ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ದಸ್ತಗೀರ ಸಾಬ ದಿನ್ನಿ

’ಮಾತನ್ನು ಎಲ್ಲೂ ಮುನ್ನೆಲೆಗೆ ತರದೆ ರೂಪಕಗಳ ಭಾಷೆಯಲ್ಲೇ ಕವಿತೆ ಕಟ್ಟುತ್ತ ತಮ್ಮ ಜೀವನಾನುಭವಗಳನ್ನು ಸಹಜವಾಗಿ ದಾಟಿಸಿದ್ದಾರೆ ಕವಿ ಸುಮಿತ ಮೇತ್ರಿ . ಸಾಮಾಜಿಕ ಬಿಕ್ಕಟ್ಟುಗಳ ದಾರುಣತೆ, ಆಧುನಿಕ ಜಗತ್ತಿನ ಮೌಲ್ಯಗಳ ಪಲ್ಲಟ, ಬದುಕನ್ನು ಕಣ್ಣರಳಿಸಿ ನೋಡುವ ಬಗೆ, ವಿಶಿಷ್ಟ ಶೈಲಿಯ ಹುಡುಕಾಟದ ಚುರುಕುತನಗಳು ಮೊದಲ ಓದಿಗೆ ದಕ್ಕುತ್ತವೆ.’ ಎನ್ನುತ್ತಾರೆ ಲೇಖಕ ದಸ್ತಗೀರ ಸಾಬ ದಿನ್ನಿ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ದಸ್ತಗೀರ ಸಾಬ ದಿನ್ನಿ
ಲೇಖಕ ದಸ್ತಗೀರ ಸಾಬ್ ದಿನ್ನಿ
Follow us
ಶ್ರೀದೇವಿ ಕಳಸದ
|

Updated on:Dec 31, 2020 | 4:50 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಲೇಖಕ ದಸ್ತಗೀರ ಸಾಬ ದಿನ್ನಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ (ಕವಿತೆಗಳು) ಲೇ: ಸುಮಿತ್ ಮೇತ್ರಿ ಪ್ರ: ಕಾಜಾಣ ಪುಸ್ತಕ

ಹೊಸ ತಲೆಮಾರಿನ ಪ್ರಮುಖ ಯುವ ಕವಿಗಳಾದ ಆರಿಫ್ ರಾಜಾ, ವೀರಣ್ಣ ಮಡಿವಾಳರ, ರಾಜೇಂದ್ರ ಪ್ರಸಾದ್, ಚಾಂದ್‍ಪಾಷಾರವರಂತೆ ಕೇಳಿ ಬರುವ ಮತ್ತೊಂದು ವಿಶಿಷ್ಟ ದನಿ ಸುಮಿತ್ ಮೇತ್ರಿಯವರದು. ಮಧುರ ಚನ್ನರ ನೆಲದಿಂದ ಬಂದಿರುವ ಈ ಕವಿಯ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ ಸಂಕಲನ ಹಲವು ನೆಲೆಗಳಿಂದ ಮುಖ್ಯವೆನಿಸುತ್ತದೆ. ಪ್ರೇಮದ ಒಳತೋಟಿ, ನಿತ್ಯ ಲೋಕದ ಬಿಕ್ಕಟ್ಟು, ಅನುಭಾವದ ತಹತಹಿಕೆ ಹೀಗೆ ಮೂರು ಲೋಕಗಳನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿ ಅಭಿವ್ಯಕ್ತಿಸಿದ್ದಾರೆ.

ಮಾತನ್ನು ಎಲ್ಲೂ ಮುನ್ನೆಲೆಗೆ ತರದೆ ರೂಪಕಗಳ ಭಾಷೆಯಲ್ಲೇ ಕವಿತೆ ಕಟ್ಟುತ್ತಿರುವ ಈ ಕವಿ ಇಲ್ಲಿ ತಮ್ಮ ಜೀವನಾನುಭವಗಳನ್ನು ಸಹಜವಾಗಿ ದಾಟಿಸಿದ್ದಾರೆ. ಸಾಮಾಜಿಕ ಬಿಕ್ಕಟ್ಟುಗಳ ದಾರುಣತೆ, ಆಧುನಿಕ ಜಗತ್ತಿನ ಮೌಲ್ಯಗಳ ಪಲ್ಲಟ, ಬದುಕನ್ನು ಕಣ್ಣರಳಿಸಿ ನೋಡುವ ಬಗೆ, ವಿಶಿಷ್ಟ ಶೈಲಿಯ ಅನನ್ಯ ಹುಡುಕಾಟದ ಚುರುಕುತನಗಳು ಮೊದಲ ಓದಿಗೆ ದಕ್ಕುತ್ತವೆ. ಕಾವ್ಯವನ್ನು ಬಹು ದೂರಕ್ಕೆ ತೆಗೆದುಕೊಂಡು ಹೋಗುವ, ಪರಂಪರೆಯನ್ನು ಅರ್ಥಪೂರ್ಣವಾಗಿ ವಿಸ್ತರಿಸುವ ತಾಕತ್ತು ಕವಿಗಿದೆ ಎನ್ನುವುದಕ್ಕೆ ಇಲ್ಲಿನ ಅನೇಕ ಕವಿತೆಗಳು ಸಾಕ್ಷಿಯನ್ನು ಒದಗಿಸುವಂತಿವೆ. ನೆಲದ ಅಂತಃಕರುಣ, ಜೀವಕಾರುಣ್ಯವನ್ನು ಉಡಿಯಲ್ಲಿ ಕಟ್ಟಿಕೊಂಡು ಸಾಗಿದ್ದಾರೆ.

