Kannada News Spiritual according to Acharya Chanakya in Chanakya Niti any person before marrying should find these 4 qualities in your life partner
Marriage: ಮದುವೆಯಾಗುವ ಯುವತಿ ಬಾಳಸಂಗಾತಿಯಿಂದ ಈ ನಾಲ್ಕು ಗುಣ ವಿಶೇಷಗಳನ್ನು ಬಯಸುತ್ತಾಳೆ! ಅವು ಯಾವುವು?
Wedding: ಮನಸ್ಸಿನಂತೆ ಮಹಾದೇವ ಎಂಬಂತೆ ಮನಸ್ಸು ಹೇಗಿದೆ ಎಂಬುದನ್ನ ಅರಿತು, ಮನುಷ್ಯ ಇಂತಹವನೇ ಎಂದು ನಿರ್ಧರಿಸಬಹುದು. ಕೆಲವೊಮ್ಮೆ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆದರೆ ಬಾಳ ಸಂಗಾತಿಯ ಆಯ್ಕೆಗೆ ಮುನ್ನ ಮನ ಬಿಚ್ಚಿ, ಬಹಿರಂಗವಾಗಿ ಮಾತನಾಡಿ. ಸಂಗಾತಿಯ ಮನದಲ್ಲಿ ಏನಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.
ಯುವತಿ ಮದುವೆಯಾಗಲು ಯುವಕರಿಂದ ಈ ನಾಲ್ಕು ಗುಣ ವಿಶೇಷಗಳನ್ನು ಬಯಸುತ್ತಾಳೆ! ಅವು ಯಾವುವು?
Follow us on
ಚಾಣಕ್ಯನ ನೀತಿ (Acharya Chanakya) ಶಾಸ್ತ್ರದಲ್ಲಿ ಬರುವ ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ-ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ನೀವೇನಾದರೂ ವಿವಾಹವಾಗುವ ಬಗ್ಗೆ ಆಲೋಚಿಸುತ್ತಿದ್ದರೆ ನಿಮ್ಮ ಭಾಗ್ಯದಾತನನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ನಿಮ್ಮ ಹುಡುಗನಲ್ಲಿ ನಿರ್ದಿಷ್ಟವಾಗಿ ಈ ನಾಲ್ಕು ಗುಣಗಳನ್ನು ಪರೀಕ್ಷಿಸಿ, ಖಚಿತಪಡಿಸಿಕೊಳ್ಳಿ.
ಉತ್ತಮ ವರ ದೊರೆತರೆ ಯುವತಿಗದು ಜೀವನಪೂರ್ತಿ ಮಹಾಭಾಗ್ಯವೇ ಸರಿ ಅನ್ನುತ್ತಾರೆ ಹಿರಿಯರು. ಹಾಗಾಗಿ ಸರಿಯಾದ ಜೋಡಿ ಸಿಗದಿದ್ದರೆ ಆ ಯುವತಿಯ ಉಳಿದ ಬಾಳು ನರಕವೇ ಸರಿ. ಅದು ಅಸ್ತವ್ಯಸ್ಥ ಜೀವನವಾದೀತು. ಅದಕ್ಕೆ ಮದುವೆಯಾಗುವ ಮುನ್ನ ಕೈಹಿಡಿಯುವ ವರನ ಬಗ್ಗೆ ಯುವತಿ ಮತ್ತು ಯುವತಿಯ ಮನೆಯವರು ಹುಡುಗನ ಕುರಿತು ತುಂಬಾ ಆಲೋಚನೆ ಮಾಡಬೇಕಾದೀತುನ ಎಂದು ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ನಿವೇದಿಸಿಕೊಂಡಿದ್ದಾನೆ. ಆ ನಾಲ್ಕು ಗುಣ ವಿಶೇಷಗಳು ಯಾವುವು ಎಂದು ನೊಡುವುದಾದರೆ
ತಾಳ್ಮೆ, ಸಹನೆಯ ಪರೀಕ್ಷೆ: ಜೀವನದಲ್ಲಿ ಅದೆಷ್ಟೋ ಏರಿಳಿತಗಳು ಇರುತ್ತವೆ. ಅವನ್ನು ಎದುರಿಸಲು ಸಹನೆ ಎಂಬುದು ಬಹುಮುಖ್ಯ ಅಸ್ತ್ರವಾದೀತು. ಜೀವನದಲ್ಲಿ ಶಾಂತಚಿತ್ತದಿಂದ ತಾಳ್ಮೆ- ಸಹನೆಯೊಂದಿಗೆ ಎಂತಹುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು. ಕಷ್ಟದ ಸಮಯದಲ್ಲಿಯೂ ಪ್ರತಿಯೊಬ್ಬರನ್ನೂ ನಿಪುಣತೆಯಿಂದ ನಿಭಾಯಿಸುವ ವ್ಯಕ್ತಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಅಂತಹ ವ್ಯಕ್ತಿ ಬಾಳ ಸಂಗಾತಿಯಾದರೆ ಜೀವನ ಸುಲಲಿತವಾಗಿರುತ್ತದೆ. ಅಂತಹ ವ್ಯಕ್ತಿ ನಿಜಕ್ಕೂ ಅದೃಷ್ಟಶಾಲಿಯೇ ಸರಿ. ಅದಕ್ಕೆ ಚಾಣಕ್ಯ ಹೇಳಿರುವುದು ಮದುವೆಯಾಗುವ ವ್ಯಕ್ತಿಯಲ್ಲಿ ತಾಳ್ಮೆ, ಸಹನೆಯ ಇದೆಯಾ ಎಂದು ಪರೀಕ್ಷಿಸಬೇಕು.
