AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರು ದಿನ ಜನಮೆಚ್ಚುಗೆ ಗಳಿಸಿದ ಬೈಕ್ ಸಾಹಸಿ: 7ನೇ ದಿನ ‘ಜೀವಂತ ಸಮಾಧಿ’ಯಾದ ಯುವಕ

ಹರಿಯಾಣದ ನುಹ್‌ನಲ್ಲಿ ಸಾಹಸಿ ದೀಪಕ್ 'ಜೀವಂತ ಸಮಾಧಿ' ಪ್ರದರ್ಶನದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಆರು ದಿನಗಳ ಯಶಸ್ವಿ ಸೈಕಲ್ ಸಾಹಸಗಳ ನಂತರ, ಏಳನೇ ದಿನದ ಈ ಸಾಹಸದಲ್ಲಿ ಆಯೋಜಕರು ಹಣ ಸಂಗ್ರಹಿಸುವ ಸಲುವಾಗಿ ಅವರನ್ನು 36 ಗಂಟೆಗಳ ಕಾಲ ಭೂಗತವಾಗಿರಿಸಿದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದು ಆಯೋಜಕರ ನಿರ್ಲಕ್ಷ್ಯ ಮತ್ತು ಹಣದಾಸೆಗೆ ಸಾಕ್ಷಿಯಾಗಿದೆ. ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರು ದಿನ ಜನಮೆಚ್ಚುಗೆ ಗಳಿಸಿದ ಬೈಕ್ ಸಾಹಸಿ: 7ನೇ ದಿನ ‘ಜೀವಂತ ಸಮಾಧಿ’ಯಾದ ಯುವಕ
ಸ್ಟಂಟ್
ನಯನಾ ರಾಜೀವ್
|

Updated on: Jul 30, 2026 | 7:30 AM

Share

ನುಹ್, ಜುಲೈ 30: ಆರು ದಿನಗಳ ಕಾಲ ಸೈಕಲ್ ಹಾಗೂ ಬೈಕ್(Bike) ಮೇಲೆ ವಿಚಿತ್ರ ಸಾಹಸಗಳನ್ನು ಪ್ರದರ್ಶಿಸಿ, ಒಂದೇ ಒಂದು ಸಣ್ಣ ಗೀರೂ ಇಲ್ಲದೆ ಸಾವಿರಾರು ಜನರನ್ನು ರಂಜಿಸಿದ್ದ ಆ ಯುವಕ, 7ನೇ ದಿನ ನಡೆಸಿದ ಒಂದೇ ಒಂದು ದುರಂತ ಸಾಹಸಕ್ಕೆ ಪ್ರಾಣವನ್ನೇ ತೆತ್ತಿದ್ದಾರೆ. ಹರಿಯಾಣದ ನುಹ್ ಜಿಲ್ಲೆಯ ಖೋರಿ ಕಲಾನ್ ಗ್ರಾಮದಲ್ಲಿ ನಡೆದ  ಸೈಕಲ್ ಸರ್ಕಸ್‌ ಬಳಿಕ 27 ವರ್ಷದ ಸಾಹಸಿ ದೀಪಕ್,ನೆಲದಡಿಯಲ್ಲಿ ಸಮಾಧಿಯಾಗುವ ಸಾಹಸ ಪ್ರದರ್ಶನ ನಡೆಸುವಾಗ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.