ಕೃ: ನಿನ್ನ ಧ್ಯಾನಿಸಿದ ಮೇಲೂ ಲೇ: ನಿರ್ಮಲಾ ಶೆಟ್ಟರ ಪ್ರ: ಫಾಲ್ಗುಣಿ ಪ್ರಕಾಶನ

ನಿರ್ಮಲಾ ಶೆಟ್ಟರು ಬರೆದ ‘ನಿನ್ನ ಧ್ಯಾನಿಸಿದ ಮೇಲೂ’ ಸಂಕಲನದಲ್ಲಿ ಐವತ್ನಾಲ್ಕು ಗಜಲ್‍ಗಳಿವೆ. ಮಧುರ ಪ್ರೀತಿ, ಎದೆಯ ಪಿಸು ಮಾತು , ಮಧು ಬಟ್ಟಲ ಘಮಲು, ಒಂಟಿತನದ ಯಾತನೆ, ಮೂಕಸಂಕಟ, ಬಿಡುಗಡೆಯ ಹಂಬಲ, ಕನಸುಗಣ್ಣಿನ ಚಡಪಡಿಕೆಗಳಿವೆ. ಬಾಳಿನ ಪ್ರೇಮವೇ ಇವರ ಗಜಲ್‍ಗಳ ಮೂಲಶ್ರುತಿಯಾಗಿದೆ ಎಂದೆನಿಸಿದರೂ ಸುಡುವ ವರ್ತಮಾನದ ದುಗುಡಗಳಿಗೆ ದನಿಯಾಗಲು ಮರೆಯುವುದಿಲ್ಲ.

ಅಮಾನವೀಯ, ಅಸಹಿಷ್ಣುತೆಯ, ವೈರುಧ್ಯಗಳ ಸಮಾಜದ ಚಲನವಲನಗಳನ್ನು ಕವಿಯ ಮನೋಭೂಮಿಕೆ ಸಮಚಿತ್ತದಿಂದ, ಸೂಕ್ಷ್ಮವಾಗಿ ಗ್ರಹಿಸಿದ್ದು, ಬೆರಗು, ಕುತೂಹಲ, ತಣ್ಣನೆಯ ಪ್ರತಿರೋಧದ ಚಹರೆಯನ್ನು ಗಜಲ್‍ಗಳ ಮೂಲಕ ರೂಪಕದ ಭಾಷೆಯಲ್ಲಿ ಓದುಗರಿಗೆ ದಾಟಿಸಿದ್ದಾರೆ. ಗಾಯ ಮಾಡಿಕೊಂಡು ನರಳುವ ದಾರುಣತೆಯನ್ನು, ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಪ್ರಕ್ಷುಬ್ಧ ಕಾಲಕ್ಕೆ ಇಲ್ಲಿನ ಗಜಲ್‍ಗಳು ಗಾಢವಾಗಿ, ಆಪ್ತವಾಗಿ ತಟ್ಟುವಂತಿವೆ. ಗಜಲ್‍ನ ಛಂದೋಲಯಗಳನ್ನು, ಪ್ರತಿಮಾ ವಿನ್ಯಾಸಗಳನ್ನು ಸಶಕ್ತವಾಗಿ ಮೈಗೂಡಿಸಿಕೊಂಡಿರುವ ಬಹುಪಾಲು ಗಜಲ್‍ಗಳು ತಾಧ್ಯಾತ್ಮದಿಂದ ಕೂಡಿವೆ. ತಾಜಾತನದಿಂದ ಅರಳಿ ಘಮಘಮಿಸುವಂತಿವೆ. ಒಟ್ಟಾರೆ ಇಲ್ಲಿನ ಗಜಲ್‍ಗಳುದ್ದಕ್ಕೂ ಧಾರವಾಡದ ನೆಲದ ಮಣ್ಣಿನ ವಾಸನೆಯಿದೆ. ಖುಷಿಯಲ್ಲಿ ಅದ್ದಿಸುತ್ತ, ಅರಿವನ್ನು ವಿಸ್ತರಿಸುತ್ತ, ನಮ್ಮ ಒಳಗಣ್ಣು ತೆರೆಸುವ ಸಾಧ್ಯತೆಯನ್ನು ಪಡೆದುಕೊಂಡಿರುವ ‘ನಿನ್ನ ಧ್ಯಾನಿಸಿದ ಮೇಲೂ’ ಸಂಕಲನ ಈ ಎಲ್ಲ ಕಾರಣಗಳಿಗಾಗಿ ಮುಖ್ಯವೆನಿಸುತ್ತದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಲೇಖಕಿ ಎಚ್. ಆರ್. ಸುಜಾತಾ

Published On - 4:50 pm, Thu, 31 December 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