Shani Dev: ನೆನಪಿರಲಿ! ನಿಮ್ಮ ಈ 5 ಅಭ್ಯಾಸಗಳು ಶನಿ ದೇವರನ್ನು ಕೋಪಗೊಳ್ಳುವಂತೆ ಮಾಡುತ್ತದೆ

ಯಾರು ಶನಿ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೋ, ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೋ ಅಂತವರಿಗೆ ಸದಾ ಆಶೀರ್ವಾದ ನೀಡುವ ಮೂಲಕ ಕಾಪಾಡುತ್ತಾನೆ. ಜೊತೆಗೆ ಯಾವಾಗಲೂ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿ ದೇವನ ಕೃಪೆಯಿಂದ ಬಡವ ಕೂಡ ರಾಜನಾಗುತ್ತಾನೆ. ಆದರೆ ಶನಿ ದೇವನು ಇಷ್ಟಪಡದ ಕೆಲವು ಅಭ್ಯಾಸಗಳಿವೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಶನಿ ದೇವ ಕೋಪಗೊಳ್ಳುತ್ತಾನೆ. ಆದ್ದರಿಂದ, ಈ ಕೆಲಸಗಳನ್ನು ತಿಳಿದೋ ತಿಳಿಯದೆಯೋ ಮಾಡಬಾರದು. ಅಂತಹ 5 ಅಭ್ಯಾಸಗಳು ಯಾವುದು? ತಿಳಿದುಕೊಳ್ಳಿ.

Shani Dev: ನೆನಪಿರಲಿ! ನಿಮ್ಮ ಈ 5 ಅಭ್ಯಾಸಗಳು ಶನಿ ದೇವರನ್ನು ಕೋಪಗೊಳ್ಳುವಂತೆ ಮಾಡುತ್ತದೆ
ಶನಿ ದೇವಾ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2024 | 10:35 AM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವರನ್ನು ಒಂಬತ್ತು ಗ್ರಹಗಳಲ್ಲಿ ಅತ್ಯಂತ ಬಲಿಷ್ಠ ಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆತ ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಕೆಟ್ಟ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೇ ಬಿಡುವುದಿಲ್ಲ . ಅದಕ್ಕಾಗಿಯೇ ಅವನನ್ನು ನ್ಯಾಯ ನೀಡುವ ದೇವರು ಎಂದು ಕರೆಯಲಾಗುತ್ತದೆ. ಆದ್ದರಿಂದ, ಶನಿಯನ್ನು ರಾಹು- ಕೇತುವಿಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗುತ್ತದೆ.

ಒಂಬತ್ತು ಗ್ರಹಗಳಿಗೆ ಹೋಲಿಸಿದರೆ, ಶನಿ ದೇವರು ನಿಧಾನವಾಗಿ ಚಲಿಸುವ ಗ್ರಹವಾಗಿದ್ದು ಕೆಲವು ರಾಶಿಯ ಮೇಲೆ ಶನಿ ದೇವರ ಶುಭ ಮತ್ತು ಅಶುಭ ಪರಿಣಾಮಗಳು ದೀರ್ಘಕಾಲದವರೆಗೆ ಇರುತ್ತದೆ. ಆದರೆ ಶನಿ ದೇವರಿಗೆ ಹೆದರುವ ಅಗತ್ಯವಿಲ್ಲ. ಏಕೆಂದರೆ ಆತ ತಪ್ಪು ಕೆಲಸ ಮಾಡಿದವರನ್ನು ಮಾತ್ರ ಶಿಕ್ಷಿಸುತ್ತಾನೆ. ಯಾರು ಶನಿ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೋ, ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೋ ಅಂತವರಿಗೆ ಸದಾ ಆಶೀರ್ವಾದ ನೀಡುವ ಮೂಲಕ ಕಾಪಾಡುತ್ತಾನೆ. ಜೊತೆಗೆ ಯಾವಾಗಲೂ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿ ದೇವನ ಕೃಪೆಯಿಂದ ಬಡವ ಕೂಡ ರಾಜನಾಗುತ್ತಾನೆ. ಶನಿ ದೇವನು ಇಷ್ಟಪಡದ ಕೆಲವು ಅಭ್ಯಾಸಗಳಿವೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಶನಿ ದೇವ ಕೋಪಗೊಳ್ಳುತ್ತಾನೆ. ಆದ್ದರಿಂದ, ಈ ಕೆಲಸಗಳನ್ನು ತಿಳಿದೋ ತಿಳಿಯದೆಯೋ ಮಾಡಬಾರದು. ಅಂತಹ 5 ಅಭ್ಯಾಸಗಳು ಯಾವುದು? ತಿಳಿದುಕೊಳ್ಳಿ.

