AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shattila Ekadashi: ಷಟ್ತಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವುದರಿಂದ ನಿಮಗೆ ಈ ವಿಶೇಷ ಫಲ ಸಿಗುತ್ತೆ

ಹಿಂದೂ ಕ್ಯಾಲೆಂಡರ್ ಪ್ರಕಾರ, ಪುಷ್ಯಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವು ಶುಕ್ರವಾರ, ಜನವರಿ 28 ರ ಮುಂಜಾನೆ 02:16 ಕ್ಕೆ ಪ್ರಾರಂಭವಾಗುತ್ತದೆ. ಹಾಗೂ ಅದೇ ದಿನ ರಾತ್ರಿ 11.35 ಕ್ಕೆ ಕೊನೆಗೊಳ್ಳುತ್ತದೆ.

Shattila Ekadashi: ಷಟ್ತಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವುದರಿಂದ ನಿಮಗೆ ಈ ವಿಶೇಷ ಫಲ ಸಿಗುತ್ತೆ
ಭಗವಾನ್ ವಿಷ್ಣು
TV9 Web
| Edited By: |

Updated on: Jan 28, 2022 | 6:30 AM

Share

ಪಂಚಾಂಗದ ಪ್ರಕಾರ, 2022ರ ಜನವರಿ 28ರ ಪುಷ್ಯಮಾಸದ ಕೃಷ್ಣ ಪಕ್ಷದ ಏಕಾದಶಿ ದಿನದಂದು ಷಟ್ತಿಲ ಏಕಾದಶಿ ಎಂದು ಕರೆಯುವ ವೈಷ್ಣವೈಕಾದಶಿಯನ್ನು ಆಚರಿಸಲಾಗುತ್ತೆ. ಷಟ್ತಿಲ ಏಕಾದಶಿಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಎಳ್ಳನ್ನು ವಿಷ್ಣುವಿಗೆ ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶಟಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವುದರಿಂದ ಸ್ವರ್ಗಕ್ಕೆ ದಾರಿ ಸಿಗುತ್ತದೆ. ಮತ್ತು ಎಳ್ಳನ್ನು ದಾನ ಮಾಡಿದವರಿಗೆ ಸಾವಿರ ವರ್ಷಗಳವರೆಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ ಎನ್ನಲಾಗುತ್ತೆ. ಪಾಪಗಳು ಮತ್ತು ದುಃಖಗಳು ದೂರವಾಗುತ್ತವೆ.

ಷಟ್ತಿಲ ಏಕಾದಶಿ 2022 ದಿನಾಂಕ ಮತ್ತು ಮುಹೂರ್ತ ಹಿಂದೂ ಕ್ಯಾಲೆಂಡರ್ ಪ್ರಕಾರ, ಪುಷ್ಯಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವು ಶುಕ್ರವಾರ, ಜನವರಿ 28 ರ ಮುಂಜಾನೆ 02:16 ಕ್ಕೆ ಪ್ರಾರಂಭವಾಗುತ್ತದೆ. ಹಾಗೂ ಅದೇ ದಿನ ರಾತ್ರಿ 11.35 ಕ್ಕೆ ಕೊನೆಗೊಳ್ಳುತ್ತದೆ.

ಷಟ್ತಿಲ ಏಕಾದಶಿಯ ದಿನ ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಬಹುದು. ಈ ದಿನ ಅಭಿಜಿತ್ ಮುಹೂರ್ತವು ಮಧ್ಯಾಹ್ನ 12.13 ರಿಂದ 12.56 ರವರೆಗೆ ಇರುತ್ತದೆ. ಮಧ್ಯಾಹ್ನ 02.22 ರಿಂದ 03.05 ರವರೆಗೆ ವಿಜಯ ಮುಹೂರ್ತ.

ಷಟ್ತಿಲ ಏಕಾದಶಿ 2022 ಪರಾನಾ ಷಟ್ತಿಲ ಏಕಾದಶಿಯ ಉಪವಾಸವನ್ನು ಆಚರಿಸುವವರು ಜನವರಿ 29 ರ ಶನಿವಾರದಂದು ಬೆಳಿಗ್ಗೆ 07.11 ರಿಂದ 09.20 ರವರೆಗೆ ಪಾರಣ ಮಾಡಬಹುದು. ಈ ದಿನ ದ್ವಾದಶಿ ತಿಥಿ ರಾತ್ರಿ 08:37 ಕ್ಕೆ ಮುಕ್ತಾಯವಾಗುತ್ತದೆ.

ಷಟ್ತಿಲ ಏಕಾದಶಿಯ ದಿನ ನೀರಿನಲ್ಲಿ ಎಳ್ಳು ಹಾಕಿ ಸ್ನಾನ ಮಾಡುತ್ತಾರೆ. ನಂತರ ಈ ದಿನ ಉಪವಾಸ ಮತ್ತು ವಿಷ್ಣುವಿನ ಪೂಜೆಗೆ ಮೀಸಲಿಡಲಾಗಿದೆ. ಹೂವುಗಳು, ಹಣ್ಣುಗಳು, ಅಕ್ಷತೆ, ಎಳ್ಳು ಲಡ್ಡುಗಳು, ಪಂಚಾಮೃತ, ತುಳಸಿ ಎಲೆಗಳು ಇತ್ಯಾದಿಗಳನ್ನು ವಿಷ್ಣುವಿಗೆ ಪೂಜೆಯಲ್ಲಿ ಅರ್ಪಿಸಲಾಗುತ್ತದೆ. ಪೂಜೆಯ ಸಮಯದಲ್ಲಿ, ಷಟ್ತಿಲ ಏಕಾದಶಿ ಉಪವಾಸದ ಕಥೆಯನ್ನು ಕೇಳುತ್ತಾರೆ ಮತ್ತು ಅಂತಿಮವಾಗಿ ವಿಷ್ಣುವಿಗೆ ಆರತಿಯನ್ನು ಬೆಳಗುತ್ತಾರೆ.

ಇದನ್ನೂ ಓದಿ: ಇಂದು ಮೋಕ್ಷದ ವೈಕುಂಠ ಏಕಾದಶಿ ದಿನ: ಭಗವಾನ್ ವಿಷ್ಣುವನ್ನು ಪೂಜಿಸುವುದು ಹೇಗೆ? ವಿಷ್ಣುವಿನ ಆಶೀರ್ವಾದಕ್ಕಾಗಿ ಹೀಗೆ ಮಾಡಿ

Follow Us
Web contact
Web contact

TV9 Kannada

Read More
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!