AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2022: ಹೊಸ ವರ್ಷದ ಹೊಸ್ತಿಲಲ್ಲಿ ಈ ಸರಳ ಮಾರ್ಗಗಳ ಅನುಸರಿಸಿ ಸಾಲದಿಂದ ಮುಕ್ತರಾಗಿ, ಧನ ಸಂಕಷ್ಟದಿಂದ ದೂರವಾಗಿ

ಈಗಂತೂ ಎಲ್ಲೆಲ್ಲೂ ಹಣಕ್ಕೆ ಹಾಹಾಕಾರವಿದೆ. ಅದರಲ್ಲೂ ಈ ಕೊರೊನಾಘಾತದಿಂದ ತತ್ತರಿಸಿರುವ ಜನಕ್ಕೆ ಆರ್ಥಿಕ ಬವಣೆಹೆಚ್ಚಾಗಿದೆ. ಸಾಲ ಸೋಲ ಮಾಡುವುದು ಅನಿವಾರ್ಯವಾಗಿದೆ. ಸಾಲ ಮಾಡುವುದೇನೂ ಸರಿ. ಆದರೆ ಅದನ್ನು ಹಾಗೆಯೇ ಪ್ರಾಮಾಣಿಕವಾಗಿ ಚುಕ್ತಾ ಮಾಡುವುದೂ ನಮ್ಮ ಆದ್ಯ ಕರ್ತವ್ಯವಾಗಬೇಕು.

New Year 2022: ಹೊಸ ವರ್ಷದ ಹೊಸ್ತಿಲಲ್ಲಿ ಈ ಸರಳ ಮಾರ್ಗಗಳ ಅನುಸರಿಸಿ ಸಾಲದಿಂದ ಮುಕ್ತರಾಗಿ, ಧನ ಸಂಕಷ್ಟದಿಂದ ದೂರವಾಗಿ
New Year 2022: ಹೊಸ ವರ್ಷದ ಹೊಸ್ತಿಲಲ್ಲಿ ಈ ಸರಳ ಮಾರ್ಗಗಳ ಅನುಸರಿಸಿ ಸಾಲದಿಂದ ಮುಕ್ತರಾಗಿ, ಧನ ಸಂಕಷ್ಟದಿಂದ ದೂರವಾಗಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 24, 2021 | 6:06 AM

ಹೊಸ ವರ್ಷದ ಹೊಸ್ತಿಲಲ್ಲಿ ಧನ ಸಂಕಷ್ಟದಿಂದ ದೂರವಾಗಲು ಈ ನಿರ್ಣಯಗಳನ್ನು ಕೈಗೊಳ್ಳಿ. ಸಾಲದಿಂದ ಮುಕ್ತವಾಗಲು ಈ ಸರಳ ಮಾರ್ಗಗಳನ್ನು ಅನುಸರಿಸಿ. ಅದಕ್ಕೂ ಮುನ್ನ ಫ್ಲಾಷ್​ ಬ್ಯಾಕ್​​ನಲ್ಲಿ ಈ ಮಾತುಗಳನ್ನು ಬಗ್ಗೆ ಗಮನ ನೀಡಿ. ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ! ಇದೊಂದು ಸಾರ್ವತ್ರಿಕ, ಸಾರ್ವಕಾಲಿಕ ಸತ್ಯದ ಮಾತು. ಸಾಲ ಪಡೆಯುವುದು ತುಂಬಾ ಸುಲಭ. ಅದಕ್ಕೇನೂ ’ಖರ್ಚು’ ಮಾಡಬೇಕಾದ್ದಿಲ್ಲ. ಅದೇ ನಾವು ಆ ಸಾಲವನ್ನು ತೀರಿಸಬೇಕು, ಋಣಮುಕ್ತರಾಗಬೇಕು ಅಂದರೆ ಅದು ನಿಜಕ್ಕೂ ಕಷ್ಟ ಕಷ್ಟ. ಮಾನಸಿಕವಾಗಿ ಆಘಾತಗೊಳ್ಳುತ್ತೇವೆ. ಈ ಹಿನ್ನೆಲೆಯಲ್ಲಿ ಸಾಲದಿಂದ ಹೊರಬರುವಂತಾಗಲು ಈನ ಸರಳ ಮಾರ್ಗೋಪಾಯಗಳನ್ನು ಪಾಲಿಸಿ.

