AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2025: ನಾಳೆ ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸುತ್ತಿರುವುದು ನಿಜವೇ?

ಆಗಸ್ಟ್​ 2ರಂದು ಅಂದರೆ ನಾಳೆ ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸಲಿದೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಸಖತ್​​ ವೈರಲ್​ ಆಗುತ್ತಿದೆ. ಈ ಸಮಯದಲ್ಲಿ, ಸುಮಾರು 6 ನಿಮಿಷಗಳ ಕಾಲ ಭೂಮಿ ಸಂಪೂರ್ಣವಾಗಿ ಕಗ್ಗತ್ತಲಿನಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ನಾಳೆ ನಿಜವಾಗಿಯೂ ಗ್ರಹಣ ಸಂಭವಿಸಲಿದೆಯೇ? ಅಥವಾ ಈ ರೀತಿ ಸುಳ್ಳು ಸುದ್ದಿ ಹರಡಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Solar Eclipse 2025: ನಾಳೆ ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸುತ್ತಿರುವುದು ನಿಜವೇ?
ಆಗಸ್ಟ್​​ 2 ಸೂರ್ಯಗ್ರಹಣ
ಅಕ್ಷತಾ ವರ್ಕಾಡಿ
|

Updated on:Aug 01, 2025 | 9:29 AM

Share

ಗ್ರಹಣ ಕಾಲವು ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಸಾಕಷ್ಟು ಮಹತ್ವವನ್ನು ಹೊಂದಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವನ್ನು ಕೇವಲ ಖಗೋಳ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಆದರೆ ಧರ್ಮಗ್ರಂಥಗಳ ಪ್ರಕಾರ, ಸೂರ್ಯ ಗ್ರಹಣವೆಂಬುದು ರಾಹು ತನ್ನ ಸೇಡು ತೀರಿಸಿಕೊಳ್ಳಲು ಸೂರ್ಯನನ್ನು ನುಂಗುತ್ತಾನೆ, ಇದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಆಗಸ್ಟ್​ 2ರಂದು ದೀರ್ಘ ಕಗ್ಗತ್ತಲಿನ ಸೂರ್ಯಗ್ರಹಣ ಸಂಭವಿಸಲಿದೆ ಎಂಬ ಸುದ್ದಿ ಸಖತ್​​ ವೈರಲ್ಆಗುತ್ತಿದೆ. ಹಾಗಿದ್ರೆ ನಾಳೆ ಅಂದರೆ ಆಗಸ್ಟ್​ 2 ನಿಜವಾಗಿಯೂ ಗ್ರಹಣ ಸಂಭವಿಸಲಿದೆಯೇ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಆಗಸ್ಟ್ 2 ರಂದು ಅತಿದೊಡ್ಡ ಸೂರ್ಯಗ್ರಹಣ?

ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ ಪ್ರಕಾರ ಆಗಸ್ಟ್ 2 ರಂದು ಅತಿದೊಡ್ಡ ಸೂರ್ಯಗ್ರಹಣ ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ಸುಮಾರು 6 ನಿಮಿಷಗಳ ಕಾಲ ಕಗ್ಗತ್ತಲಿನಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ನಿಜಾಂಶ ಏನೆಂದರೆ ಆಗಸ್ಟ್ 2 ರಂದು ಎಲ್ಲಿಯೂ ಸೂರ್ಯಗ್ರಹಣ ಸಂಭವಿಸುತ್ತಿಲ್ಲ.

ಆಗಸ್ಟ್ 2, 2027ರಲ್ಲಿ ಅತಿದೊಡ್ಡ ಸೂರ್ಯಗ್ರಹಣ ಸಂಭವಿಸುವ ಸಾಧ್ಯತೆ:

ವರ್ಷ ಅಲ್ಲ ಬದಲಾಗಿ 2027 ಆಗಸ್ಟ್ 2 ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ ಎಂದು ಸಾಕಷ್ಟು ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ. ಗ್ರಹಣ ಭಾರತದ ಮೇಲೆ ಪ್ರಭಾವ ಬೀರದಿದ್ದರೂ ಕೂಡ ಸಮಯದಲ್ಲಿ ಸುಮಾರು 6 ನಿಮಿಷಗಳ ವರೆಗೆ ಎಲ್ಲೆಡೆ ಭಾರೀ ಕಗ್ಗತಲು ಆವರಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 2025 ರ ಎರಡನೇ ಸೂರ್ಯಗ್ರಹಣ ಯಾವಾಗ? ಭಾರತದಲ್ಲಿ ಗೋಚರಿಸುತ್ತಾ?

2025 ಎರಡನೇ ಸೂರ್ಯ ಗ್ರಹಣ ಯಾವಾಗ?

2025ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ. ಆದರೆ ಇವುಗಳಲ್ಲಿ ಒಂದು ಮಾತ್ರ ಭಾರತದಲ್ಲಿ ಗೋಚರಿಸಲಿದೆ. ಒಟ್ಟು ನಾಲ್ಕು ಗ್ರಹಣಗಳಲ್ಲಿ ಈಗಾಗಲೇ ಎರಡು ಸಂಭವಿಸಿವೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಅಮಾವಾಸ್ಯೆಯಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಸೆಪ್ಟೆಂಬರ್ 21 ರಂದು ರಾತ್ರಿ 11 ಗಂಟೆಯಿಂದ ಸೆಪ್ಟೆಂಬರ್ 22 ರಂದು ಬೆಳಗಿನ ಜಾವ 3:24 ರವರೆಗೆ ಇರುತ್ತದೆ, ಅಂದರೆ ಈ ಸೂರ್ಯಗ್ರಹಣವು ಒಟ್ಟು 4 ಗಂಟೆ 24 ನಿಮಿಷಗಳ ಕಾಲ ಇರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 am, Fri, 1 August 25

ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ
ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ
ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!