August Festival List 2025: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಇಲ್ಲಿದೆ ಮಾಹಿತಿ

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು, ಧಾರ್ಮಿಕ ಆಚರಣೆಗಳಿಗೆ ಕೊರತೆಯಿಲ್ಲ. ಆಗಸ್ಟ್ ತಿಂಗಳಿಗೆ ಒಂದೇ ಒಂದು ದಿನ ಬಾಕಿಯಿವೆ. ಈ ತಿಂಗಳಲ್ಲಿ ಹಬ್ಬಗಳ ಸಾಲೇ ನಮ್ಮ ಮುಂದಿದೆ. ಹಾಗಾದ್ರೆ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ನಲ್ಲಿ ಆಚರಿಸಲಾಗುವ ಹಬ್ಬಗಳಾವುವು? ಈ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

August Festival List 2025: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಇಲ್ಲಿದೆ ಮಾಹಿತಿ
August Festival List 2025

Updated on: Aug 01, 2025 | 5:00 PM

ದಿನಗಳು, ತಿಂಗಳುಗಳು ಉರುಳಿದ್ದೇ ತಿಳಿಯುತ್ತಿಲ್ಲ. ಆದಾಗಲೇ ಈ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ಗೆ (August) ಕಾಲಿಡಲು ಎಲ್ಲರೂ ಸಜ್ಜಾಗಿದ್ದಾರೆ. ಈ ತಿಂಗಳಲ್ಲಿ ಪ್ರಮುಖ ಹಬ್ಬಗಳು ಹಾಗೂ ವ್ರತ ಆಚರಣೆಗಳಿವೆ. ಈ ತಿಂಗಳ ಮೊದಲ ವಾರದಲ್ಲೇ ವರಮಹಾಲಕ್ಷ್ಮಿ ವ್ರತವಿದ್ದು (Vara Mahalakshmi Vratha) ಇನ್ನು ಶ್ರೀಕೃಷ್ಣಜನ್ಮಾಷ್ಠಮಿ, ಗಣೇಶ ಚತುರ್ಥಿ ಹೀಗೆ ಪ್ರಮುಖ ಹಬ್ಬಗಳು ಈ ತಿಂಗಳಲ್ಲಿ ಬರುತ್ತದೆ. ಹಾಗಾದ್ರೆ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ನಲ್ಲಿ ಆಚರಿಸಲಾಗುವ ಹಬ್ಬಗಳು ಹಾಗೂ ವ್ರತಗಳ ಬಗೆಗಿನ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

  • ಆಗಸ್ಟ್ 2 – ಮಹಾನಕ್ಷತ್ರ ಆಶ್ಲೇಷಾ
  • ಆಗಸ್ಟ್ 2 – ಶ್ರಾವಣ ಶನಿವಾರ
  • ಆಗಸ್ಟ್ 5 – ಪ್ರದೋಷ
  • ಆಗಸ್ಟ್ 8 – ವರಮಹಾಲಕ್ಷ್ಮಿ ವ್ರತ
  • ಆಗಸ್ಟ್ 9 – ಹಯಗ್ರೀವ ಜಯಂತಿ
  • ಆಗಸ್ಟ್ 9 – ರಕ್ಷಾ ಬಂಧನ
  • ಆಗಸ್ಟ್ 10- ಶ್ರಾವಣ ಕೃಷ್ಣಪಕ್ಷ
  • ಆಗಸ್ಟ್ 11 – ಶ್ರೀರಾಘವೇಂದ್ರ ಆರಾಧನೆ
  • ಆಗಸ್ಟ್ 12 – ಸಂಕಷ್ಟಹರ ಚತುರ್ಥಿ
  • ಆಗಸ್ಟ್ 14- ಬಲರಾಮ ಜಯಂತಿ
  • ಆಗಸ್ಟ್ 16 – ಸಿಂಹ ಸಂಕ್ರಮಣ
  • ಆಗಸ್ಟ್ 16 – ಚಾಂದ್ರ ಶ್ರೀಕೃಷ್ಣ ಜನ್ಮಾಷ್ಠಮಿ
  • ಆಗಸ್ಟ್ 17 – ಶ್ರೀಕೃಷ್ಣ ಲೀಲೋತ್ಸವ (ವಿಟ್ಲ ಪಿಂಡಿ)
  • ಆಗಸ್ಟ್ 20 – ಸರ್ವೈಕಾದಶಿ ಅಜಾ
  • ಆಗಸ್ಟ್ 20- ಪ್ರದೋಷ
  • ಆಗಸ್ಟ್ 21 – ಮಾಸಶಿವರಾತ್ರಿ
  • ಆಗಸ್ಟ್ 23 – ಅಮಾವಾಸ್ಯಾ
  • ಆಗಸ್ಟ್ 23 – ಶ್ರಾವಣ ಶನಿವಾರ
  • ಆಗಸ್ಟ್ 24 – ಭಾದ್ರಪದ ಶುಕ್ಲ ಪಕ್ಷ
  • ಆಗಸ್ಟ್ 26 – ಗೌರಿ ತೃತೀಯಾ
  • ಆಗಸ್ಟ್ 26 – ಸಾಮೋಪಕರ್ಮ
  • ಆಗಸ್ಟ್ 27 – ಗಣೇಶ ಚತುರ್ಥ
  • ಆಗಸ್ಟ್ 28 – ಋಷಿ ಜಯಂತ
  • ಆಗಸ್ಟ್ 28 – ಭೂವರಾಹ ಜಯಂತಿ
  • ಆಗಸ್ಟ್ 29 – ಸೂರ್ಯಷಷ್ಠಿ
  • ಆಗಸ್ಟ್ 30 – ನಿರ್ದೋಷ್ಟ ಸಪ್ತಮಿ ವ್ರತ
  • ಆಗಸ್ಟ್ 30 – ಮಹಾನಕ್ಷತ್ರ ಹುಬ್ಬಾ
  • ಆಗಸ್ಟ್ 31 – ದೂರ್ವಾಷ್ಟಮಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:26 pm, Thu, 31 July 25