ಅಮಾಲಕ್ಯ ಮತ್ತು ಅಮಲಕಿ ಏಕಾದಶಿಯಂದು(Amalaki Ekadashi) ಭಗವಾನ್ ವಿಷ್ಣುವಿನ(Lord Vishnu) ಸ್ಮರಣೆಯಲ್ಲಿ ಭಕ್ತರು ಉಪವಾಸದ ಜೊತೆಗೆ ನೆಲ್ಲಿಕಾಯಿ ಮರಕ್ಕೆ ಪೂಜೆ ಮಾಡುವ ವಿಶೇಷ ದಿನವಾಗಿದೆ. ಅಮಲಕಿ ಎಂದರೆ ಆಮ್ಲ(Amla), ಇದನ್ನು ಹಿಂದೂ ಧರ್ಮ ಮತ್ತು ಆಯುರ್ವೇದ ಎರಡರಲ್ಲೂ ಅತ್ಯುತ್ತಮ ಘಟಕಾಂಶವೆಂದು ವಿವರಿಸಲಾಗಿದೆ. ಪದ್ಮ ಪುರಾಣದ ಪ್ರಕಾರ, ಆಮ್ಲಾ ಮರವು ವಿಷ್ಣುವಿಗೆ ತುಂಬಾ ಪ್ರಿಯ. ಹಾಗೂ ಶ್ರೀ ಹರಿ ಮತ್ತು ಲಕ್ಷ್ಮಿ ದೇವಿಯ ಆವಾಸಸ್ಥಾನವಾಗಿದೆ. ಭಗವಾನ್ ವಿಷ್ಣುವಿನ ವಾಸಸ್ಥಾನವಾಗಿರುವುದರಿಂದ, ವಿಗ್ರಹವನ್ನು ಈ ಮರದ ಕೆಳಗೆ ಪೂಜಿಸಲಾಗುತ್ತದೆ.
2022 ಅಮಲಕಿ ಏಕಾದಶಿ ವ್ರತ ಮತ್ತು ಪೂಜಾ ವಿಧಿ
ಅಮಲಕಿ ಏಕಾದಶಿಯಂದು ಆಮ್ಲಾ ಅಥವಾ ನೆಲ್ಲಿ ಕಾಯಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನ ಆಮ್ಲಾವನ್ನು ಪೂಜೆಯಿಂದ ಹಿಡಿದು ಆಹಾರದವರೆಗೆ ಪ್ರತಿಯೊಂದು ಕಾರ್ಯದಲ್ಲೂ ಬಳಸಲಾಗುತ್ತದೆ. ಅಮಲಕಿ ಏಕಾದಶಿ ತಿಥಿ ಆರಂಭ- ಮಾರ್ಚ್ 13ರ ಬೆಳಗ್ಗೆ 10.21 ಅಮಲಕಿ ಏಕಾದಶಿ ತಿಥಿ ಮುಕ್ತಾಯ- ಮಾರ್ಚ್ 14 ಮಧ್ಯಾಹ್ನ 12.05ಕ್ಕೆ
ಅಮಲಕಿ ಏಕಾದಶಿ ಪೂಜಾ ವಿಧಿ ವಿಧಾನಗಳು ಈ ಕೆಳಗಿನಂತಿವೆ
– ಈ ದಿನ ಬೇಗ ಎದ್ದು ಸ್ನಾನ ಮಾಡಿ ಉಪವಾಸಕ್ಕೆ ಸಂಕಲ್ಪ ಮಾಡಿ ಭಗವಾನ್ ವಿಷ್ಣುವನ್ನು ಸ್ಮರಿಸಿ.
– ಸಂಕಲ್ಪ ತೆಗೆದುಕೊಂಡ ನಂತರ ಭಗವಂತನನ್ನು ಆರಾಧಿಸಿ. ತುಪ್ಪದ ದೀಪ ಬೆಳಗಿಸಿ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಿ.
– ಪೂಜೆಯ ನಂತರ ಅಮಲ ಮರದ ಕೆಳಗೆ ಕಲಶವನ್ನು ಸ್ಥಾಪಿಸಿ. ಒಂದು ವೇಳೆ ನಿಮ್ಮ ಮನೆ ಅಥವಾ ಆಸುಪಾಸಿನಲ್ಲಿ ಆಮ್ಲಾ ಮರವು ಇಲ್ಲದಿದ್ದರೆ ಆಮ್ಲ ಅಥವಾ ನೆಲ್ಲಿ ಕಾಯಿಯನ್ನು ವಿಷ್ಣುವಿಗೆ ನೈವೇದ್ಯದಲ್ಲಿ ಅರ್ಪಿಸಬಹುದು.
– ಅಮಲ ವೃಕ್ಷವನ್ನು ಧೂಪದ್ರವ್ಯ, ದೀಪ, ಶ್ರೀಗಂಧ, ಸಿಂಧೂರ, ಹೂವುಗಳು, ಅಕ್ಕಿ ಇತ್ಯಾದಿಗಳಿಂದ ಪೂಜಿಸಿ ಮತ್ತು ಬಡವರಿಗೆ ಅಥವಾ ಬ್ರಾಹ್ಮಣರಿಗೆ ಆಹಾರವನ್ನು ನೀಡಿ.
