ನರಸೀಪುರದಲ್ಲಿ ಪ್ರೀತಿ-ಪ್ರೇಮಕ್ಕಾಗಿ ಮೈಬಣ್ಣವನ್ನೇ ಬದಲಿಸುತ್ತವೆ ಕಪ್ಪೆಗಳು!

ಪ್ರೀತಿಗಾಗಿ ಅರಮನೆ ತೊರೆದವರನ್ನ ನೋಡಿದ್ದೇವೆ, ಸಿಂಹಾಸನ ತ್ಯಾಗ ಮಾಡಿದವರನ್ನ ನೋಡಿದ್ದೇವೆ. ಪ್ರಾಣ ಬಿಟ್ಟವರ ಬಗ್ಗೆಯೂ ಕೇಳಿದ್ದೇವೆ. ಲೈಲಾ-ಮಜ್ನು, ರೋಮಿಯೋ-ಜುಲಿಯಟ್, ಹೀರ್-ರಾಂಝಾ ಅವರ ಅಮರ ಪ್ರೇಮದ ಬಗ್ಗೆ ಓದಿದ್ದೇವೆ. ಆದ್ರೆ ಪ್ರೀತಿಗಾಗಿ, ಪ್ರೇಮಿಕೆಗಾಗಿ ಬಣ್ಣದಿಂದ ಬಣ್ಣ ಬದಲಿಸುವವರ ಬಗ್ಗೆ ಕೇಳಿದ್ದಿರಾ? ಕೇಳಿಲ್ಲಾಂದ್ರೆ ಮಧ್ಯಪ್ರದೇಶದಲ್ಲಿರುವ ಪ್ರೀತಿಗಾಗಿ ಪ್ರೇಮಿಯನ್ನ ಸೆಳೆಯಲು ತಮ್ಮ ಬಣ್ಣವನ್ನೇ ಬದಲಿಸುವ ಕಪ್ಪೆಗಳಿವೆ ಅಂದ್ರೆ ನಂಬ್ತಿರಾ? ನಂಬಲೇ ಬೇಕು. ರೋಮಿಯೋ ಕಪ್ಪೆ ಬಗ್ಗೆ ಕೇಳಿದ್ದಿರಾ? ಹೌದು, ಮಧ್ಯಪ್ರದೇಶದ ನರಸಿಪುರದದಲ್ಲಿ ಹಳದಿ ಬಣ್ಣದ ಕಪ್ಪೆಗಳು ಈ ಮುಂಗಾರಿನಲ್ಲಿ ಭಾರೀ ಸದ್ದು […]

ನರಸೀಪುರದಲ್ಲಿ ಪ್ರೀತಿ-ಪ್ರೇಮಕ್ಕಾಗಿ ಮೈಬಣ್ಣವನ್ನೇ ಬದಲಿಸುತ್ತವೆ ಕಪ್ಪೆಗಳು!
Follow us
Guru
| Updated By: ಸಾಧು ಶ್ರೀನಾಥ್​

Updated on:Jul 15, 2020 | 3:04 PM

ಪ್ರೀತಿಗಾಗಿ ಅರಮನೆ ತೊರೆದವರನ್ನ ನೋಡಿದ್ದೇವೆ, ಸಿಂಹಾಸನ ತ್ಯಾಗ ಮಾಡಿದವರನ್ನ ನೋಡಿದ್ದೇವೆ. ಪ್ರಾಣ ಬಿಟ್ಟವರ ಬಗ್ಗೆಯೂ ಕೇಳಿದ್ದೇವೆ. ಲೈಲಾ-ಮಜ್ನು, ರೋಮಿಯೋ-ಜುಲಿಯಟ್, ಹೀರ್-ರಾಂಝಾ ಅವರ ಅಮರ ಪ್ರೇಮದ ಬಗ್ಗೆ ಓದಿದ್ದೇವೆ. ಆದ್ರೆ ಪ್ರೀತಿಗಾಗಿ, ಪ್ರೇಮಿಕೆಗಾಗಿ ಬಣ್ಣದಿಂದ ಬಣ್ಣ ಬದಲಿಸುವವರ ಬಗ್ಗೆ ಕೇಳಿದ್ದಿರಾ? ಕೇಳಿಲ್ಲಾಂದ್ರೆ ಮಧ್ಯಪ್ರದೇಶದಲ್ಲಿರುವ ಪ್ರೀತಿಗಾಗಿ ಪ್ರೇಮಿಯನ್ನ ಸೆಳೆಯಲು ತಮ್ಮ ಬಣ್ಣವನ್ನೇ ಬದಲಿಸುವ ಕಪ್ಪೆಗಳಿವೆ ಅಂದ್ರೆ ನಂಬ್ತಿರಾ? ನಂಬಲೇ ಬೇಕು.