ಇದನ್ನೂ ಓದಿ: ಧಾರ್ಮಿಕ ಕ್ಷೇತ್ರದಲ್ಲಿ ಬದಲಾಗುತ್ತಿದೆ ಜಮ್ಮು-ಕಾಶ್ಮೀರ, ಅಲೆಕ್ಸಾಂಡರ್ ಕೆಡವಿದ ಸೂರ್ಯ ದೇವಾಲಯ ಪುನರ್​​ ನಿರ್ಮಾಣ

ಶನಿ ದೇವನಿಗೆ ಇಷ್ಟವಾಗದ 5 ಅಭ್ಯಾಸಗಳಿವು;

ಹಿರಿಯರನ್ನು ಅವಮಾನಿಸುವುದು: ಹಿರಿಯರನ್ನು ಅಥವಾ ಅಸಹಾಯಕರನ್ನು ಅವಮಾನಿಸುವವರನ್ನು ಶನಿ ದೇವ ಶಿಕ್ಷಿಸುತ್ತಾನೆ ಯಾವಾಗಲೂ ಅವರ ಮೇಲೆ ಅವನ ವಕ್ರ ದ್ರಷ್ಠಿ ಇದ್ದೇ ಇರುತ್ತದೆ. ಜೊತೆಗೆ ಇಂತಹ ಕೆಲಸ ಮಾಡುವ ಜನರಿಗೆ ಸಮಾಜದಲ್ಲಿ ಎಂದಿಗೂ ಗೌರವ ಸಿಗುವುದಿಲ್ಲ. ತಮ್ಮ ಜೀವನದುದ್ದಕ್ಕೂ ನೋವನ್ನು ಎದುರಿಸಬೇಕಾಗುತ್ತದೆ.

ಕಾಲನ್ನು ತೂರಿಸಿ ಅಥವಾ ಎಳೆದು ನಡೆಯುವ ಅಭ್ಯಾಸ: ಕೆಲವರು ನಡೆಯುವಾಗ ತಮ್ಮ ಕಾಲುಗಳನ್ನು ನೆಲಕ್ಕೆ ತೂರಿಸಿ ಅಥವಾ ಚಪ್ಪಲಿಗಳನ್ನು ಎಳೆಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸ ಶನಿಗೆ ತುಂಬಾ ಕೋಪ ತರಿಸುವುದರಿಂದ ಈ ರೀತಿ ಮಾಡುವುದನ್ನು ತಕ್ಷಣ ಬಿಡಿ. ಇಲ್ಲದಿದ್ದರೆ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುತ್ತದೆ, ಮಾಡುತ್ತಿರುವ ಕೆಲಸವೂ ಹಾಳಾಗುತ್ತದೆ. ಇದಲ್ಲದೆ, ಸಾಲದ ಹೊರೆಯು ಹೆಚ್ಚುತ್ತದೆ.

ಕುಳಿತುಕೊಂಡಲ್ಲಿ ಕಾಲುಗಳನ್ನು ಅಲ್ಲಾಡಿಸುವುದು: ಕೆಲವರು ಕುಳಿತುಕೊಂಡಲ್ಲಿ ಕಾಲುಗಳನ್ನು ಅಲ್ಲಾಡಿಸುತ್ತಲೇ ಇರುತ್ತಾರೆ. ಈ ಅಭ್ಯಾಸ ಶುಭವಲ್ಲ. ಇದು ನಿಮ್ಮ ಕುಟುಂಬದ ಶಾಂತಿಯನ್ನು ಹದಗೆಡಿಸುತ್ತದೆ.

ಸಾಲವನ್ನು ಹಿಂದಿರುಗಿಸದಿರುವುದು: ಅಗತ್ಯವಿದ್ದಾಗ ಯಾರಿಂದಲಾದರೂ ಸಹಾಯ ಪಡೆಯುವುದು ಒಳ್ಳೆಯದು. ಆದರೆ ಸಾಲವನ್ನು ಹಿಂದಿರುಗಿಸದಿರುವುದು ಕೆಟ್ಟ ಅಭ್ಯಾಸ. ಹಣವನ್ನು ಎರವಲು ಪಡೆಯುವ ಮತ್ತು ಉದ್ದೇಶಪೂರ್ವಕವಾಗಿ ಹಣವನ್ನು ಹಿಂದಿರುಗಿಸದ ಜನರು ಶನಿ ನೀಡುವ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಎರವಲು ಪಡೆದ ಹಣವನ್ನು ಆದಷ್ಟು ಬೇಗ ಹಿಂದಿರುಗಿಸಲು ಪ್ರಯತ್ನಿಸಿ.

ಸ್ನಾನಗೃಹ ಮತ್ತು ಅಡುಗೆಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವುದು: ಯಾವಾಗಲೂ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳ ರಾಶಿ ಅಥವಾ ಸ್ನಾನಗೃಹವನ್ನು ಕೊಳಕಾಗಿಡುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಈ ಅಭ್ಯಾಸಗಳಿಂದಾಗಿ ಶನಿ ದೇವ ಕೂಡ ನಿಮ್ಮನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುತ್ತಾನೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?