ಮನುಷ್ಯ ತನ್ನ ಜೀವನಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ, ಹೇಗೆ? ಇಲ್ಲಿದೆ ವಿವರಣೆ
Garuda Puranam: ಒಬ್ಬ ವ್ಯಕ್ತಿಯು ತನ್ನ ಜೀವನಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ ಎಂದು ಗರುಡ ಪುರಾಣವು ವಿವರಿಸುತ್ತದೆ. ಇಂತಹ ಹಲವು ಮಾಹಿತಿಗಳನ್ನು ಗರುಡ ಪುರಾಣದಲ್ಲಿ ನೀಡಲಾಗಿದೆ. ಇದನ್ನು ಪ್ರತಿಯೊಬ್ಬ ಮನುಷ್ಯನು ಓದಲೇಬೇಕು. ಈ ಪುರಾಣದಲ್ಲಿ ಜೀವನ ಮಾಡಲು ಹಲವಾರು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಗರುಡ ಪುರಾಣದಲ್ಲಿ ಮಾನವರು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ.
ಹಿಂದೂ ಪುರಾಣ ಗ್ರಂಥಗಳಲ್ಲಿ ಅನೇಕ ಜೀವನ ವಿಧಾನಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಅಳವಡಿಸಿಕೊಂಡರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಬದಲಾಯಿಸಬಹುದು. ಗರುಡ ಪುರಾಣವನ್ನು ಹಿಂದೂ ಧರ್ಮದ 18 ಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರ ಪ್ರಧಾನ ದೇವತೆ ವಿಷ್ಣು. ಇಂತಹ ಹಲವು ಮಾಹಿತಿಗಳನ್ನು ಗರುಡ ಪುರಾಣದಲ್ಲಿ ನೀಡಲಾಗಿದೆ ಇದನ್ನು ಪ್ರತಿಯೊಬ್ಬ ಮನುಷ್ಯನು ಓದಲೇಬೇಕು. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯು ತನ್ನ ಜೀವನಕ್ಕೆ (Life) ತಾನೇ ಜವಾಬ್ದಾರನಾಗಿರುತ್ತಾನೆ ಎಂದು ಗರುಡ ಪುರಾಣವು (Garuda Purana) ವಿವರಿಸುತ್ತದೆ. ಈ ಪುರಾಣದಲ್ಲಿ ಜೀವಿಸುವುದಕ್ಕಾಗಿ ಕೆಲವು ನಿಯಮಗಳನ್ನು ಸಹ ಉಲ್ಲೇಖಿಸಲಾಗಿದೆ. ಜೀವನದಲ್ಲಿ ನಾವು ಯಾವ ಕೆಲಸಗಳನ್ನು ಮಾಡಬೇಕು, ಯಾವ ಕೆಲಸಗಳನ್ನು ಮಾಡಬಾರದು (Bad Habits) ಎಂಬುದನ್ನೂ ತಿಳಿಸಲಾಗಿದೆ. ಗರುಡ ಪುರಾಣದಲ್ಲಿ ಮಾನವರು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ (Spiritual).
Garuda Purana: ಗರುಡ ಪುರಾಣದ ಪ್ರಕಾರ ಏನು ಮಾಡಬಾರದು
Garuda Purana: ಸ್ಮಶಾನದಲ್ಲಿ ದೇಹ ದಹನದಿಂದ ಬರುವ ಹೊಗೆಯಿಂದ ದೂರವಿರಿ – ಗರುಡ ಪುರಾಣದ ಪ್ರಕಾರ, ಮೃತದೇಹವನ್ನು ಸ್ಮಶಾನದಲ್ಲಿ ಸುಡುವಾಗ, ಹೊಗೆಯಿಂದ ದೂರವಿರಬೇಕು. ಏಕೆಂದರೆ ಮೃತ ದೇಹವನ್ನು ಸುಡುವಾಗ ಹೊಗೆಯೊಂದಿಗೆ ವಿಷಕಾರಿ ವಸ್ತುಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಈ ವಿಷಕಾರಿ ಅಂಶಗಳು ಅನೇಕ ರೀತಿಯ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ. ಇದರ ಸಮೀಪದಲ್ಲಿ ಜನ ಉಸಿರಾಡಿದಾಗ ಇವು ದೇಹವನ್ನು ಸೇರುತ್ತವೆ.