– ಮರುದಿನ, ಸ್ನಾನ ಮಾಡಿ, ವಿಷ್ಣುವನ್ನು ಪೂಜಿಸಿ ಮತ್ತು ಮರದ ಬಳಿ ಇಟ್ಟ ಕಲಶ, ವಸ್ತ್ರ ಮತ್ತು ಆಮ್ಲವನ್ನು ನಿರ್ಗತಿಕರಿಗೆ ದಾನ ಮಾಡಿ. ನಂತರ, ಆಹಾರವನ್ನು ಸೇವಿಸಿ ಮತ್ತು ನಿಮ್ಮ ಉಪವಾಸವನ್ನು ತೆರೆಯಿರಿ.
ಅಮಲಕಿ ಏಕಾದಶಿ ವ್ರತದ ಮಹತ್ವ
ಪದ್ಮ ಪುರಾಣದ ಪ್ರಕಾರ, ಅಮಲಕಿ ಏಕಾದಶಿಯಂದು ಉಪವಾಸ ಮಾಡುವ ಮೂಲಕ ತೀರ್ಥಯಾತ್ರೆಗಳಿಗೆ ಅಥವಾ ಯಜ್ಞವನ್ನು ನಡೆಸುವುದಕ್ಕೆ ಪಡೆಯುವಷ್ಟು ಸಮಾನವಾದ ಮೋಕ್ಷವನ್ನು ಪಡೆಯಬಹುದು. ಶಾಸ್ತ್ರಗಳ ಪ್ರಕಾರ, ಅಮಲಕಿ ಏಕಾದಶಿಯಂದು ಆಮ್ಲಾವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಪೌರಾಣಿಕ ದಂತಕಥೆ
ಪುರಾಣದ ಪ್ರಕಾರ ಚಿತ್ರಸೇನ ಎಂಬ ರಾಜನ ಆಳ್ವಿಕೆಯಲ್ಲಿ, ಅಮಲಕಿ ಏಕಾದಶಿ ವ್ರತವನ್ನು ಉಪವಾಸವನ್ನು ಆಚರಿಸಲಾಗುತ್ತಿತ್ತು. ಒಮ್ಮೆ ರಾಜನು ಬೇಟೆಯಾಡಲು ಅರಣ್ಯಕ್ಕೆ ಹೋಗಿದ್ದನು ಅಲ್ಲಿ ಇದ್ದಕ್ಕಿದ್ದಂತೆ, ಕೆಲವು ಡಕಾಯಿತರು ಅವನನ್ನು ಸುತ್ತುವರೆದರು ಮತ್ತು ಅವನ ಮೇಲೆ ದಾಳಿ ಮಾಡಿದರು. ಆದರೆ ದೇವರ ಆಶೀರ್ವಾದದಿಂದ ಅವನ ಕಡೆಗೆ ಎಸೆದ ಪ್ರತಿಯೊಂದು ಆಯುಧವೂ ಹೂವಾಗಿ ಮಾರ್ಪಾಡಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಡಕಾಯಿತರು ರಾಜನ ಮೇಲೆ ದಾಳಿ ಮಾಡಿದ ಕಾರಣ ರಾಜ ನಿಯಂತ್ರಣ ತಪ್ಪಿ ನೆಲದ ಮೇಲೆ ಬಿದ್ದು ಪ್ರಜ್ಞಾಹೀನನಾಗುತ್ತಾನೆ. ಇದ್ದಕ್ಕಿದ್ದಂತೆ, ರಾಜನ ದೇಹದಿಂದ ಒಂದು ದೈವಿಕ ಶಕ್ತಿಯು ಎದ್ದು, ಎಲ್ಲಾ ದುಷ್ಟರನ್ನು ಕೊಂದು ಅದೃಶ್ಯವಾಯಿತು. ಪ್ರಜ್ಞೆ ಮರಳಿದ ನಂತರ, ರಾಜನು ಎಲ್ಲಾ ಡಕಾಯಿತರು ಸತ್ತಿರುವುದನ್ನು ಕಂಡು ಆಶ್ಚರ್ಯಚಕಿತನಾದನು. ಆಗ ಇದ್ದಕ್ಕಿದ್ದಂತೆ ಒಂದು ದೈವಿಕ ಪ್ರಕಟಣೆ ಬಂದಿತು,
ಓ ರಾಜನೇ, ನೀನು ಅಮಲಕಿ ಏಕಾದಶಿಯಂದು ಉಪವಾಸ ಮಾಡಿದ್ದರಿಂದಲೇ ಈ ಡಕಾಯಿತರೆಲ್ಲರೂ ಸತ್ತಿದ್ದಾರೆ. ನಿನ್ನ ದೇಹದಿಂದ ವೈಷ್ಣವಿ ಶಕ್ತಿಯೊಂದು ಎದ್ದು ಬಂದು ಅವರನ್ನು ಸಂಹಾರ ಮಾಡಿತು. ಅವರನ್ನು ಕೊಂದ ನಂತರ, ಅದು ನಿಮ್ಮ ದೇಹದೊಳಗೆ ಮರಳಿತು. ರಾಜನು ಬಹಳ ಸಂತೋಷಪಟ್ಟನು ಮತ್ತು ಕೃತಜ್ಞನಾದನು ಮತ್ತು ಅಮಲಕಿ ಏಕಾದಶಿಯ ಮಹತ್ವವನ್ನು ತನ್ನ ರಾಜ್ಯದಲ್ಲಿ ಸಾರಿದನು.
ಇದನ್ನೂ ಓದಿ: Shattila Ekadashi: ಷಟ್ತಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವುದರಿಂದ ನಿಮಗೆ ಈ ವಿಶೇಷ ಫಲ ಸಿಗುತ್ತೆ