ರೋಮಿಯೋ ಕಪ್ಪೆ ಬಗ್ಗೆ ಕೇಳಿದ್ದಿರಾ? ಹೌದು, ಮಧ್ಯಪ್ರದೇಶದ ನರಸಿಪುರದದಲ್ಲಿ ಹಳದಿ ಬಣ್ಣದ ಕಪ್ಪೆಗಳು ಈ ಮುಂಗಾರಿನಲ್ಲಿ ಭಾರೀ ಸದ್ದು ಮಾಡುತ್ತಿವೆ. ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಪ್ರವೀಣ್ ಕಸ್ವಾನ್ ಸೋಷಿಯಲ್ ಮೀಡಿಯಾದಲ್ಲಿ ಈ ರೋಮಿಯೋ ಹಳದಿ ಕಪ್ಪೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಪ್ರವೀಣ್ ಅವರು ತಮ್ಮ ಟ್ವೀಟರ್  ಅಕೌಂಟ್‌ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ಈ ಹಳದಿ ಕಪ್ಪೆಗಳ ಬಗ್ಗೆ ಯಾರಾದರೂ ಕೇಳಿದ್ದಿರಾ? ಇವು ಇಂಡಿಯನ್ ಬುಲ್‌ಫ್ರಾಗ್‌, ಮಧ್ಯಪ್ರದೇಶದ ನರಸೀಪುರದಲ್ಲಿ ನೋಡಲು ಸಿಗುತ್ತವೆ ಎಂದು ಬರೆದುಕೊಂಡಿದ್ದಾರೆ.

ಸಂಗಾತಿಗಾಗಿ ತಮ್ಮ ಅಸಲಿ ಬಣ್ಣವನ್ನೇ ತ್ಯಾಗ ಮಾಡುವ ಪ್ರೇಮಿಗಳು ಇಷ್ಟೆ ಅಲ್ಲ ಈ ಕಪ್ಪೆಗಳ ವೈಶಿಷ್ಟ್ಯದ ಬಗ್ಗೆಯೂ ಪ್ರವೀಣ್ ತಿಳಿಸಿದ್ದಾರೆ. ಅವರ ಪ್ರಕಾರ ಸಾಮನ್ಯವಾಗಿ ಈ ಹಳದಿ ಕಪ್ಪೆಗಳ ಅಸಲಿ ಬಣ್ಣ ಮಂದ ಹಸಿರು ಅಂದ್ರೆ ಅತಿ ತಿಳಿಯಾದ ಹಸಿರು ಬಣ್ಣ. ಇವು ಮುಂಗಾರಿನ ಸೀಸನ್‌ನಲ್ಲಿ ಬಹಳಷ್ಟು ಕಾಣಸಿಗುತ್ತವೆ. ಮುಂಗಾರು ಮಳೆಯಲ್ಲಿ ಸಂಗಾತಿಯನ್ನು ಅರಸುತ್ತಾ ಅಲೆದಾಡುವ ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳನ್ನ ಆಕರ್ಷಿಸಲು ಹೀಗೆ ಮಂದ ಹಸಿರಿನಿಂದ ಹಳದಿ ಬಣ್ಣಕ್ಕೆ ತಮ್ಮ ಮೈಬಣ್ಣವನ್ನು ಬದಲಿಸಿಕೊಳ್ಳುತ್ತವೆ. ಯಾಕಂದ್ರೆ ಬೇಬಿ ಅಂದ್ರೆ, ಲೇಡಿ ಕಪ್ಪೆಗಳಿಗೆ ಹಳದಿ ಅಂದ್ರೆ ಭಾರೀ ಇಷ್ಟ. Yes, They like Yellow.

