Solar Eclipse: ಆಗಸ್ಟ್ 12 ರಂದು ಸೂರ್ಯಗ್ರಹಣ; ಈ 4 ರಾಶಿಯವರಿಗೆ ಒಲಿಯಲಿದೆ ಬಂಪರ್ ಅದೃಷ್ಟ!

2026 ರ ಆಗಸ್ಟ್ 12 ರ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಪ್ರಭಾವವು ಜಗತ್ತಿನಾದ್ಯಂತ ಇರಲಿದೆ. ಮಿಥುನ, ಕನ್ಯಾ, ಕುಂಭ, ಮೀನ ರಾಶಿಯವರಿಗೆ ಇದು ಅದೃಷ್ಟ, ಆರ್ಥಿಕ ಪ್ರಗತಿ ಮತ್ತು ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ತರಲಿದೆ. ಈ ರಾಶಿಗಳವರಿಗೆ ಸಂಪತ್ತು, ಸುಖ ಶಾಂತಿ ಲಭಿಸಿ ಜೀವನದಲ್ಲಿ ಶುಭ ಬದಲಾವಣೆಗಳಾಗಲಿವೆ.

Solar Eclipse: ಆಗಸ್ಟ್ 12 ರಂದು ಸೂರ್ಯಗ್ರಹಣ; ಈ 4 ರಾಶಿಯವರಿಗೆ ಒಲಿಯಲಿದೆ ಬಂಪರ್ ಅದೃಷ್ಟ!
ಸೂರ್ಯಗ್ರಹಣ
Image Credit source: Getty Images

Updated on: Jul 10, 2026 | 10:14 AM

ಮುಖ್ಯಾಂಶಗಳು

  • ಆಗಸ್ಟ್ 12 ರಂದು ಈ ವರ್ಷದ ಅತ್ಯಂತ ಪ್ರಮುಖ ಸೂರ್ಯಗ್ರಹಣ ಸಂಭವಿಸಲಿದೆ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಧನಾತ್ಮಕ ಪ್ರಭಾವವು ಜಗತ್ತಿನಾದ್ಯಂತ ಇರಲಿದೆ.
  • ಸೂರ್ಯಗ್ರಹಣವು ನಾಲ್ಕು ರಾಶಿಗೆ ಅಪಾರ ಅದೃಷ್ಟ ಮತ್ತು ಆರ್ಥಿಕ ಪ್ರಗತಿ ತರಲಿದೆ

2026 ರ ಆಗಸ್ಟ್ 12 ರಂದು ಈ ವರ್ಷದ ಅತ್ಯಂತ ಪ್ರಮುಖ ಸೂರ್ಯಗ್ರಹಣ ಸಂಭವಿಸಲಿದೆ. ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ಗ್ರಹಣಕ್ಕೆ ಅತ್ಯಂತ ವಿಶೇಷ ಮಹತ್ವವಿದೆ. ಆದಾಗ್ಯೂ, ಭಾರತೀಯ ಕಾಲಮಾನದ (IST) ಪ್ರಕಾರ ಈ ಸೂರ್ಯಗ್ರಹಣವು ರಾತ್ರಿ 11:00 ಗಂಟೆಗೆ ಸಂಭವಿಸುವುದರಿಂದ, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ ಗ್ರಹಣ ಕಾಣಿಸದ ಹಿನ್ನೆಲೆಯಲ್ಲಿ, ಇದರ ಸೂತಕ ಅವಧಿಯೂ (Sutaka Period) ಸಹ ಭಾರತಕ್ಕೆ ಅನ್ವಯಿಸುವುದಿಲ್ಲ. ಈ ಗ್ರಹಣವು ಪ್ರಮುಖವಾಗಿ ಯುರೋಪ್ ಮತ್ತು ಗ್ರೀನ್‌ಲ್ಯಾಂಡ್‌ನಂತಹ ಪಾಶ್ಚಿಮಾತ್ಯ ಪ್ರದೇಶಗಳಲ್ಲಿ ಗೋಚರಿಸುತ್ತದೆ.

ಖಗೋಳ ಜಗತ್ತಿನ ಈ ವಿದ್ಯಮಾನವು ಭಾರತದಲ್ಲಿ ಕಾಣಿಸದೇ ಇದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಧನಾತ್ಮಕ ಪ್ರಭಾವವು ಜಗತ್ತಿನಾದ್ಯಂತ ಇರಲಿದೆ. ವಿಶೇಷವಾಗಿ, ಈ ಸೂರ್ಯಗ್ರಹಣವು ನಾಲ್ಕು ರಾಶಿಗೆ ಅಪಾರ ಅದೃಷ್ಟ ಮತ್ತು ಆರ್ಥಿಕ ಪ್ರಗತಿಯನ್ನು ತರಲಿದೆ ಎಂದು ಹೇಳಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದರ ವಿವರ ಇಲ್ಲಿದೆ:

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ಈ ಸೂರ್ಯಗ್ರಹಣವು ಅತ್ಯಂತ ಸುಂದರ ಮತ್ತು ಸುವರ್ಣ ಸಮಯವನ್ನು ಹೊತ್ತು ತರಲಿದೆ. ಆಗಸ್ಟ್‌ನಲ್ಲಿ ಸಂಭವಿಸುವ ಈ ಗ್ರಹಣದ ಪ್ರಭಾವದಿಂದಾಗಿ ಜೀವನದ ಎಲ್ಲಾ ರಂಗಗಳಲ್ಲೂ ಯಶಸ್ಸು ಲಭಿಸಲಿದೆ. ಆರ್ಥಿಕವಾಗಿ ಭಾರಿ ಪ್ರಗತಿ ಕಂಡುಬರಲಿದ್ದು, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಈ ಸಮಯದಲ್ಲಿ ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ, ಎಲ್ಲರೊಂದಿಗೆ ವಿನಮ್ರತೆಯಿಂದ ವರ್ತಿಸುವುದನ್ನು ಕಲಿಯಬೇಕು. ಇದು ನಿಮ್ಮ ಯಶಸ್ಸನ್ನು ಸ್ಥಿರವಾಗಿಡುತ್ತದೆ.

