Daily Devotional: ಒಡವೆ ಖರೀದಿಸುತ್ತಿದ್ದೀರಾ? ಚಿನ್ನ ಧರಿಸುವ ಮುನ್ನ ಈ ಸಂಗತಿಗಳು ನೆನಪಿರಲಿ..!
ಹೊಸ ಒಡವೆ ಖರೀದಿಸುತ್ತಿದ್ದರೆ ಕೆಲವೊಂದು ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ. ಆದ್ದರಿಂದ ನೀವು ಒಡವೆ ಖರೀದಿಸುವ ಯೋಚನೆಯಲ್ಲಿದ್ದರೆ ಚಿನ್ನ ಧರಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಳ್ಳಿ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ಸಲಹೆ ನೀಡಿದ್ದಾರೆ. ಶುಭ ಮತ್ತು ಅಶುಭ ದಿನಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರಾವಣ ಮಾಸ ಪ್ರಾರಂಭವಾಗಿದೆ, ಈ ಸಮಯದಲ್ಲಿ ಒಡವೆಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿ. ಶ್ರಾವಣದಲ್ಲಿ ಹೊಸ ಒಡವೆಗಳನ್ನು ಖರೀದಿಸುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆದರೆ ಹೊಸ ಒಡವೆ ಖರೀದಿಸುತ್ತಿದ್ದರೆ ಕೆಲವೊಂದು ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ. ಆದ್ದರಿಂದ ನೀವು ಒಡವೆ ಖರೀದಿಸುವ ಯೋಚನೆಯಲ್ಲಿದ್ದರೆ ಚಿನ್ನ ಧರಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಳ್ಳಿ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ಸಲಹೆ ನೀಡುತ್ತಾರೆ.
ಗುರೂಜಿಯವರು ಹೇಳುವಂತೆ, ವಾರದ ಪ್ರತಿಯೊಂದು ದಿನವೂ ಹೊಸ ಆಭರಣ ಧರಿಸಲು ವಿಭಿನ್ನ ಫಲಿತಾಂಶಗಳನ್ನು ಹೊಂದಿದೆ. ಆದ್ದರಿಂದ ಯಾವ ದಿನ ಶುಭ, ಯಾವ ದಿನ ಅಶುಭ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸೋಮವಾರ:
ವಾರದ ಮೊದಲ ದಿನ ಸೋಮವಾರ ಹೊಸ ಒಡವೆ ಧರಿಸುವುದರಿಂದ ಮನಶಾಂತಿ ಮತ್ತು ಶಾಶ್ವತ ಸುಖ ಲಭಿಸುತ್ತದೆ ಎಂದು ಹೇಳಲಾಗಿದೆ. ಇದು ಎಲ್ಲಾ ರಾಶಿಗಳಿಗೂ ಅನ್ವಯಿಸುತ್ತದೆ.
ಮಂಗಳವಾರ:
ಮಂಗಳವಾರ ಹೊಸ ಒಡವೆ ಧರಿಸುವುದು ಕಲಹಗಳಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಈ ದಿನ ಹೊಸ ಒಡವೆ ಧರಿಸುವುದು ಅಷ್ಟು ಶುಭಕರವಲ್ಲ ಎಂದು ಗುರೂಜಿ ಹೇಳುತ್ತಾರೆ.
ಬುಧವಾರ:
ವಿಷ್ಣುವಿನ ದಿನವಾದ ಬುಧವಾರ ಹೊಸ ಒಡವೆ ಧರಿಸುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮೀ ಮತ್ತು ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗುವ ಸಾಧ್ಯತೆ ಇರುತ್ತದೆ.
ಗುರುವಾರ:
ಗುರುವಾರ ಹೊಸ ಒಡವೆ ಧರಿಸುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಉಂಟಾಗುತ್ತದೆ ಮತ್ತು ಗುರುವಿನ ಅನುಗ್ರಹ ಲಭಿಸುತ್ತದೆ. ಇತರ ಒಡವೆಗಳನ್ನು ಪಡೆಯುವ ಸಾಧ್ಯತೆಯೂ ಇದೆ.
ಶುಕ್ರವಾರ:
ಶುಕ್ರವಾರ ಹೊಸ ಒಡವೆಯನ್ನು ಮೊದಲು ದೇವಿಗೆ ಅರ್ಪಿಸಿ ನಂತರ ಧರಿಸಬೇಕು. ಇದು ಮಂಗಳಕರ ಕಾರ್ಯಗಳಿಗೆ ಕಾರಣವಾಗುತ್ತದೆ. ವಿವಾಹದಲ್ಲಿ ವಿಳಂಬವಿದ್ದರೆ ಅದು ಬೇಗನೆ ನಡೆಯುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಹಳೆಯದಾದ ದೇವರ ಫೋಟೋಗಳನ್ನು ಅಲ್ಲಲ್ಲಿ ಎಸೆಯಬೇಡಿ ಈ ದೇವಾಲಯಕ್ಕೆ ತಂದುಕೊಡಿ
ಶನಿವಾರ:
ಶನಿವಾರ ಹೊಸ ಒಡವೆ ಧರಿಸುವುದು ನಷ್ಟಗಳಿಗೆ ಮತ್ತು ಅನುಮಾನಗಳಿಗೆ ಕಾರಣವಾಗಬಹುದು. ಹೀಗಾಗಿ ಈ ದಿನ ಹೊಸ ಒಡವೆ ಧರಿಸುವುದು ಶುಭಕರವಲ್ಲ. ಆಭರಣ ಅಪಹರಣದ ಸಾಧ್ಯತೆಯೂ ಇದೆ.
ಭಾನುವಾರ:
ಭಾನುವಾರ ಹೊಸ ಒಡವೆ ಧರಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು ಮತ್ತು ಕೋಪ ಹೆಚ್ಚಾಗುವ ಸಾಧ್ಯತೆ ಇದೆ. ಸಾಲ ಸೂಲ ಮಾಡಿ ತಂದ ಒಡವೆಗಳನ್ನು ಭಾನುವಾರ ಧರಿಸಿದರೆ ಸಾಲ ತೀರುವುದಿಲ್ಲ ಎಂಬ ನಂಬಿಕೆಯಿದೆ.
ಆದ್ದರಿಂದ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಹೊಸ ಒಡವೆ ಧರಿಸಲು ಶುಭಕರ ದಿನಗಳಾಗಿವೆ. ಮಂಗಳವಾರ, ಶನಿವಾರ ಮತ್ತು ಭಾನುವಾರಗಳನ್ನು ತಪ್ಪಿಸುವುದು ಉತ್ತಮ ಎಂದು ಗುರೂಜಿ ಹೇಳುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