ಕೆಲವೇ ಗಂಟೆಗಳಲ್ಲಿ ವೈರಲ್ ಹೀಗೆ ಹಳದಿ ಕಪ್ಪೆಗಳ ಬಗ್ಗೆ ಫಾರೆಸ್ಟ್ ಅಧಿಕಾರಿ ವಿಡಿಯೊ ಪೋಸ್ಟ್ ಮಾಡುತ್ತಿದ್ದಂತೆ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವಾರು ನೆಟ್ಟಿಗರು ಹಳದಿ ಕಪ್ಪೆಗಳ ಬಗ್ಗೆ ವಾಖ್ಯಾನ ಮಾಡುತ್ತಿದ್ದಾರೆ. ಆಂಧ್ರದವರೊಬ್ಬರು ತಮ್ಮಲ್ಲೂ ಇಂಥ ಕಪ್ಪೆಗಳಿವೆ, ಮುಂಗಾರು ಮಳೆಯಲ್ಲಿ ಆಗಸದಿಂದ ಅವು ಬಿಳುತ್ತವೆಯನ್ನುವ ನಂಬಿಕೆಯಿದೆ ಎಂದಿದ್ದಾರೆ. ಇನ್ನು ಕೆಲವರು ಈ ಕಪ್ಪೆಗಳು ವಿಷಕಾರಿಯಾ ಅಂತ ಕೇಳಿದ್ದಾರೆ. ಅದಕ್ಕೆ ಇನ್ನೊಬ್ಬರು ಇಲ್ಲಾ ಅವು ವಿಷಕಾರಿಯಲ್ಲ, ಸಾಕಷ್ಟು ಜನ ಅವುಗಳನ್ನ ಫ್ರಾಯ್ ಮಾಡಿಕೊಂಡು ತಿಂತಾರೆ ಎಂದಿದ್ದಾರೆ.

ಭಾರತೀಯ ಉಪಖಂಡದಲ್ಲಿ ಮಾತ್ರ ಸಿಗುತ್ತವೆ ಈ ಕಪ್ಪೆಗಳು ಆದ್ರೆ ಬ್ರಿಟನ್‌ನ ಡೈಲಿ ಮೇಲ್ ಈ ಕಪ್ಪೆಗಳ ಬಗ್ಗೆ ವಿವರಿಸಿದೆ. ಸಾಮಾನ್ಯವಾಗಿ ಈ ಕಪ್ಪೆಗಳು ಭಾರತೀಯ ಉಪಖಂಡದಲ್ಲಿ ಕಾಣಸಿಗುತ್ತವೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಮಯನ್ಮಾರ್ ಹಾಗೂ ಅಫ್ಘಾನಿಸ್ತಾನದಲ್ಲಿ ಇಂಥ ಬಣ್ಣ ಬದಲಿಸುವ ಹಳದಿ ಅಂದ್ರೆ ರೋಮಿಯೋ ಕಪ್ಪೆಗಳು ವಾಸಿಸುತ್ತವೆ. ಇವು ಕೇವಲ ಸಿಹಿ ನೀರು ಇರುವ ಕಡೆಗಳಲ್ಲಿ ಮಾತ್ರ ವಾಸಿಸುತ್ತವೆ. ಸಾಗರ ತೀರದ ಪ್ರದೇಶಗಳಂದ್ರೆ ಇವಕ್ಕೆ ಅಲರ್ಜಿ ಎಂದು ಡೈಲಿಮೇಲ್ ಕಪ್ಪೆಗಳ ಬಗ್ಗೆ ವಿಶ್ಲೇಷಿಸಿದೆ.

Published On - 9:40 pm, Tue, 14 July 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್