ತಿರುಪತಿ ತಿಮ್ಮಪ್ಪನಿಗೆ ಭದ್ರತೆ ಹೆಚ್ಚಿಸಿ, ನವೀಕರಣಗೊಳಿಸಲು ಮುಂದಾದ ಟಿಟಿಡಿ
Tirumala Tirupati Security upgrade: ಆಂಧ್ರಪ್ರದೇಶ: ಭಾರೀ ಜನದಟ್ಟಣೆಯ ನಡುವೆ ತಿರುಮಲ ತಿರುಪತಿ ಬೆಟ್ಟದಲ್ಲಿ ಭದ್ರತೆಯನ್ನು ನವೀಕರಣಗೊಳಿಸಿ, ಹೆಚ್ಚಿಸಲು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಮುಂದಾಗಿದೆ.
ಆಂಧ್ರಪ್ರದೇಶ: ಭಾರೀ ಜನದಟ್ಟಣೆಯ ನಡುವೆ ತಿರುಮಲ ತಿರುಪತಿ ಬೆಟ್ಟದಲ್ಲಿ ಭದ್ರತೆಯನ್ನು (Tirumala Tirupati Security) ನವೀಕರಣಗೊಳಿಸಿ, ಹೆಚ್ಚಿಸಲು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ -Tirumala Tirupati Devasthanams -TTD) ಮುಂದಾಗಿದೆ. ಈ ಸಂಬಂಧ ತಿರುಮಲ ತಿರುಪತಿ ದೇವಸ್ಥಾನದ ಭದ್ರತಾ ಲೆಕ್ಕ ಪರಿಶೋಧನಾ ಸಭೆಯು ಇತ್ತೀಚೆಗೆ ನಡೆದಿದೆ. ದೇವಾಲಯದ ಪಟ್ಟಣದ ಸಮಗ್ರ ಭದ್ರತಾ ಲೆಕ್ಕಪರಿಶೋಧನೆಯ ಅಗತ್ಯವಿದೆ ಎಂದು ಟಿಟಿಡಿ ಪ್ರಧಾನ ಕಾರ್ಯದರ್ಶಿ ಹರೀಶ್ ಗುಪ್ತಾ ತಿಳಿಸಿದ್ದಾರೆ.
ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಐಪಿಎಸ್, ಐಎಎಸ್ ಮತ್ತು ಟಿಟಿಡಿಯ ಹಲವು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆದಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಮತ್ತು ವಾಹನ ದಟ್ಟಣೆಯ ದೃಷ್ಟಿಯಿಂದ ಉತ್ತಮ ಭದ್ರತಾ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚಿಸಿದರು. ಸಭೆಯಲ್ಲಿ ರಾಜ್ಯ ಗುಪ್ತಚರ ಬ್ಯೂರೋ, ಗುಪ್ತಚರ ಭದ್ರತಾ ವಿಭಾಗ, ಡಿಐಜಿ ಅನಂತಪುರಂ ವಲಯದ ಅಮ್ಮಿ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮತ್ತಷ್ಟು ಓದಿ: ಫ್ಲೈಓವರ್ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಅದನ್ನು ಪೊಲೀಸ್ ಕಾನ್‌ಸ್ಟೆಬಲ್ ತಡೆದಿದ್ದು ಹೇಗೆ? ನೀವೇ ನೋಡಿ!
ಒಟ್ಟಾರೆಯಾಗಿ ಸಮಗ್ರ ಭದ್ರತಾ ಲೆಕ್ಕಪರಿಶೋಧನೆಯ ಅಗತ್ಯವಿದೆ ಎಂದು ಹರೀಶ್ ಗುಪ್ತಾ ಹೇಳಿದರು. ದೇವಾಲಯದ ಪಟ್ಟಣದಲ್ಲಿ ಫೂಲ್ ಪ್ರೂಫ್ ಭದ್ರತೆಯನ್ನು ನೀಡಲು ಎಲ್ಲಾ ಭದ್ರತಾ ಪಡೆಗಳನ್ನು ಒಂದೇ ಚಾವಡಿಯಲ್ಲಿ ತರಬೇಕು. ಭಕ್ತರ ದತ್ತಾಂಶವನ್ನು ಸುರಕ್ಷಿತವಾಗಿಡಲು ಮತ್ತು ಸೈಬರ್ ದಾಳಿಯನ್ನು ತಡೆಯಲು ಅತ್ಯುನ್ನತ ಮಟ್ಟದ ಸೈಬರ್ ಭದ್ರತೆಯನ್ನು ಒದಗಿಸಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಹೇಳಿದರು.
ಮತ್ತಷ್ಟು ಓದಿ: New Parliament Building Inauguration: ನೂತನ ಸಂಸತ್ ಭವನ ಉದ್ಘಾಟನೆ ಯಾವಾಗ? ದಿನಾಂಕ, ಸಮಯದ ಬಗ್ಗೆ ಮಾಹಿತಿ ಇಲ್ಲಿದೆ
ಡ್ರೋನ್ ವಿರೋಧಿ ತಂತ್ರಜ್ಞಾನದ (anti-drone technology) ನಿಯೋಜನೆಯೊಂದಿಗೆ ಭದ್ರತಾ ಸಹಕಾರಕ್ಕೆ ಏಕೀಕೃತ ವಿಧಾನವನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದೆ. ಗುಪ್ತಚರ ಅಧಿಕಾರಿಗಳೊಂದಿಗೆ ವಿಶೇಷ ಸಮಿತಿಗಳನ್ನು ರಚಿಸಲಾಗುವುದು ಮತ್ತು ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಉತ್ತಮ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹರೀಶ್ ಕುಮಾರ್ ಗುಪ್ತಾ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Wed, 24 May 23