Garuda Purana: ನಿದ್ದೆಯಿಂದ ತಡವಾಗಿ ಏಳುವುದು – ಗರುಡ ಪುರಾಣದ ಪ್ರಕಾರ, ನೀವು ಬೆಳಿಗ್ಗೆ ಎದ್ದೇಳದೆ ದೀರ್ಘಾಯುಷ್ಯವನ್ನು ಪಡೆಯಬೇಕಾದರೆ.. ನಿಮಗೆ ಬೆಳಗಾಗುವವರೆಗೆ ಮಲಗುವ ಅಭ್ಯಾಸವಿದ್ದರೆ, ಆ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಬೆಳಗಿನ ಗಾಳಿಯು ಶುದ್ಧವಾಗಿರುತ್ತದೆ. ಈ ಗಾಳಿಯು ಮನುಷ್ಯರನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
Garuda Purana: ರಾತ್ರಿಯಲ್ಲಿ ಮೊಸರು ತಿನ್ನುವುದು – ಗರುಡ ಪುರಾಣದ ಪ್ರಕಾರ ರಾತ್ರಿಯಲ್ಲಿ ಮೊಸರು ಅಥವಾ ಮೊಸರಿನಿಂದ ಮಾಡಿದ ಯಾವುದನ್ನಾದರೂ ತಿನ್ನುವಂತಿಲ್ಲ. ರಾತ್ರಿ ಮೊಸರು ತಿಂದರೆ ಹಲವಾರು ರೋಗಗಳು ಬರುತ್ತವೆ. ಇದು ವ್ಯಕ್ತಿಯ ಜೀವಿತಾವಧಿಯ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಅಲ್ಲದೆ ರಾತ್ರಿಯಲ್ಲಿ ಉಳಿದ ತಂಗಳು ಮಾಂಸವನ್ನು ತಿನ್ನಬೇಡಿ.
Also read: June 2024 Festival Calendar – ಜೂನ್ 2024 ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
Garuda Purana: ನಿದ್ರೆಗೆ ಸರಿಯಾದ ದಿಕ್ಕು ಯಾವುದು- ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಂತಹ ತಪ್ಪು ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ. ಕೋಣೆಗೆ ಪ್ರವೇಶಿಸುವಾಗ.. ಆ ಕೋಣೆಯಲ್ಲಿ ಸ್ವಲ್ಪ ಬೆಳಕು ಇರಬೇಕು.. ಆದರೆ ಹಾಸಿಗೆಯ ಮೇಲೆ ಮಲಗಿದ ನಂತರ ಕೋಣೆ ಕತ್ತಲೆಯಾಗಿರಬೇಕು. ಇದಲ್ಲದೆ, ಮುರಿದ ಹಾಸಿಗೆಯ ಮೇಲೆ ಮಲಗುವುದು ಒಳ್ಳೆಯದಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.
Garuda Purana: ಈ ಮಾರ್ಗವನ್ನು ಅಳವಡಿಸಿಕೊಳ್ಳಬೇಡಿ – ಗರುಡ ಪುರಾಣದ ಪ್ರಕಾರ ತಪ್ಪು ದಾರಿಯಲ್ಲಿರುವ ನಡೆಯುವ ವ್ಯಕ್ತಿಯು ಅಂತಹ ತಪ್ಪು ಕ್ರಿಯೆಗಲಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡಿದ್ದರೂ ಅಂತಹುದೇ ಪಾಪ ಮಾಡುತ್ತಲೇ ಇರುತ್ತಾನೆ. ಅದು ಸರ್ವಥಾ ಸಾಧುವಲ್ಲ. ಅದೇ ಸಮಯದಲ್ಲಿ ಮಹಿಳೆಯರು, ಮಕ್ಕಳು, ಮಾನವೀಯತೆಯ ಬಗ್ಗೆ ತಪ್ಪು ಕಲ್ಪನೆ/ ಆಲೋಚನೆಗಳನ್ನು ಹೊಂದಿರುವ ಜನರು… ತಮ್ಮ ಜೀವಿತಾವಧಿಯನ್ನು ಸ್ವಯಂ ಕಡಿಮೆ ಮಾಡಿಕೊಳ್ಲುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)