ಫರಿದಾಬಾದ್ ಜಿಲ್ಲೆಯ ಗೌಂಚಿ ಗ್ರಾಮದ ನಿವಾಸಿಯಾದ ದೀಪಕ್, ಚಲಿಸುವ ಸೈಕಲ್ ಮೇಲೆ ನೇರವಾಗಿ ನಿಲ್ಲುವುದು, ಹ್ಯಾಂಡಲ್‌ಬಾರ್‌ಗಳ ಮೇಲೆ ಸಮತೋಲನ ಸಾಧಿಸುವುದು ಹಾಗೂ ಕಣ್ಣು ಮುಚ್ಚಿ ಸವಾರಿ ಮಾಡುವಂತಹ ಸಾಹಸಗಳಿಗೆ ಹೆಸರಾಗಿದ್ದರು. ಖೋರಿ ಕಲಾನ್ ಗ್ರಾಮದಲ್ಲಿ ಸರ್ಕಸ್‌ನ ಕೊನೆಯ ದಿನದ ಅಂಗವಾಗಿ ದೀಪಕ್ ಅವರನ್ನು ವಿಶೇಷ ಚೀಲದೊಳಗೆ ಇರಿಸಿ, ಅಗೆಯಲಾಗಿದ್ದ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಲಾಯಿತು. 24 ಗಂಟೆಗಳ ನಂತರ ಅವರನ್ನು ಸಮಾಧಿಯಿಂದ ಜೀವಂತವಾಗಿ ಹೊರತರಲಾಗುವುದು ಎಂದು ಸರ್ಕಸ್ ಆಯೋಜಕರು ಪ್ರೇಕ್ಷಕರಿಗೆ ಭರವಸೆ ನೀಡಿದ್ದರು.

ಹೊರಬರಲೇ ಇಲ್ಲ ಸಾಹಸಿ ಭರವಸೆ ನೀಡಿದಂತೆ 24 ಗಂಟೆಗಳ ನಂತರ ದೀಪಕ್ ಅವರನ್ನು ಹೊರಗೆ ತೆಗೆಯಲಿಲ್ಲ. ಪ್ರತ್ಯಕ್ಷದರ್ಶಿ ಸಂಚಿತ್ ಸಿಂಗ್ ಅವರ ಪ್ರಕಾರ, ಪ್ರೇಕ್ಷಕರಿಂದ ಒಟ್ಟು 7,100 ರೂ. ದೇಣಿಗೆ ಸಂಗ್ರಹವಾಗುವವರೆಗೆ ದೀಪಕ್ ಅವರನ್ನು ಹೊರಗೆ ತೆಗೆಯುವುದಿಲ್ಲ ಎಂದು ಆಯೋಜಕರು ಷರತ್ತು ವಿಧಿಸಿದ್ದರು. ಹಣ ಸಂಗ್ರಹಿಸುವ ಹುಚ್ಚಿನಲ್ಲಿ ದೀಪಕ್ ಅವರನ್ನು ಸುಮಾರು 36 ಗಂಟೆಗಳ ಕಾಲ ನೆಲದಡಿಯಲ್ಲೇ ಬಿಡಲಾಯಿತು. ಕೊನೆಗೆ ಸಾರ್ವಜನಿಕರು ಮತ್ತು ಪೊಲೀಸರ ಸಮ್ಮುಖದಲ್ಲಿ ಗುಂಡಿಯನ್ನು ಅಗೆದು ತೆರೆದಾಗ, ದೀಪಕ್ ಉಸಿರುಗಟ್ಟಿ ಮೃತಪಟ್ಟಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು

ಆರು ದಿನಗಳ ಕಾಲ ತಮ್ಮನ್ನು ನಗಿಸಿ ರಂಜಿಸಿದ ಯುವಕ, ಆಯೋಜಕರ ನಿರ್ಲಕ್ಷ್ಯ ಹಾಗೂ ಹಣದಾಸೆಯಿಂದಾಗಿ ಹೆಣವಾಗಿ ಹೊರಬಂದಿದ್ದನ್ನು ಕಂಡು ಇಡೀ ಗ್ರಾಮವೇ ಕಣ್ಣೀರಿಟ್ಟಿದೆ. ಇಂತಹ ಪ್ರಾಣಾಪಾಯವಿರುವ ಸಾಹಸ ಪ್ರದರ್ಶನಗಳಿಗೆ ಕನಿಷ್ಠ ಆಮ್ಲಜನಕ ವ್ಯವಸ್ಥೆ ಅಥವಾ ಸುರಕ್ಷತಾ ಕ್ರಮ ಕೈಗೊಳ್ಳದ ಆಯೋಜಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯನ್ನು ದೃಢಪಡಿಸಿರುವ ಜಿಲ್ಲಾ ಪೊಲೀಸ್ ವಕ್ತಾರ ಕೃಷ್ಣ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದೆಯಡಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡದಿರಲು ಕಾರಣರಾದವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