ಸಾಂಸ್ಕೃತಿಕ ಪರಂಪರೆಗಳಿಗೂ ಹೆಸರಾಗಿದೆ. ಲಾದ್ಪುರ ಖಾಸ್ ತಿಕಂಘರ್ ಜಿಲ್ಲೆಯ ಊರ್ಚಾ ತೆಹ್ಸೀಲ್ ಹತ್ತಿರದಲ್ಲಿದೆ. ಈ ಊರಲ್ಲಿ ಸಾಂಸ್ಕೃತಿಕ ಪರಂಪರೆಯೊಂದಿಗೆ ಹಳ್ಳಿ ಬದುಕಿನ ನೈಜ ಚಿತ್ರಣವನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
ಮೇಘಾಲಯದ ಕಾಂಗ್ಥಾಂಗ್ ಗ್ರಾಮವನ್ನು ಶಿಳ್ಳೆ ಹಾಕುವ ಗ್ರಾಮ ಎಂದು ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಮಗುವೊಂದು ಹುಟ್ಟಿದಾದ ಅದಕ್ಕೆ ಏಶೃಈಣ ಬದಲು ಒಂದು ಸ್ವರವನ್ನು ನೀಡಲಾಗುತ್ತದೆ. ಅದೇ ಈ ಗ್ರಾಮದ ವೈಶಿಷ್ಟ್ಯತೆ- ಜನರನ್ನು ಹೆಸರುಗಳ ಬದಲು ಸ್ವರಗಳಿಂದ ಕರೆಯಲಾಗುತ್ತದೆ. ಈ ಗ್ರಾಮವನ್ನು ರಾಜ್ಯ ಸಭೆ ಸದಸ್ಯ ಪ್ರೊ. ರಾಕೇಶ್ ಸಿನ್ಹಾ ಅವರು ದತ್ತು ಪಡೆದಿದ್ದಾರೆ.
ತೆಲಂಗಾಂಣದ ಪೊಚಂಪಲ್ಲಿ ಸೀರೆಗಳ ಬಗ್ಗೆ ಅರಿಯದವರು ಯಾರಾದರೂ ಇದ್ದಾರೆಯೇ? ಇಲ್ಲಿನ ಹ್ಯಾಂಡ್ಲೂಮ್ ಸೀರೆಗಳು ಜಗತ್ಪ್ರಸಿದ್ಧ ಎಂದರೆ ಉತ್ಪ್ರೇಕ್ಷೆ ಅನಿಸದು. ಇದನ್ನು ಭಾರತದ ಇಕ್ಕತ್ (ಬಟ್ಟೆಗೆ ಬಣ್ಣ ಹಾಕುವ ಒಂದು ಟೆಕ್ನಿಕ್) ರಾಜಧಾನಿ ಅಂತಲೂ ಕರೆಯುತ್ತ್ತಾರೆ. ಕಲೆ ಮತ್ತು ಸಂಸ್ಕೃತಿ ಹಿನ್ನೆಲೆಯಿಂದಲು ಪ್ರಸಿದ್ಧಿ ಹೊಂದಿರುವ ಪೋಚಂಪಲ್ಲಿಯಲ್ಲೇ ಆಚಾರ್ಯ ವಿನೋಬಾ ಭಾವೆ ಅವರು ಭೂದಾನ ಚಳುವಳಿಯನ್ನು ಆರಂಭಿಸಿದ್ದರು.
ಪೋಚಂಪಲ್ಲಿ ಸೀರೆಗಳಿಗೆ 2005ರಲ್ಲಿ ಜಿಯಾಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ದೊರಕಿದೆ.
ಇದನ್ನೂ ಓದಿ: Viral Video: ಎರಡು ವಿಮಾನಗಳು ಪರಸ್ಪರ ಡಿಕ್ಕಿ, ಪ್ರಯಾಣಿಕರ ಜತೆ ಕೆಳಕ್ಕೆ ಹಾರಿದ ಪೈಲಟ್; ಹಳೇ ವಿಡಿಯೋ ಮತ್ತೆ ವೈರಲ್