ಈಗಂತೂ ಎಲ್ಲೆಲ್ಲೂ ಹಣಕ್ಕೆ ಹಾಹಾಕಾರವಿದೆ. ಅದರಲ್ಲೂ ಈ ಕೊರೊನಾಘಾತದಿಂದ ತತ್ತರಿಸಿರುವ ಜನಕ್ಕೆ ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಗಿದೆ. ಕೈ ಖಾಲಿಯಾಗಿದ್ದು, ದೈನಂದಿನ ಜೀವನದ ಖರ್ಚು ಹೊಂದಾಣಿಕೆ ಮಾಡುವುದು ಕಷ್ಟ ಕಷ್ಟವಾಗಿದೆ. ಅಲ್ಲಿ ಇಲ್ಲಿ ಸಾಲ ಸೋಲ ಮಾಡುವುದು ಅನಿವಾರ್ಯವಾಗಿದೆ. ಸಾಲ ಮಾಡುವುದೇನೂ ಸರಿ. ಆದರೆ ಅದನ್ನು ಹಾಗೆಯೇ ಪ್ರಾಮಾಣಿಕವಾಗಿ ಚುಕ್ತಾ ಮಾಡುವುದೂ ನಮ್ಮ ಆದ್ಯ ಕರ್ತವ್ಯವಾಗಬೇಕು. ಆದರೆ ಅದುವೇ ಕಷ್ಟದ ಕೆಲಸ, ಅದು ದುರ್ಗಮದ ಹಾದಿ. ಈ ಪರಿಸ್ಥಿತಿಗಳ ಸಮ್ಮುಖದಲ್ಲಿ ಇಲ್ಲಿ ಒಂದಷ್ಟು ಸಾಲ ತೀರುವಳಿಗಾಗಿ ಒಂದಷ್ಟು ಸರಣ ಮಾರ್ಗಗಗಳನ್ನು ಸೂಚಿಸಿಲಾಗಿದೆ. ಅದನ್ನು ಅನುಸರಿಸಿ.

1. ವಿನಾಯಕನನ್ನು ವಿಘ್ನನಿವಾರಕ ಎಂದು ಆರಾಧಿಸುತ್ತೇವೆ. ಯಾವುದಾದರೂ ಶುಕ್ಲ ಪಕ್ಷದಲ್ಲಿ ಬುಧವಾರದ ದಿನ ಗಣೇಶನ ಸ್ತ್ರೋತ್ರವನ್ನು ಪಠಿಸಿ. ಅದಾದ ಮೇಲೆ ದಿನಾ ಅದನ್ನು ಅಭ್ಯಾಸ ಮಾಡಿಕೊಳ್ಳಿ. ಹಾಗೆಯೇ ಗಣಪತಿಗೆ ಸಿಹಿ ತಿನಿಸನ್ನು ನೈವೇದ್ಯಕ್ಕೆ ಇಡಿ.

2. ಇನ್ನು, ಆಂಜನೇಯ ಸ್ವಾಮಿಯನ್ನು ಸಂಕಟಮೋಚಕ ಎಂದು ಕರೆಯುತ್ತಾರೆ. ಪರ್ವತದಷ್ಟು ದೊಡ್ಡ ಕಷ್ಟವೇ ಎದುರಾಗಿದ್ದರೂ ಭಕ್ತಿ ಭಾವದಿಂದ ಹನುಮಂತನನ್ನು ನೆನೆದು, ಋಣಮೋಚಕ ಮಂಗಳ ಸ್ತ್ರೋತ್ರವನ್ನು ಪಠಿಸಬೇಕು. ಇದನ್ನು ಮಂಗಳವಾರ ಅಥವಾ ಶನಿವಾರದಂದು ಆರಂಭಿಸಿ. ಪ್ರತಿ ಮಂಗಳವಾರದಂದು ವಾನರರಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ನೀಡುತ್ತಾ ಬನ್ನೀ.

3. ಸಾಲದಿಂದ ಮುಕ್ತರಾಗಲು ಶಿವನ ಧ್ಯಾನವನ್ನೂ ಮಾಡಬಹುದು. ಪ್ರತಿ ಸೋಮವಾರ ಶಿವ ಮಂದಿರಕ್ಕೆ ತೆರಳಿ ಭಕ್ತಿ ಭಾವದಿಂದ ಶಿರ ಬಾಗಿ ಶಿವಲಿಂಗಕ್ಕೆ ನಮಸ್ಕರಿಸಿ. ಆ ಸಮಯದಲ್ಲಿಓಂ ಋಣಮುಕ್ತೇಶ್ವರ ಮಹಾದೇವಯಾ ನಮಃ ಎಂದು ಜಪಿಸಿ. ನಿಮ್ಮ ಶಕ್ತ್ಯಾನುಸಾರ ದೇವಸ್ಥಾನಕ್ಕೆ ಬಂದಿರುವ ಭಕ್ತ ಗಣಕ್ಕೆ ಕಡಲೆ ಕಾಳು ಉಸಲಿ ಪ್ರಸಾದ ನೀಡಿ.

‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