ಕನ್ಯಾ ರಾಶಿ (Virgo):

ಕನ್ಯಾ ರಾಶಿಯ ಜಾತಕದವರಿಗೆ ಇದು ಅತ್ಯಂತ ಅನುಕೂಲಕರ ಮತ್ತು ಸಕಾರಾತ್ಮಕ ಸಮಯವಾಗಿರಲಿದೆ. ಸೂರ್ಯಗ್ರಹಣದ ಶುಭ ಪ್ರಭಾವದಿಂದಾಗಿ ನಿಮ್ಮ ಯೋಚನಾ ಲಹರಿಯಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಅಥವಾ ಬಾಕಿ ಉಳಿದಿದ್ದ ಕೆಲಸಗಳು ಈ ಅವಧಿಯಲ್ಲಿ ಸುಲಭವಾಗಿ ಪೂರ್ಣಗೊಳ್ಳಲಿವೆ. ವೃತ್ತಿಜೀವನದಲ್ಲಿ ಹೊಸ ಮತ್ತು ಉತ್ತಮ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಹಿಂದಿನ ವರ್ಷಗಳಿಗಿಂತ ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಅತ್ಯುತ್ತಮ ಮಟ್ಟದಲ್ಲಿ ಇರಲಿದೆ.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಕುಂಭ ರಾಶಿ (Aquarius):

ಕುಂಭ ರಾಶಿಯವರಿಗೂ ಸಹ ಈ ಸೂರ್ಯಗ್ರಹಣದಿಂದಾಗಿ ಭರಪೂರ ಶುಭ ಫಲಗಳು ದೊರೆಯಲಿವೆ. ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ. ಸ್ಥಗಿತಗೊಂಡಿದ್ದ ಉದ್ಯೋಗ ಅಥವಾ ವ್ಯವಹಾರಗಳು ಮತ್ತೆ ವೇಗವನ್ನು ಪಡೆದುಕೊಳ್ಳಲಿವೆ. ಇದರಿಂದಾಗಿ ನಿಮ್ಮ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬಹಳ ದಿನಗಳಿಂದ ಸಾಲದ ಸುಳಿಗೆ ಸಿಲುಕಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಈ ಸಮಯವು ವರದಾನವಾಗಲಿದ್ದು, ಸಾಲದ ಹೊರೆ ಕಡಿಮೆಯಾಗಿ ನಿರಾಳರಾಗಲಿದ್ದಾರೆ.

ಮೀನ ರಾಶಿ (Pisces):

ಮೀನ ರಾಶಿಯವರ ಪಾಲಿಗೆ ಇದು ಅತ್ಯಂತ ಶ್ರೇಷ್ಠ ಹಾಗೂ ಅದೃಷ್ಟದ ಸಮಯವೆಂದೇ ಹೇಳಬಹುದು. ನೀವು ಕೈ ಇಟ್ಟ ಪ್ರತಿಯೊಂದು ಕೆಲಸದಲ್ಲೂ ಜಯ ನಿಮ್ಮದಾಗಲಿದೆ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದ್ದು, ಬಡ್ತಿ (Promotion) ಹಾಗೂ ಸಂಬಳ ಹೆಚ್ಚಳವಾಗುವ ಯೋಗವಿದೆ. ದೀರ್ಘಕಾಲದಿಂದ ನಿರುದ್ಯೋಗಿಗಳಾಗಿದ್ದವರಿಗೆ ಈ ಅವಧಿಯಲ್ಲಿ ತಕ್ಷಣವೇ ಉತ್ತಮ ಕೆಲಸ ಸಿಗಲಿದೆ. ಇದರೊಂದಿಗೆ ಕುಟುಂಬದಲ್ಲಿ ಯಾವುದಾದರೂ ಒಂದು ದೊಡ್ಡ ಶುಭ ಸುದ್ದಿಯನ್ನು ಕೇಳುವಿರಿ.

ಒಟ್ಟಾರೆಯಾಗಿ ಹೇಳುವುದಾದರೆ, 2026 ರ ಆಗಸ್ಟ್ 12 ರ ಸೂರ್ಯಗ್ರಹಣವು ಭಾರತದಲ್ಲಿ ರಾತ್ರಿ ಹೊತ್ತು ಸಂಭವಿಸುವುದರಿಂದ ಯಾವುದೇ ಧಾರ್ಮಿಕ ನಿಯಮಗಳ ಪಾಲನೆಯ ಅಗತ್ಯವಿಲ್ಲದಿದ್ದರೂ, ಜ್ಯೋತಿಷ್ಯದ ಪ್ರಕಾರ ಮಿಥುನ, ಕನ್ಯಾ, ಕುಂಭ ಮತ್ತು ಮೀನ ರಾಶಿಯವರ ಜೀವನದಲ್ಲಿ ಇದು ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯಲಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Fri, 10 July 26

Follow Us