Kedarnath Temple: ಕೇದಾರನಾಥ ದೇವಸ್ಥಾನದಲ್ಲಿ 228 ಕೆಜಿ ಚಿನ್ನ ನಾಪತ್ತೆ; ಜ್ಯೋತಿರ್ಮಠ ಶಂಕರಾಚಾರ್ಯ ಆರೋಪ

|

Updated on: Jul 15, 2024 | 5:21 PM

ದೆಹಲಿಯಲ್ಲಿ ಮತ್ತೊಂದು ಕೇದಾರನಾಥ ದೇವಾಲಯದ ನಿರ್ಮಾಣದ ಸುದ್ದಿಯ ಬಳಿಕ ಉಂಟಾದ ಗದ್ದಲದ ನಡುವೆಯೇ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಕೇದಾರನಾಥ ದೇವಾಲಯದಲ್ಲಿ 'ಚಿನ್ನದ ಹಗರಣ'ದ ಬಗ್ಗೆ ಆರೋಪ ಮಾಡಿದ್ದಾರೆ. ಏನಿದು ಪ್ರಕರಣ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Kedarnath Temple: ಕೇದಾರನಾಥ ದೇವಸ್ಥಾನದಲ್ಲಿ 228 ಕೆಜಿ ಚಿನ್ನ ನಾಪತ್ತೆ; ಜ್ಯೋತಿರ್ಮಠ ಶಂಕರಾಚಾರ್ಯ ಆರೋಪ
ಕೇದಾರನಾಥ ದೇವಾಲಯ
Follow us on

ಕೇದಾರನಾಥ: ಉತ್ತರಾಖಂಡದ ಗರ್ವಾಲ್ ಹಿಮಾಲಯ ಶ್ರೇಣಿಯಲ್ಲಿರುವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದ್ದಾರೆ. “ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ? ಅಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗಲಿದೆಯೇ? ಹೀಗೇನಾದರೂ ಆದರೆ ಮತ್ತೊಂದು ಹಗರಣ ನಡೆಯಲಿದೆ ಎಂದಿದ್ದಾರೆ.

ಕೇದಾರನಾಥದಲ್ಲಿ 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ. ಈಗ ಇದಕ್ಕೆ ಯಾರು ಹೊಣೆಯೋ ಅವರು ದೆಹಲಿಯಲ್ಲಿ ಕೇದಾರನಾಥವನ್ನು ನಿರ್ಮಿಸುವುದಾಗಿ ಹೇಳುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: Uma Bhagwati Temple: 30 ವರ್ಷಗಳ ಬಳಿಕ ತೆರೆಯಿತು ಪುರಾತನ ಕಾಲದ ಉಮಾ ಭಗವತಿ ದೇವಸ್ಥಾನ; ಏನಿದರ ವಿಶೇಷ?

ದೆಹಲಿಯಲ್ಲಿ ಮತ್ತೊಂದು ಕೇದಾರನಾಥ ದೇಗುಲ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಅವರ ಈ ಹೇಳಿಕೆ ಬಂದಿದೆ. ದೆಹಲಿಯ ಕೇದಾರನಾಥ ದೇವಾಲಯದ ವಿರುದ್ಧ ಅರ್ಚಕರು ಪ್ರತಿಭಟನೆ ನಡೆಸಿದರು. ಜುಲೈ 10ರಂದು ದೆಹಲಿಯಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು.


ಇಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಸ್ವಾಮಿ ಅವಿಮುಕ್ತೇಶ್ವರಾನಂದ, ನೀವು ಮೋಸ ಹೋಗಿದ್ದು, ಮತ್ತೆ ಮಹಾರಾಷ್ಟ್ರ ಸಿಎಂ ಆಗುತ್ತೀರಿ ಎಂದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಬಿಜೆಪಿ-ಎನ್‌ಸಿಪಿ-ಶಿವಸೇನಾ ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳಿಗೆ ಗೆಲುವು

ನಾವೆಲ್ಲರೂ ಸನಾತನ ಧರ್ಮದ ಅನುಯಾಯಿಗಳು, ನಮಗೆ ಪಾಪ ಮತ್ತು ಪುಣ್ಯ ಎಂಬ ವ್ಯಾಖ್ಯಾನವಿದೆ. ದ್ರೋಹವೇ ದೊಡ್ಡ ಪಾಪ. ಉದ್ಧವ್ ಠಾಕ್ರೆ ಅವರು ಮೋಸ ಹೋಗಿದ್ದಾರೆ, ಅವರು ಮಾಡಿದ ದ್ರೋಹದಿಂದ ನಮಗೆಲ್ಲ ನೋವಾಗಿದೆ ಎಂದು ನಾನು ಅವರಿಗೆ ಹೇಳಿದೆ. ಅವರು ಮತ್ತೆ ಮಹಾರಾಷ್ಟ್ರದ ಸಿಎಂ ಆಗುವವರೆಗೆ ನಮ್ಮ ನೋವು ನಿವಾರಣೆಯಾಗುವುದಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