ಈ ಐದು ರಾಶಿಯವರಿಗೆ ಸದಾ ಬಂಗಾರ ಧರಿಸುವುದು ಅದೃಷ್ಟವಂತೆ! ಯಾವ ರಾಶಿಯವರು ಅವರು?
Zodiac sign: ಬುಧ ಅಧಿಪತಿಯ ಕನ್ಯಾ ರಾಶಿಯವರಿಗೆ ಚಿನ್ನದ ಉಂಗುರವಲ್ಲದೆ ಚಿನ್ನದ ಸರ ಅಥವಾ ಬಳೆ ಧರಿಸುವುದು ತುಂಬಾ ಒಳ್ಳೆಯದು. ಇದರೊಂದಿಗೆ, ಜೀವನದ ಸಮಸ್ಯೆಗಳು ಒಂದೊಂದಾಗಿ ಕೊನೆಗೊಳ್ಳುತ್ತವೆ ಮತ್ತು ಪ್ರತಿ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಬ್ಬ ವ್ಯಕ್ತಿ ಏನು ಧರಿಸಿದರೆ ಶುಭ, ಏನು ಧರಿಸಿದರೆ ಅಶುಭ ಎಂದು ಕೂಡಾ ಹೇಳಲಾಗಿದೆ. ಅದೃಷ್ಟ ಪಡೆಯಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಸೂಚಿಸಲಾಗಿದೆ. ಅವರವರ ರಾಶಿಗೆ ಅನುಗುಣವಾಗಿ (Zodiac sign) ಯಾರು ಏನು ಧರಿಸಿದರೆ ಅದೃಷ್ಟ ಎನ್ನುವುದನ್ನು ಹೇಳಲಾಗಿದೆ. ಈ ನಿಟ್ಟಿನಲ್ಲಿ ಕೆಲವು ರಾಶಿಯವರು ಚಿನ್ನ ಧರಿಸಿದರೆ ಅದೃಷ್ಟ ಸದಾ ಅವರ ಜೊತೆಗಿರುತ್ತದೆಯಂತೆ. ಹಾಗಿದ್ದರೆ ಯಾವ ರಾಶಿಯವರುಗೆ ಚಿನ್ನ ಅದೃಷ್ಟ ನೋಡೋಣ..(What zodiac signs should wear gold?)
- ಮೇಷ (Aries): ಮೇಷ ರಾಶಿಯವರಿಗೆ ಚಿನ್ನವನ್ನು ಧರಿಸುವುದು ಶುಭ. ವಿಶೇಷವಾಗಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಅದೃಷ್ಟ ಹೆಚ್ಚಾಗುತ್ತದೆ. ಸಂಬಂಧಗಳು ಬಲವಾಗಿರುತ್ತವೆ. ಸಾಲವಿದ್ದರೂ ಕೂಡಾ ಕೆಲವೇ ದಿನಗಳಲ್ಲಿ ಸಾಲದ ಸಮಸ್ಯೆ ಪರಿಹಾರವಾಗುತ್ತದೆಯಂತೆ.
- ಸಿಂಹ (Leo): ಸಿಂಹ ರಾಶಿಯವರಿಗೆ ಚಿನ್ನವು ಅದೃಷ್ಟವನ್ನು ತರುತ್ತದೆ. ಈ ರಾಶಿಯವರು ಚಿನ್ನದ ಆಭರಣಗಳನ್ನು ಅದರಲ್ಲೂ ವಿಶೇಷವಾಗಿ ಚಿನ್ನದ ಉಂಗುರಗಳನ್ನು ಧರಿಸಬೇಕು. ಇದು ಅವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ. ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.
- ಕನ್ಯಾ ರಾಶಿ (Virgo): ಬುಧ ಅಧಿಪತಿಯ ಕನ್ಯಾ ರಾಶಿಯವರಿಗೆ ಚಿನ್ನದ ಉಂಗುರವಲ್ಲದೆ ಚಿನ್ನದ ಸರ ಅಥವಾ ಬಳೆ ಧರಿಸುವುದು ತುಂಬಾ ಒಳ್ಳೆಯದು. ಇದರೊಂದಿಗೆ, ಜೀವನದ ಸಮಸ್ಯೆಗಳು ಒಂದೊಂದಾಗಿ ಕೊನೆಗೊಳ್ಳುತ್ತವೆ ಮತ್ತು ಪ್ರತಿ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ.
- ಧನು ರಾಶಿ (Sagittarius): ಇವರ ರಾಶ್ಯಾಧಿಪತಿ ಗುರು ಇವರ ಧಾತು ಬಂಗಾರ ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರ. ಇದು ಅವರಿಗೆ ಎಲ್ಲದರಲ್ಲೂ ಯಶಸ್ಸನ್ನು ನೀಡುತ್ತದೆ. ಗುರು ಗ್ರಹವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದಾಗಿ ಅವರು ಸಾಕಷ್ಟು ಹೆಸರು-ಪ್ರಸಿದ್ಧಿಯನ್ನು ಗಳಿಸುತ್ತಾರೆ. ಅಪಾರ ಸಂಪತ್ತಿನ ಒಡೆಯನಾಗುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನಮಾನ ಮತ್ತು ಸಂತೋಷದ ಜೀವನವನ್ನು ಪಡೆಯುತ್ತಾರೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಸುಖಿಗಳಾಗಿರುತ್ತಾರೆ.
- ಮೀನ ರಾಶಿ (Pisces): ಮೀನರಾಶಿಯವರು ಸಾಧ್ಯವಿರುವಷ್ಟರ ಮಟ್ಟಿಗೆ ಚಿನ್ನ ಧಾರಣೆ ಮಾಡಿದರೆ ಶುಭ ತರುತ್ತದೆ. ಅರ್ಧಕ್ಕೆ ನಿಂತ ಕೆಲಸಕಾರ್ಯಗಳೂ ಪೂರ್ಣಗೊಳ್ಳುವವು. ಕೋಪ ಕಡಿಮೆಯಾಗುತ್ತದೆ. ಆಲೋಚನಾ ಲಹರಿ ಉತ್ತಮವಾಗಿರುತ್ತದೆ. ಶುಭವಾಗಲಿ.-ಡಾ. ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ, ವಾಸ್ತುಶಾಸ್ತ್ರಜ್ಞ, 99728 48937
Published On - 9:29 pm, Sat, 7 May 22