ವ್ಯವಹಾರ ಪ್ರಯೋಗ: ಇದರಲ್ಲಿ ಸಮರ್ಥನಾಗಿರಬೇಕು. ಬಿಲ್ಲಿನಿಂದ ಬಿಟ್ಟ ಬಾಣ, ಬಾಯಿಂದ ಜಾರಿದ ಮಾತು ಮರಳಿ ಬಾರದು. ಅಂದರೆ ಮಾತನಾಡುವ ಮುನ್ನ ಯೋಚಿಸಿ, ಆಲೋಚನೆ ಮಾಡಿ ಮಾತನಾಡಬೇಕು. ಹಾಗಾಗಿ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಸಂಗಾತಿಯು ಬೇರೆಯವರ ಜೊತೆ ನಡೆದುಕೊಳ್ಳುವ ರೀತಿ ನೀತಿ, ಮಾತನಾಡುವ ವಿಧಾನಗಳನ್ನು ಮೊದಲೇ ಗಮನಿಸಬೇಕು. ಸಂಗಾತಿ ಯಾರೊಂದಿಗೆ ಎಷ್ಟು, ಹೇಗೆ, ಎಲ್ಲಿ ಮಾತನಾಡಬಲ್ಲ ಎಂಬುದು ಅರಿಯಬೇಕು. ಮಧುರವಾದ ಮಾತುಗಳಿಂದ ಯಾರನ್ನೇ ಆಗಲಿ ಗೆಲ್ಲಬಹುದು. ಮಾತಿನ ಆಧಾರದ ಮೇಲೆ ಒ ಳ್ಳೆಯದು/ ಕೆಟ್ಟದ್ದು ಎಂಬುದು ನಿರ್ಧರಿತವಾಗುತ್ತದೆ.
ಮನವರಿತು ಮುನ್ನಡೆಯಿರಿ: ಮನಸ್ಸಿನಂತೆ ಮಹಾದೇವ ಎಂಬಂತೆ ಮನಸ್ಸು ಹೇಗಿದೆ ಎಂಬುದನ್ನ ಅರಿತು, ಮನುಷ್ಯ ಇಂತಹವನೇ ಎಂದು ನಿರ್ಧರಿಸಬಹುದು. ಕೆಲವೊಮ್ಮೆ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆದರೆ ನೀವು ನಿಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಮನ ಬಿಚ್ಚಿ, ಬಹಿರಂಗವಾಗಿ ಮಾತನಾಡಿ. ಸಂಗಾತಿಯ ಮನದಲ್ಲಿ ಏನಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಎಲ್ಲೂ, ಎಂತಹುದೇ ಒತ್ತಡಕ್ಕೆ ಸಿಲುಕಬೇಡಿ. ಏಳು ಹೆಜ್ಜೆ ಹಾಕುವ ಮೊದಲು ಮುಕ್ತವಾಗಿ ಆಲೋಚಿಸಿ ಮುಂದಿನ ಹೆಜ್ಜೆಯಿಡಿ. ಒತ್ತಡದಿಂದ ಮದುವೆಗೆ ಒಪ್ಪಬೇಡಿ. ಅಂತಹ ವಿವಾಹ ಬಂಧ ಬಹು ಕಾಲ ಊರ್ಜಿತವಾಗದು
ಉನ್ನತ ಕುಲೀನ ಮನೆತನದ ಸಂಗಾತಿಯನ್ನು ಆರಿಸಿಕೊಳ್ಳಿ: ಆಚಾರ್ಯ ಚಾಣಕ್ಯ ಹೇಳುವಂತೆ ಯಾವಾಗಲೂ ಒಳ್ಳೇಯ ಕುಟುಂಬ, ಮನೆತನದ ಸಂಗಾತಿಯನ್ನೇ ಮದುವೆಯಾಗಬೇಕು. ವಿವಾಹವಾಗುವ ಸಂಗಾತಿಯ ಅಂದಚೆಂದಕ್ಕಿಂತ ಗುಣ, ಉನ್ನತ ಕುಟುಂಬಕ್ಕೆ ಅಗ್ರ ಪ್ರಾಶಸ್ತ್ಯ ನೀಡಬೇಕು. ತಿಳಿವಳಿಕೆ, ಜ್ಞಾನಾರ್ಜನೆ ಹೇಗಿದೆ ಎಂಬುದನ್ನು ಅರಿತು ಮುನ್ನಡೆಯಬೇಕು. ಆಗಲೇ ಇಬ್ಬರ ಬದುಕೂ ಹಸನಾದೀತು. (Source)