ದೇವ ವೃಕ್ಷ ಅರಳಿಮರದ ನೆರಳು ಮನೆಯ ಮೇಲೆ ಬೀಳುತ್ತಿದೆಯಾ? ವಾಸ್ತು ಪ್ರಕಾರ ಅದರ ಪ್ರಭಾವ ಏನು ಎಂಬುದನ್ನು ತಿಳಿಯಿರಿ

importance of peepal tree: ಅರಳಿ ಮರದ ತೊಗಟೆಯು ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧವಾಗಿದೆ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು.

ದೇವ ವೃಕ್ಷ  ಅರಳಿಮರದ ನೆರಳು ಮನೆಯ ಮೇಲೆ ಬೀಳುತ್ತಿದೆಯಾ? ವಾಸ್ತು ಪ್ರಕಾರ ಅದರ ಪ್ರಭಾವ ಏನು ಎಂಬುದನ್ನು ತಿಳಿಯಿರಿ
ದೇವ ವೃಕ್ಷ ಅರಳಿ ಮರದ ನೆರಳು ಮನೆಯ ಮೇಲೆ ಬೀಳುತ್ತಿದೆಯಾ? ವಾಸ್ತು ಪ್ರಕಾರ ಅದರ ಪ್ರಭಾವ ಏನು ಎಂಬುದನ್ನು ತಿಳಿಯಿರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 27, 2021 | 7:38 AM

ಹಿಂದೂ ಧರ್ಮದಲ್ಲಿ ಅರಳಿಮರಕ್ಕೆ ಬಹಳ ಮಹತ್ವದ ಸ್ಥಾನವಿದೆ. ಅದನ್ನು ದೇವ ವೃಕ್ಷ ಎಂದು ಪೂಜಿಸುವುದೂ ಉಂಟು. ಆದರೆ ಪವಿತ್ರವಾದ ಅರಳಿಮರವನ್ನು ಮನೆಯ ಆಸುಪಾಸಿನಲ್ಲಿ ಬೆಳೆಸುವ ಹಾಗಿಲ್ಲ. ಅದರ ನೆರಳು ಸಹ ವಾಸ ಸ್ಥಾನವಾದ ಮನೆಯ ಮೇಲೆ ಬಳೀಬಾರದು ಅನ್ನುತ್ತದೆ ವಾಸ್ತು ಶಾಸ್ತ್ರ. ಆದರೆ ಈ ಅರಳಿಮರಕ್ಕೆ ಮಣ್ಣು, ಗೊಬ್ಬರ ಬೇಕು ಬೇಕು, ಬೇರು ಬಿಡಲು ಇಂತಿಷ್ಟೇ ಜಾಗ ಇರಬೇಕು ಅಂತೇನೂ ಇಲ್ಲ. ಅದು ಮನೆಯ ಸಣ್ಣ ಬಿರುಕಿನಲ್ಲಿಯೂ ಸೊಂಪಾಗಿ ಬೆಳೆದುಬಿಡಬಲ್ಲದು. ಹಾಗಿದ್ದರೆ ಅಕಸ್ಮಾತ್ ಅರಳಿಮರ ನಿಮ್ಮ ಮನೆಯಲ್ಲಿ ಅಥವಾ ಮನೆಯ ಸಮೀಪ ಬೆಳೆದಿದ್ದರೆ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ದೇವ ವೃಕ್ಷ ಅರಳಿಮರದ ಬಗ್ಗೆ ತಿಳಿದಿರಲಿ ಈ ಸಂಗತಿಗಳು: ದೇವ ವೃಕ್ಷ ಅರಳಿ ಮರ ಯಾವುದೇ ಸಂದರ್ಭದಲ್ಲಿಯೂ ಮನೆಯ ಬಳಿ ಬೆಳೆಸಬಾರದು. ಇದರಿಂದ ಅನೇಕ ಸಮಸ್ಯೆಗಳು ಬೆಳೆಯುತ್ತವೆ. ವಾಸ್ತವವಾಗಿ ಅರಳಿ ಮರ ವನ್ನು ದೇವ ವೃಕ್ಷ ಎಂದು ಪೂಜಿಸುವುದೂ ಉಂಟು. ಏಕೆಂದರೆ ಅದರಲ್ಲಿ ದೇವಾನುದೇವತೆಗಳು ವಾಸಿಸುತ್ತಿರುತ್ತಾರೆ. ಸ್ವಾಭಾವಿಕವಾಗಿ ಅರಳಿ ಗಿಡ ತನ್ನಷ್ಟಕ್ಕೇ ತಾನೇ ಮನೆಯ ಬಳಿ ಬೆಳೆದಿದ್ದರೆ ಅದನ್ನು ಅತ್ಯಂತ ಉಚಿತವಾಗಿ ಅಲ್ಲಿಂದ ಕಿತ್ತುಹಾಕಬೇಕು.

