Varamahalakshmi Vrata 2025: ವರಮಹಾಲಕ್ಷ್ಮಿ ಹಬ್ಬ ಯಾವಾಗ? ಮಹತ್ವ ಮತ್ತು ಪೂಜಾ ವಿಧಿ ವಿಧಾನ ಇಲ್ಲಿದೆ
2025ರ ಶ್ರಾವಣ ಮಾಸದ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್ 8ರ ಶುಕ್ರವಾರ ಆಚರಿಸುತ್ತದೆ. ಈ ವ್ರತದ ಮಹತ್ವ ಮತ್ತು ಆಚರಣಾ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಹುಣ್ಣಿಮೆಯ ಹಿಂದಿನ ಶುಕ್ರವಾರವೇ ವ್ರತ ಆಚರಿಸಲು ಪ್ರಾಶಸ್ತ್ಯ ನೀಡಲಾಗಿದೆ. ಪೂಜಾ ವಿಧಾನಗಳು, ನೈವೇದ್ಯ, ಮತ್ತು ಮಂತ್ರಗಳ ಬಗ್ಗೆಯೂ ಮಾಹಿತಿಯನ್ನು ನೀಡಿದ್ದಾರೆ.

2025 ರ ಶ್ರಾವಣ ಮಾಸ ಜುಲೈ 25 ರಿಂದ ಆಗಸ್ಟ್ 22 ರವರೆಗೆ ಇದೆ. ಈ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವು ಬಹಳ ವಿಶೇಷವಾದುದು. ಆದರೆ ಸಾಕಷ್ಟು ಜನರಿಗೆ ವರಮಹಾಲಕ್ಷ್ಮಿ ಯಾವಾಗ ಎಂಬ ಗೊಂದಲವಿದೆ. ಈ ಗೊಂದಲಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಗುರೂಜಿ ಹೇಳುವಂತೆ, 2025ರ ಆಗಸ್ಟ್ 8ರ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಅತ್ಯಂತ ಶುಭಕರವಾಗಿದೆ. ಈ ದಿನಾಂಕವು ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶಿಯಾಗಿದೆ ಮತ್ತು ಹುಣ್ಣಿಮೆಯ ಮುನ್ನಾದಿನವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವ್ರತವನ್ನು ಆಚರಿಸಿದ ವಿಧಾನಗಳನ್ನು ಪರಿಶೀಲಿಸಿದಾಗ, ಹುಣ್ಣಿಮೆಯ ಹಿಂದಿನ ಶುಕ್ಷವಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.
ವರಮಹಾಲಕ್ಷ್ಮಿ ವ್ರತವು ಪಾರ್ವತಿ ದೇವಿಯು ಶಿವನನ್ನು ಪ್ರಾರ್ಥಿಸಿ ಪಡೆದ ಮಹಾವ್ರತ ಎಂದು ಹೇಳಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಎಲ್ಲಾ ಕಾಮ್ಯಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಶೌನಕಾದಿ ಮಹಾಮುನಿಗಳು ಈ ವ್ರತದ ವಿಧಾನವನ್ನು ಸೂತ ಪುರಾಣಿಕರಿಗೆ ತಿಳಿಸಿದ್ದಾರೆ ಎಂಬುದನ್ನು ಗುರೂಜಿ ವಿವರಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಹಳೆಯದಾದ ದೇವರ ಫೋಟೋಗಳನ್ನು ಅಲ್ಲಲ್ಲಿ ಎಸೆಯಬೇಡಿ ಈ ದೇವಾಲಯಕ್ಕೆ ತಂದುಕೊಡಿ
ವ್ರತದ ಆಚರಣೆಯಲ್ಲಿ ಮನೆಯನ್ನು ಶುಚಿಗೊಳಿಸಿ, ತಳಿರು ತೋರಣಗಳಿಂದ ಅಲಂಕರಿಸುವುದು, ಮಂಗಳ ಸ್ನಾನ ಮಾಡುವುದು, ಗಣಪತಿ ಪೂಜೆಯ ನಂತರ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸುವುದು ಮುಂತಾದ ವಿಧಿವಿಧಾನಗಳು ಒಳಗೊಂಡಿವೆ. “ಓಂ ಶ್ರೀ ಮಹಾಲಕ್ಷ್ಮೀ ನಮಃ” ಎಂಬ ಮಂತ್ರವನ್ನು ಜಪಿಸುವುದು, ಅಷ್ಟೋತ್ತರ ಅಥವಾ ಶತನಾಮಾವಳಿ ಪಠಿಸುವುದು, ಕಮಲ ಪುಷ್ಪಗಳಿಂದ ಅಲಂಕರಿಸುವುದು ಮತ್ತು 12 ಎಳೆಗಳನ್ನು ಕಟ್ಟುವುದು ಸೇರಿದಂತೆ ವಿವಿಧ ಪೂಜಾ ವಿಧಾನಗಳು ಇವೆ. ವಿಶೇಷವಾದ ನೈವೇದ್ಯಗಳನ್ನು ಅರ್ಪಿಸುವುದು ವ್ರತದ ಒಂದು ಭಾಗವಾಗಿದೆ. ಸರಳ ನಿಯಮಗಳನ್ನು ಹೊಂದಿರುವ ಈ ವ್ರತವನ್ನು ಸತಿಪತಿಯವರು ಒಟ್ಟಾಗಿ ಆಚರಿಸಬಹುದು. ಈ ವ್ರತದಿಂದ ಮಹಾಲಕ್ಷ್ಮಿಯ ಕೃಪೆ ದೊರೆಯುವುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Tue, 29 July 25




