ಚಾಣಕ್ಯ ನೀತಿ : ಅಪ್ಪಿತಪ್ಪಿಯೂ ಈ 5 ಕಡೆ ಮನೆ ಕಟ್ಟಬೇಡಿ, ಮಹತ್ವದ ವಿವರಗಳು ಇಲ್ಲಿವೆ
ದಯಾಮಯಿ ಮತ್ತು ದಾನಶೀಲರು ವಾಸಿಸುವ ಪ್ರದೇಶದಲ್ಲಿ ಮನೆ ನಿರ್ಮಿಸಬೇಕು. ಅಂತಹ ಸ್ಥಳದಲ್ಲಿ ವಾಸಿಸುವುದು ನಿಮ್ಮಲ್ಲೂ ಅದೇ ಭಾವ ಮೂಡುತ್ತದೆ.
Chanakya Niti: ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ವ್ಯಕ್ತಿಯ ಜೀವನದಲ್ಲಿ ಅನುಸರಿಸಬೇಕಾದ ನೀತಿಗಳು, ಜೀವನ ಪಾಠಗಳು ಮತ್ತು ಇನ್ನೂ ನಾನಾ ಕ್ಷೇತ್ರಗಳ ಬಗ್ಗೆ ವಿವರಿಸಿದ್ದಾರೆ. ಜೀವನದಲ್ಲಿ ನಮ್ಮ ಪ್ರಗತಿಗೆ ಚಾಣಕ್ಯನ ಈ ವಿಧಾನಗಳು ತುಂಬಾ ಸಹಾಯಕವಾಗಿವೆ. ಒಬ್ಬ ವ್ಯಕ್ತಿ ಮನೆ ಕಟ್ಟಬೇಕೆಂದಿದ್ದರೆ ಈ 5 ಕಡೆ ಅಪ್ಪಿತಪ್ಪಿಯೂ ಕಟ್ಟಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಜೀವನೋಪಾಯದ ವಿಧಾನಗಳು: ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಜೀವನೋಪಾಯ ಪ್ರಾಪ್ತಿಯಿರುವ ಪ್ರದೇಶದಲ್ಲಿ ಮಾತ್ರವೇ ಮನೆ ನಿರ್ಮಿಸಬೇಕೆಂದು ಉಲ್ಲೇಖಿಸುತ್ತಾನೆ. ಉದ್ಯೋಗ ಇಲ್ಲದ ಕಡೆ ಮನೆ ಕಟ್ಟಿದರೆ ಜೀವನ ಪೂರ್ತಿ ಕೆಲಸ ಹುಡುಕಬೇಕಾಗುತ್ತದೆ.
ಮೌಲ್ಯ ಇಲ್ಲದ ಕಡೆ ಬೇಡ: ಸರಕಾರ, ಕಾನೂನು, ಸಮಾಜಕ್ಕೆ ಬೆಲೆ ಇಲ್ಲದ ಕಡೆ ಮನೆ ಕಟ್ಟಬಾರದು. ಅಂತಹ ಸ್ಥಳಗಳಲ್ಲಿ ಮನೆ ನಿರ್ಮಿಸುವುದು ಕಷ್ಟಗಳಿಗೆ ಕಾರಣವಾಗುತ್ತದೆ. ಅಲ್ಲಿನ ಜನರು ನಿರಂಕುಶ ಮತ್ತು ಅರಾಜಕತೆ ಹೊಂದಿರುತ್ತಾರೆ. ಅದಕ್ಕೇ.. ಭಯ, ಮೌಲ್ಯಗಳು ಇಲ್ಲದ ಮನೆ ಕಟ್ಟಬೇಡಿ.
ಸಹಾನುಭೂತಿ ಮತ್ತು ದಾನ: ದಾನ ಧರ್ಮ ಮತ್ತು ದಯಾ ಗುಣ ಹೊಂದಿರುವ ಜನರಿಂದ ಸುತ್ತುವರೆದಿರುವ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಬಹುದು. ಸನಾತನ ಧರ್ಮದಲ್ಲಿ ದಾನ ಧರ್ಮಗಳು ಬಹಳ ಮುಖ್ಯವಾಗಿವೆ. ದಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಅಂಥವರು ಇರುವ ಜಾಗದಲ್ಲಿ ಮನೆ ಕಟ್ಟಬೇಕು.
ತ್ಯಾಗ: ದಯಾಮಯಿ ಮತ್ತು ದಾನಶೀಲರು ವಾಸಿಸುವ ಪ್ರದೇಶದಲ್ಲಿ ಮನೆ ನಿರ್ಮಿಸಬೇಕು. ಅಂತಹ ಸ್ಥಳದಲ್ಲಿ ವಾಸಿಸುವುದು ನಿಮ್ಮಲ್ಲೂ ಅದೇ ಭಾವ ಮೂಡುತ್ತದೆ.
ಗೌರವ ಇರುವ ಜಾಗ: ಎಲ್ಲಿ ಗೌರವವಿದೆಯೋ, ಎಲ್ಲಿ ಅವಮಾನದ ಭಯವಿಲ್ಲವೋ ಅಲ್ಲಿ ಮನೆ ಕಟ್ಟಿಕೊಳ್ಳಿ ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡಿದರು. ಅವಮಾನವಾಗುವ ಕಡೆಗಳಲ್ಲಿ ಮನೆ ಕಟ್ಟಬಾರದು. ಇಂತಹ ಸ್ಥಳಗಳಲ್ಲಿ ಮನೆ ಕಟ್ಟಿದರೆ ನೆಮ್ಮದಿಯಿಂದ, ನಿರ್ಭಯವಾಗಿ ಬದುಕಲು ಸಾಧ್ಯವಾಗುವುದಿಲ್ಲ.