ಅದಕ್ಕೂ ಮುಂಚೆ ಆ ಅರಳಿ ಗಿಡಕ್ಕೆ ಪೂಜೆ ಪುನಸ್ಕಾರ ಮಾಡುವುದು ಔಚಿತ್ಯಪೂರ್ಣವಾಗಿರುತ್ತದೆ. ಹೀಗೆ ಮರವನ್ನು ಬೇರೆಡೆ ಸ್ಥಳಾಂತರಿಸುವಾಗ ಅದರ ರೆಂಬೆಕೊಂಬೆಗಳನ್ನು ಕೀಳದಂತೆ ಧ್ಯಾನವಹಿಸಿ. ಏಕೆಂದರೆ ಶಾಸ್ತ್ರಗಳ ಪ್ರಕಾರ ಅರಳಿಮರದಲ್ಲಿ ಮುಖ್ಯವಾಗಿ ಬ್ರಹ್ಮ ನೆಲೆಸಿರುತ್ತಾನೆ. ಅರಳಿಮರದ ರೆಂಬೆಕೊಂಬೆಗಳನ್ನುಕತ್ತರಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಯಾಗುತ್ತದೆ. ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ ಧನ ಹಾನಿಯೂ ಸಂಭವಿಸುತ್ತದೆ.

ಮನೆಯ ಪೂರ್ವ ದಿಕ್ಕಿನಲ್ಲಿ ಅರಳಿಮರ ಇರಬಾರದು. ಅಕಸ್ಮಾತ್ ಮನೆಯ ಬಳಿ ಅರಳಿಮರ ಬೆಳೆದಿದ್ದರೆ ಅದನ್ನು ಕಿತ್ತು ಬೇರೆ ಕಡೆ ನೆಡಬೇಕು ಅಂದರೆ ಅದನ್ನು ದೇವಸ್ಥಾನಗಳ ಬಳಿ ನೆಡಬೇಕು. ಅದಕ್ಕೂ ಮುನ್ನ ಭಕ್ತಭಾವದಿಂದ ಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಹಿರಿಯ ಜೀವಗಳಿಗೆ ಆಪತ್ತು ಉಂಟಾಗುತ್ತದೆ.

 know peepal tree importance and benefits in kannada

ದೇವ ವೃಕ್ಷ ಅರಳಿ ಮರದ ಬಗ್ಗೆ ತಿಳಿದಿರಲಿ ಈ ಸಂಗತಿಗಳು

ಯಾರ ಮನೆಯ ಮೇಲೆ ಅರಳಿಮರದ ಛಾಯೆ ಬೀಳುತ್ತದೆಯೋ ಆ ಮನೆಯಲ್ಲಿ ಉನ್ನತಿ ಕುಂಠಿತವಾಗುತ್ತದೆ. ಅಂತಹ ಮನೆಗಳಲ್ಲಿ ಸದಾ ಕಲಹಗಳು ಉಂಟಾಗುತ್ತಿರುತ್ತವೆ. ಸಾಮಾನ್ಯವಾಗಿ ಅರಳಿಮರ ಬೃಹದಾಕಾರವಾಗಿ, ಸ್ವಚ್ಚಂದವಾಗಿ ಬೆಳೆಯುವ ಮರ. ಆದರೆ ಮನೆಗಳ ಸಂದು, ಬಿರುಕುಗಳಲ್ಲಿ ಬೆಳೆಯಬೇಕು ಅಂದರೆ ಅದರ ಬೆಳವಣಿಗೆ ಸಂಕುಚಿಗೊಳ್ಳುತ್ತದೆ. ಅದರ ಸ್ವಾತಂತ್ರ್ಯಹರಣವಾದಂತಾಗುತ್ತದೆ.

ಇದರಿಂದ ಆ ಮನೆಯಲ್ಲಿರುವವರ ಸ್ವಚ್ಚಂದ ಬದುಕಿಗೂ ಮಾರಕವಾಗುತ್ತದೆ. ಆ ಕುಟುಂಬಸ್ಥರ ಆಯಸ್ಸು ಸಹ ಕುಂಠಿತಗೊಳ್ಳುತ್ತದೆ. ಕುಟುಂಬಸ್ಥರ ವಿಕಸನದಲ್ಲಿಯೂ ಈ ಅರಳಿಮರ ಬಾಧಕವಾಗುತ್ತದೆ. ಹಾಗಾಗಿ ಮನೆಯ ಬಳಿ ಅರಳಿಮರ ಬೆಳೆಯುವುದನ್ನು ತಪ್ಪಿಸಿ.

ದೇವ ವೃಕ್ಷವಾದ ಅರಳಿಮರವು ಮೊರೇಸೀ ಕುಟುಂಬಕ್ಕೆ ಸೇರಿದ ಮರ (ಫೈಕಸ್ ರಿಲಿಜಿಯೋಸ ಇದರ ವೈಜ್ಞಾನಿಕ ಹೆಸರು). ಅಶ್ವತ್ಥ ವೃಕ್ಷ ಪರ್ಯಾಯ ನಾಮ. ಈ ಮರದ ಉಗಮ ಸ್ಥಾನ ಭಾರತವಾಗಿದೆ. ಅತ್ಯಂತ ದೀರ್ಘವಾಗಿ ಹಲವು ಶತಮಾನಗಳ ಕಾಲ ಇದು ಜೀವಂತವಾಗಿದ್ದ ದಾಖಲೆಗಳಿವೆ. ವಿದುರಾಶ್ವತ್ಥದಲ್ಲಿರುವ ಅರಳಿಮರವೂ ಬಹಳ ಹಳೆಯದು. ಅರಳಿಯ ಎಳೆಯ ಎಲೆ ತಾಮ್ರ ವರ್ಣದ್ದು, ಬಲಿತ ಎಲೆ ಹಸಿರಾಗಿರುತ್ತದೆ.

ಸ್ವತಂತ್ರ ಮರವಾಗಿ, ಹೆಮ್ಮೆರವಾಗಿ ಬೆಳೆಯುತ್ತದೆ. ದೊಡ್ಡ ಪ್ರಮಾಣದಲ್ಲಿ ವಿಶಾಲವಾಗಿ ಇದರ ಕೊಂಬೆಗಳು ಹರಡಿಕೊಳ್ಳುತ್ತವೆ. ಇದು ನಿತ್ಯಹರಿದ್ವರ್ಣದ ಮರ, ಬುದ್ಧದೇವನಿಗೆ ಜ್ಞಾನೋದಯವಾದ ಬುದ್ಧಗಯದಲ್ಲಿರುವ ಬೋಧಿವೃಕ್ಷದ ಮತ್ತೊಂದು ಹೆಸರು ಅರಳಿಮರ. ಹಿಂದುಗಳಿಗೂ, ಬೌದ್ಧರಿಗೂ ಪವಿತ್ರವಾದ ಈ ಮರ 10-30 ಮೀ ಎತ್ತರ ಬೆಳೆಯಬಲ್ಲುದು.

ಹಿಂದೂ ಧರ್ಮೀಯರು ಇದನ್ನು ಪವಿತ್ರವಾದ ಮರವೆಂದು ಪೂಜೆ ಮಾಡುವರು. ನೆರಳಿಗಾಗಿಯೂ ಬೆಳೆಸಬಹುದು. ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ.

ವಿಶೇಷಗಳು: ಆಮ್ಲಜನಕದ ಆಗರ: ‘ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಾಮುಖ್ಯವಾದ ಪ್ರಭೇದ. ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲಿ ಈ ಮರಗಳ ಕೊಡುಗೆ ಮಹತ್ವದ್ದು. ಇದು ಬಿಟ್ಟರೆ ಅಮೆರಿಕ ​ಮೂಲದ ಮಹಾಗನಿ (mahogany) ಎಂಬ ಮರವೂ ಬಹುತೇಕ ಇದೇ ರೀತಿಯ ಸಸ್ಯ ಗುಣಲಕ್ಷಣಗಳನ್ನು ಹೊಂದಿದೆ.

ಉಪಯೋಗ: ವೃಕ್ಷರಾಜ ಎನಿಸಿಕೊಂಡಿರುವ ಈ ಮರವನ್ನು ದೇವಾಲಯಗಳಲ್ಲಿ ಬೆಳೆಸುತ್ತಾರೆ. ಸಾಲುಮರಗಳಾಗಿಯೂ ಬೆಳೆಸುವುದುಂಟು. ಮರ ಬಹು ಗಟ್ಟಿಯಾಗಿದ್ದು ಮಳೆ ಗಾಳಿಗೆ ಬೀಳುವುದಿಲ್ಲ. ಸೊಂಪಾದ ನೆರಳು ಕೊಡುತ್ತದೆ. ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹುಲ್ಲಿಗಿಂತ ಎರಡು ಮೂರು ಪಟ್ಟು ಹೆಚ್ಚು ಪ್ರೊಟಿನ್​ ಹೆಚ್ಚಾಗಿರುವ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಮ್ಯಾನ್ಮಾರ್​ನಲ್ಲಿ ಹಕ್ಕಿಗಳು ತಿನ್ನುತ್ತವೆ.

ಅರಳಿ ಮರದ ತೊಗಟೆಯು ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧವಾಗಿದೆ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ, ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ.

Published On - 6:06 am, Mon, 27 December 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