Chaitra Navratri 2023: ಚೈತ್ರ ನವರಾತ್ರಿಯ ಪ್ರಾರಂಭದ ದಿನಾಂಕ ಮತ್ತು ವಿಶೇಷತೆಗಳು ಇಲ್ಲಿವೆ

Akshatha Vorkady

|

Updated on: Mar 16, 2023 | 6:56 PM

ಚೈತ್ರ ನವರಾತ್ರಿಯು ಹಿಂದೂಗಳ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇದು ಚೈತ್ರ ಮಾಸದ ಮೊದಲ ದಿನದಂದು ಪ್ರಾರಂಭವಾಗುತ್ತದೆ.

Chaitra Navratri 2023: ಚೈತ್ರ ನವರಾತ್ರಿಯ ಪ್ರಾರಂಭದ ದಿನಾಂಕ ಮತ್ತು ವಿಶೇಷತೆಗಳು ಇಲ್ಲಿವೆ
ಚೈತ್ರ ನವರಾತ್ರಿ
Image Credit source: Opoyi Hindi

ವಸಂತ ನವರಾತ್ರಿ ಎಂದೂ ಕರೆಯಲ್ಪಡುವ ಚೈತ್ರ ನವರಾತ್ರಿಯು ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ದೇವಿ ದುರ್ಗೆಯ ಭಕ್ತರು ವೈಭವದಿಂದ ಆಚರಿಸುತ್ತಾರೆ. ಈ ದಿನ ಉಪವಾಸದ ಜೊತೆಗೆ ದೇವಿಯನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುವುದು ಎಂಬ ನಂಬಿಕೆ. ಈ ವರ್ಷ ಚೈತ್ರ ನವರಾತ್ರಿ ಪ್ರಾರಂಭವಾದ ದಿನಾಂಕದ ಬಗ್ಗೆ ಗೊಂದಲವಿದೆ. ಕೆಲವರು ಮಾರ್ಚ್ 21 ರಂದು ಬರುತ್ತದೆ ಎಂದು ನಂಬಿದರೆ ಇನ್ನೂ ಕೆಲವರು ಮಾರ್ಚ್ 22ರಂದು ಈ ಹಬ್ಬವನ್ನು ಆಚರಿಸುತ್ತಾರೆ.

ಈ ವರ್ಷದ ಚೈತ್ರ ನವರಾತ್ರಿಯ ಒಂಬತ್ತು ದಿನಗಳ ಉತ್ಸವವು ಮಾರ್ಚ್ 22ರಂದು ಪ್ರಾರಂಭವಾಗಿ ಮಾರ್ಚ್ 30ರಂದು ಕೊನೆಗೊಳ್ಳುತ್ತದೆ. ಚೈತ್ರದ ಪ್ರತಿಪದ ತಿಥಿಯು 21 ಮಾರ್ಚ್ 2023 ರಂದು ರಾತ್ರಿ 10.52 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅದು ಮರುದಿನ 22 ಮಾರ್ಚ್ 2023 ಕ್ಕೆ ರಾತ್ರಿ 8:20 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ನವರಾತ್ರಿಯು 22 ಮಾರ್ಚ್ 2023 ರಂದು ಪ್ರಾರಂಭವಾಗುತ್ತದೆ. ಮಾರ್ಚ್ 22 ರಂದು ಕಲಶ ಸ್ಥಾಪನೆ ಎಂದು ಕರೆಯಲ್ಪಡುವ ಘಟ ಸ್ಥಾಪನೆ ನಡೆಯಲಿದೆ. ಇದರ ಮುಹೂರ್ತವು ಬೆಳಗ್ಗೆ 6.23 ರಿಂದ 7 ರ ವರೆಗೆ ಇರುತ್ತದೆ. ಈ ಫಟಸ್ಥಾಪನೆಯು ನವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಒಂಬತ್ತು ದಿನಗಳ ಹಬ್ಬದ ಪ್ರಾರಂಭವನ್ನು ಸೂಚಿಸುತ್ತದೆ.

ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಹಿಂದಿದೆ ಅನೇಕ ಆರೋಗ್ಯ ಪ್ರಯೋಜನಗಳು

ಚೈತ್ರ ನವರಾತ್ರಿಯ ದಿನಾಂಕ ಮತ್ತು ಬಣ್ಣಗಳು

  1. ಮಾರ್ಚ್ 22 – ಘಟಸ್ಥಾಪನೆ ದಿನ, ಗಾಢ ನೀಲಿ ಬಣ್ಣ
  2. ಮಾರ್ಚ್ 23 – ಮಾತೆ ಬ್ರಹ್ಮಚಾರಿಣಿ ಪೂಜೆ, ಹಳದಿ ಬಣ್ಣ
  3. ಮಾರ್ಚ್ 24 – ದೇವಿ ಚಂದ್ರಘಂಟಾ ಪೂಜೆ, ಹಸಿರು ಬಣ್ಣ
  4. ಮಾರ್ಚ್ 25 – ಲಕ್ಷ್ಮೀ ಪಂಚಮಿ ಪೂಜೆ, ಬೂದು ಬಣ್ಣ
  5. ಮಾರ್ಚ್ 26 – ಸ್ಕಂದ ಷಷ್ಠಿ, ಕಿತ್ತಳೆ ಬಣ್ಣ
  6. ಮಾರ್ಚ್ 27 -ದೇವಿ ಕಾತ್ಯಯನಿ ಪೂಜೆ, ಬಿಳಿ ಬಣ್ಣ
  7. ಮಾರ್ಚ್ 28- ಮಹಾ ಸಪ್ತಮಿ, ಕೆಂಪು ಬಣ್ಣ
  8. ಮಾರ್ಚ್ 29 -ದುರ್ಗಾ ಅಷ್ಟಮಿ ಅಥವಾ ಮಹಾಗೌರಿ ಪೂಜೆ, ನೀಲಿ ಬಣ್ಣ
  9. ಮಾರ್ಚ್ 30 -ರಾಮನವಮಿ, ಗುಲಾಬಿ ಬಣ್ಣ

ಚೈತ್ರ ನವರಾತ್ರಿಯ ಹಬ್ಬವು ದುರ್ಗಾದೇವಿಯ ಒಂಬತ್ತು ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಯನ್ನು ಪೂಜಿಸುವ ದಿನವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada