Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದವರು ಏನು ಮಾಡಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: May 08, 2024 | 12:04 PM

ಚಿನ್ನ ಈಗ ತುಂಬಾ ದುಬಾರಿಯಾಗಿರುವುದರಿಂದ, ಎಲ್ಲರಿಗೂ ಖರೀದಿಸಲು ಸಾಧ್ಯವಾಗುವುದಿಲ್ಲ ಹಾಗಂತ ಅಂತವರು ನಿರಾಶೆಗೊಳ್ಳುವ ಅಗತ್ಯವಿಲ್ಲ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ, ಇತರ ಕೆಲವು ಮಂಗಳಕರ ವಸ್ತುಗಳನ್ನು ಖರೀದಿಸುವ ಮೂಲಕ ನೀವು ಶುಭ ಫಲಗಳನ್ನು ಪಡೆಯಬಹುದು. ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಖರೀದಿಸುವುದು ಚಿನ್ನವನ್ನು ತಂದಷ್ಟೇ ಫಲಪ್ರದವೆಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಈ ದಿನ ಯಾವ ವಸ್ತುಗಳನ್ನು ಖರೀದಿ ಮಾಡಬೇಕು? ಇಲ್ಲಿದೆ ಮಾಹಿತಿ.

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದವರು ಏನು ಮಾಡಬೇಕು?
Follow us on

ಈ ವರ್ಷ, ಅಕ್ಷಯ ತೃತೀಯವು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಮೇ. 10 ರ ಶುಕ್ರವಾರದಂದು ಬರುತ್ತದೆ. ಈ ದಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯದಂದು, (Akshaya Tritiya) ದೇವರ ಪೂಜೆ ಮಾಡುವುದು, ಶುಭ ಚಟುವಟಿಕೆಗಳನ್ನು ಪ್ರಾರಂಭಿಸುವುದು ಮತ್ತು ಚಿನ್ನವನ್ನು ಖರೀದಿಸುವುದಕ್ಕೆ ಬಹಳ ಮಹತ್ವವಿದೆ. ಈ ದಿನ ಚಿನ್ನ ಖರೀದಿ ಮಾಡುವುದರಿಂದ ಮನೆಯಲ್ಲಿ ಸದಾಕಾಲ ಸಂಪತ್ತು ಹೇರಳವಾಗಿರುತ್ತದೆ ಜೊತೆಗೆ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಆದರೆ ಚಿನ್ನ ಈಗ ತುಂಬಾ ದುಬಾರಿಯಾಗಿರುವುದರಿಂದ, ಎಲ್ಲರಿಗೂ ಖರೀದಿಸಲು ಸಾಧ್ಯವಾಗುವುದಿಲ್ಲ ಹಾಗಂತ ಅಂತವರು ನಿರಾಶೆಗೊಳ್ಳುವ ಅಗತ್ಯವಿಲ್ಲ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ, ಇತರ ಕೆಲವು ಮಂಗಳಕರ ವಸ್ತುಗಳನ್ನು ಖರೀದಿಸುವ ಮೂಲಕ ನೀವು ಶುಭ ಫಲಗಳನ್ನು ಪಡೆಯಬಹುದು. ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಖರೀದಿಸುವುದು ಚಿನ್ನವನ್ನು ತಂದಷ್ಟೇ ಫಲಪ್ರದವೆಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಈ ದಿನ ಯಾವ ವಸ್ತುಗಳನ್ನು ಖರೀದಿ ಮಾಡಬೇಕು? ಇಲ್ಲಿದೆ ಮಾಹಿತಿ.

ಗೋವುಗಳು: ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಅಕ್ಷಯ ತೃತೀಯದಂದು ನೀವು ಹಸುಗಳನ್ನು ಖರೀದಿಸಬಹುದು ಏಕೆಂದರೆ ಲಕ್ಷ್ಮೀ ದೇವಿಗೆ ಗೋವುಗಳು ಎಂದರೆ ತುಂಬಾ ಪ್ರೀತಿ. ಇದು ಸಾಧ್ಯವಾಗದಿದ್ದಲ್ಲಿ ಗೋವಿನ ಲೋಹ ಅಥವಾ ಬೆಳ್ಳಿಯ ಮೂರ್ತಿಯನ್ನು ಮನೆಗೆ ತನ್ನಿ. ಬಳಿಕ ಅದನ್ನು ಲಕ್ಷ್ಮೀ ದೇವಿಯ ಪಾದದ ಬಳಿ ಅರ್ಪಿಸಿ, ಪೂಜೆ ಮಾಡಿ. ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಸುರಕ್ಷಿತ ಜಾಗದಲ್ಲಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ.

ಬೆಳ್ಳಿ: ಚಿನ್ನದಂತೆ, ಬೆಳ್ಳಿಯನ್ನು ಸಹ ಮಂಗಳಕರ ಎನ್ನಲಾಗುತ್ತದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ನೀವು ಬೆಳ್ಳಿ ನಾಣ್ಯ, ಬೆಳ್ಳಿ ವಿಗ್ರಹ ಅಥವಾ ಯಾವುದಾದರೂ ಬೆಳ್ಳಿಯ ವಸ್ತುವನ್ನು ಖರೀದಿಸಬಹುದು.

ಇದನ್ನೂ ಓದಿ; ನೆನಪಿರಲಿ! ನಿಮ್ಮ ಈ 5 ಅಭ್ಯಾಸಗಳು ಶನಿ ದೇವರನ್ನು ಕೋಪಗೊಳ್ಳುವಂತೆ ಮಾಡುತ್ತದೆ

ಮಣ್ಣಿನ ಮಡಕೆ: ಅಕ್ಷಯ ತೃತೀಯದಂದು ಮಣ್ಣಿನ ಮಡಕೆಯನ್ನು ಖರೀದಿಸುವುದು ಸಹ ತುಂಬಾ ಮಂಗಳಕರವಾಗಿದೆ. ಇದನ್ನು ಮನೆಗೆ ತಂದ ಬಳಿಕ ಅದಕ್ಕೆ ಪಾನಕ ತುಂಬಿಸಿ ದಾನ ಮಾಡಿ. ಈ ದಿನ ನೀರನ್ನು ದಾನ ಮಾಡುವುದು ಕೂಡ ತುಂಬಾ ಮಂಗಳಕರವಾಗಿದೆ.

ಬಾರ್ಲಿ: ಅಕ್ಷಯ ತೃತೀಯದಂದು ಬಾರ್ಲಿಯನ್ನು ಖರೀದಿಸುವುದು ಚಿನ್ನವನ್ನು ಖರೀದಿಸುವುದಕ್ಕಿಂತ ಹೆಚ್ಚು ಫಲಪ್ರದವಾಗಿದೆ. ಏಕೆಂದರೆ ಇದನ್ನು ಬ್ರಹ್ಮಾಂಡದ ಮೊದಲ ಆಹಾರವೆಂದು ಹೇಳಲಾಗುತ್ತದೆ. ಜೊತೆಗೆ ಬಾರ್ಲಿಯನ್ನು ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನ ಬಾರ್ಲಿಯನ್ನು ಕೂಡ ಖರೀದಿ ಮಾಡಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 4:36 pm, Sat, 27 April 24