ಕಬೀರ್ ಸಿಂಗ್ ಚಿತ್ರದ ಅಮಾಯಕ ಹುಡುಗಿ ಕಿಯಾರಾ, ಶೇರ್​ಷಾ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾನನ್ನು ಚುಂಬಿಸಿಬಿಟ್ಟಳು!

ಕಬೀರ್ ಸಿಂಗ್ ಚಿತ್ರದ ಅಮಾಯಕ ಹುಡುಗಿ ಕಿಯಾರಾ, ಶೇರ್​ಷಾ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾನನ್ನು ಚುಂಬಿಸಿಬಿಟ್ಟಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2021 | 9:36 PM

ಚಿತ್ರರಂಗವಲ್ಲದೆ ಜಾಹೀರಾತು ಜಗತ್ತಿನಲ್ಲೂ 29 ವರ್ಷದ ಕಿಯಾರಾ ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದು ಹಲವಾರು ಪ್ರತಿಷ್ಠಿತ ಕಂಪನಿಗಳ ಉತ್ಪಾದನೆಗಳನ್ನು ಎಂಡಾರ್ಸ್ ಮಾಡುತ್ತಿದ್ದಾರೆ.

ಕಿಯಾರಾ ಅಡ್ವಾಣಿ ಹೆಸರಿನ ಬಿನ್ನಾಣಗಿತ್ತಿ ಬೆಡಗಿ ಇವತ್ತು ಬಾಲಿವುಡ್ನಲ್ಲಿ ಅತ್ಯಂತ ಬ್ಯುಸಿ ನಟಿ ಮರಾಯ್ರೇ. ಈಕೆಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ ಅಂದರೆ ಅತಿಶಯೋಕ್ತಿ ಅನಿಸದು. ಅಪ್ಟಟ ಸೌಂದರ್ಯದ ಜೊತೆಗೆ ಪರಿಣಿತ ಶಿಲ್ಪಿಯೊಬ್ಬ ಭಾರಿ ಏಕಾಗ್ರತೆಯಿಂದ ಕಟೆದ ಶಿಲಾಬಾಲಿಕೆಯಂಥ ಮೈಮಾಟ ಜನರ ನಿದ್ದೆಗೆಡಿಸುತ್ತಿದೆ. ನಟನೆಯಲ್ಲೂ ಆಕೆ ಕಮ್ಮಿಯಿಲ್ಲ. ಅಕ್ಷಯ ಕುಮಾರ್, ಸಿದ್ಧಾರ್ಥ್ ಮಲ್ಹೋತ್ರಾ, ಶಾಹಿದ್ ಕಪೂರ್ ಸಲ್ಮಾನ್ ಖಾನ್ ಮೊದಲಾದ ನಟರೊಂದಿಗೆ ನಟಿಸಿ ಸೈ ಅನಿಸಿಕೊಂಡಿದ್ದಾಳೆ. ‘ಶೇರ್​ಷಾ’ ಚಿತ್ರದಲ್ಲಿ ನಾಯಕ ನಟ ಸಿದ್ಧಾರ್ಥರೊಂದಿಗೆ ಅಕೆ ಚುಂಬನದ ದೃಶ್ಯವೊಂದರಲ್ಲಿ ಭಾಗಿಯಾಗಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ.

ಅಸಲಿಗೆ ಅವರಿಬ್ಬರು ರಿಲೇಷನ್​ಶಿಪ್​​​ನಲ್ಲಿದ್ದಾರೆ ಎಂಬ ಗುಲ್ಲೆದ್ದಿದೆ ಮಾರಾಯ್ರೇ!

ಉಡುಗೆ ಯಾವುದೇ ಆಗಿರಲಿ, ಅದಕ್ಕೆ ಒಗ್ಗುವಂಥ ಮೈಮಾಟ ಮತ್ತು ಸೌಂದರ್ಯ ಕಿಯರಾಳದ್ದು. ಸಿಂಪಲ್ ಉಡುಗೆಯಲ್ಲೂ ಆಕೆ ಬಹಳ ಆಕರ್ಷಕವಾಗಿ ಕಾಣುತ್ತಾರೆ. ‘ಕಬೀರ್ ಸಿಂಗ್’ ಸಿನಿಮಾ ನೀವು ನೋಡಿದ್ದರೆ ಈ ಮಾತನ್ನು ಒಪ್ಪುತ್ತೀರಿ. ಕಿಯಾರಾ ಒಂದೆರಡು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಆಕೆ ಯಾವ ಪರಿ ಬೇಡಿಕೆಯಲ್ಲಿರುವ ನಟಿಯೆಂದರೆ, ಈ ವರ್ಷ ಕೈಯಲ್ಲಿ 5 ಚಿತ್ರಗಳಿವೆ.

ಚಿತ್ರರಂಗವಲ್ಲದೆ ಜಾಹೀರಾತು ಜಗತ್ತಿನಲ್ಲೂ 29 ವರ್ಷದ ಕಿಯಾರಾ ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದು ಹಲವಾರು ಪ್ರತಿಷ್ಠಿತ ಕಂಪನಿಗಳ ಉತ್ಪಾದನೆಗಳನ್ನು ಎಂಡಾರ್ಸ್ ಮಾಡುತ್ತಿದ್ದಾರೆ. ಯಾವುದೊ ಒಂದು ಪಾಡಕ್ಟ್ಗೆ ಬೆತ್ತಲೆಯಾಗಿ ಪೋಸ್ ನೀಡಿ ಪಡ್ಡೆಗಳ ದಾರಿ ತಪ್ಪಿಸಿದ್ದರು!

ಹಾಗೆ ನೋಡಿದರೆ, ಕಿಯಾರಾ ಬೆಳ್ಳಿತೆರೆ ಪ್ರವೇಶಿಸಿ ಏಳು ವರ್ಷಗಳಾಗಿದೆ. 2021 ರ ಐದು ಚಿತ್ರಗಳನ್ನು ಸೇರಿಸಿದರೆ ಇದುವರೆಗೆ ಸುಮಾರು 20 ಚಿತ್ರಗಳಲ್ಲಿ ಆಕೆ ನಟಿಸಿದ್ದಾರೆ. ನೆಟ್​ಫ್ಲಿಕ್ಸ್​​ ಚಿತ್ರಗಳಲ್ಲೂ ಆಕೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  ‘ಬಾಹುಬಲಿ’ ಸುಂದರಿ ತಮನ್ನಾಳಿಂದ ತೊಟ್ಟ ಉಡುಗೆಯ ಸೊಬಗು ಹೆಚ್ಚುತ್ತದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು!