ಟಾಟಾ ಸಫಾರಿ ಗೋಲ್ಡ್ ಎಡಿಶನ್ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್​​​ನಲ್ಲಿ  ಜಾಗತಿಕ ಮಾರ್ಕೆಟ್​ಗೆ ಬಿಡುಗಡೆಯಾಗಿದೆ!

ಟಾಟಾ ಸಫಾರಿ ಗೋಲ್ಡ್ ಎಡಿಶನ್ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್​​​ನಲ್ಲಿ  ಜಾಗತಿಕ ಮಾರ್ಕೆಟ್​ಗೆ ಬಿಡುಗಡೆಯಾಗಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2021 | 10:35 PM

ಹೊಸ ಗೋಲ್ಡ್ ಎಡಿಶನ್ ಆವೃತ್ತಿಯ ಹಲವಾರು ಪ್ಯಾನಲ್‌ಗಳಲ್ಲಿ ಚಿನ್ನದ ಲೇಪವನ್ನು ಕಾಣಬಹುದು. ಬಾಗಿಲಿನ ಹಿಡಿಕೆಗಳು, ಹೆಡ್‌ಲೈಟ್ ವೃತ್ತಗಳು, ಗ್ರಿಲ್, ರೂಫ್ ಹಳಿಗಳು ಮತ್ತು ಎಲ್ಲಾ ಬ್ಯಾಡ್ಜ್‌ಗಳನ್ನು ವಾಹನದ ಒಟ್ಟಾರೆ ಸೊಬಗನ್ನು ಹೆಚ್ಚಿಸಲು ಚಿನ್ನದ ಲೇಪ ಮಾಡಲಾಗಿದೆ.

ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ 14 ಎರಡನೇ ಚರಣ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆರಂಭವಾಗಿದೆ. ಸದರಿ ಟೂರ್ನಿಯು ಕೋವಿಡ್-19 ಪಿಡುಗುನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡು ಕೆಲ ತಿಂಗಳುಗಳ ನಂತರ ಕೊಲ್ಲಿ ರಾಷ್ಟ್ರಗಳಿಗೆ ಶಿಫ್ಟ್ ಆಗಿದ್ದು ನಿಮಗೆ ಗೊತ್ತಿದೆ. ಅಂದಹಾಗೆ ನಿಮಗೆ ಮತ್ತೊಂದು ವಿಷಯವೂ ಗೊತ್ತಿರಬಹುದು. ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಸಫಾರಿ ಟೂರ್ನಿಯ ಮೊದಲ ಚರಣದ ಪ್ರಾಯೋಜಕರಲ್ಲಿ ಒಂದಾಗಿತ್ತು. ಎರಡನೇ ಚರಣಕ್ಕೂ ಅದು ಪ್ರಾಯೋಜಕತ್ವವನ್ನು ಮುಂದುವರಿಸಿದ್ದು ಇದೇ ಸಂದರ್ಭದಲ್ಲಿ ಸಫಾರಿಯ ಹೊಚ್ಚ ಹೊಸ ಗೋಲ್ಡ್ ಎಡಿಶನ್ ಅನ್ನು ದುಬೈನಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಟಾಟಾ ಗೋಲ್ಡ್ ಎಡಿಶನ್ ಎಕ್ಸ್ ಶೋರೂಮ್ ಬೆಲೆ ರೂ. 21.89 ಲಕ್ಷಗಳಿಂದ ರೂ. 23.18 ಲಕ್ಷಗಳವರೆಗೆ ಇದೆ.

ಹೊಸ ಗೋಲ್ಡ್ ಎಡಿಶನ್ ಆವೃತ್ತಿಯ ಹಲವಾರು ಪ್ಯಾನಲ್‌ಗಳಲ್ಲಿ ಚಿನ್ನದ ಲೇಪವನ್ನು ಕಾಣಬಹುದು. ಬಾಗಿಲಿನ ಹಿಡಿಕೆಗಳು, ಹೆಡ್‌ಲೈಟ್ ವೃತ್ತಗಳು, ಗ್ರಿಲ್, ರೂಫ್ ಹಳಿಗಳು ಮತ್ತು ಎಲ್ಲಾ ಬ್ಯಾಡ್ಜ್‌ಗಳನ್ನು ವಾಹನದ ಒಟ್ಟಾರೆ ಸೊಬಗನ್ನು ಹೆಚ್ಚಿಸಲು ಚಿನ್ನದ ಲೇಪ ಮಾಡಲಾಗಿದೆ.

ಹೊಳಪುರಹಿತ ಕಪ್ಪು ಬಣ್ಣದಲ್ಲಿ ಮಾಡಿರುವ ಹೊಸ 18-ಇಂಚಿನ ದೊಡ್ಡ ಮಿಶ್ರಲೋಹದ ಚಕ್ರಗಳೊಂದಿಗೆ ಟಾಟಾ ಸಫರಿ ಗೋಲ್ಡ್ ಎಡಿಶನ್ ಲಭ್ಯವಾಗಲಿದೆ. ಬ್ರಾಂಡ್ ಪ್ರಕಾರ, ಟಾಟಾ ಸಫಾರಿ ಗೋಲ್ಡ್ ಎಡಿಶನ್ ‘ವೈಟ್ ಗೋಲ್ಡ್’ ಮತ್ತು ‘ಬ್ಲ್ಯಾಕ್ ಗೋಲ್ಡ್’ ಕೇವಲ ಈ ಎರಡು ಬಣ್ಣಗಳ ಶೇಡ್​ನಲ್ಲಿ ಮಾತ್ರ ಲಭ್ಯವಿರುತ್ತದೆ.

ಕಂಪನಿಯ ಮೂಲಗಳ ಪ್ರಕಾರ, ಗೋಲ್ಡ್ ಎಡಿಶನ್ ನಲ್ಲೂ ಅದೇ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಇದೆ. ಈ ಮೋಟಾರ್‌ನ ಒಟ್ಟಾರೆ ಔಟ್ಪುಟ್ ಅನ್ನು 170 ಎಚ್ ಪಿ ಮತ್ತು 350 ಎನ್ಎಮ್ ನಲ್ಲಿ ರೇಟ್ ಮಾಡಲಾಗಿದ್ದು, 6-ಸ್ಪೀಡ್ ಮಾನವಚಾಲಿತ ಅಥವಾ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಹೊಂದಿಸಲಾಗಿದೆ.

ಇದನ್ನೂ ಓದಿ:  IPL 2021: ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ರವೀಂದ್ರನಾಥ ಠಾಗೋರ್ ಕವಿತೆ ಪಠಿಸಿದ ಕೆಕೆಆರ್ ತಂಡ; ವಿಡಿಯೋ