ಸಕಲ ಇಷ್ಟಾರ್ಥ ಸಿದ್ಧಿಗಾಗಿ ಪವಾಡ ಪುರುಷ, ಸಂತ ಶ್ರೀ ಶಿರಡಿ ಸಾಯಿಬಾಬಾರನ್ನು ಈ ದಿನ ಪೂಜಿಸಿ; ಇಲ್ಲಿವೆ ಮಂತ್ರಗಳು

ಸಕಲ ಇಷ್ಟಾರ್ಥ ಸಿದ್ಧಿಗಾಗಿ ಪವಾಡ ಪುರುಷ, ಸಂತ ಶ್ರೀ ಶಿರಡಿ ಸಾಯಿಬಾಬಾರನ್ನು ಈ ದಿನ ಪೂಜಿಸಿ; ಇಲ್ಲಿವೆ ಮಂತ್ರಗಳು
ಸಾಯಿಬಾಬಾ

ಗುರುವಾರ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸಾಯಿಬಾಬಾರ ಮೂರ್ತಿ ಅಥವಾ ಫೋಟೋವನ್ನು ಸ್ವಚ್ಛಗೊಳಿಸಿ ಬಳಿಕ ಪೂಜೆಯನ್ನು ಸಲ್ಲಿಸಬೇಕು. ಬಾಬಾರವರ ವಿಗ್ರಹದ ಕೆಳಗೆ ಹಳದಿ ಬಟ್ಟೆಯನ್ನು ಹರಡಿ ನಂತರ ಅವರಿಗೆ ಹೂವಿನ ಹಾರವನ್ನು ಅರ್ಪಿಸಿ.

TV9kannada Web Team

| Edited By: Ayesha Banu

Jun 09, 2022 | 6:30 AM

ಪವಾಡ ಪುರುಷ, ಸಂತ ಶ್ರೀ ಶಿರಡಿ ಸಾಯಿಬಾಬಾರನ್ನು ಯಾರು ಮನಸ್ಸಿನಿಂದ, ಶ್ರದ್ಧೆಯಿಂದ ಪೂಜಿಸುತ್ತಾರೋ ಅವರಿಗೆ ಸಾಯಿಬಾಬಾರ ಕೃಪೆ ಸದಾ ಇರುತ್ತೆ. ಸಾಮಾನ್ಯವಾಗಿ ಗುರುವಾರವನ್ನು ಸಾಯಿಬಾಬಾರಿಗೆ ಸಮರ್ಪಿಸಲಾಗಿದೆ. ಈ ದಿನದಂದು ಸಾಯಿಬಾಬಾರನ್ನು ಪೂಜಿಸುವುದು ಮಂಗಳಕರವೆನ್ನುವ ನಂಬಿಕೆಯಿದೆ. ಹಾಗಾದ್ರೆ ಬನ್ನಿ ಗುರುವಾರದಂದು ಭಗವಾನ್ ಶ್ರೀ ಶಿರಡಿ ಸಾಯಿಬಾಬಾರನ್ನು ಹೀಗೆ ಪೂಜಿಸಬೇಕು ಎಂಬುದರ ಬಗ್ಗೆ ಇಲ್ಲಿ ತಿಳಿಯಿರಿ.

ಗುರುವಾರದಂದು ಸಾಯಿಬಾಬಾರ ಪೂಜೆ ಹೇಗೆ ಮಾಡಬೇಕು? ಸಕಲ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಸಾಯಿಬಾಬಾರ ಮೊರೆ ಹೋಗ್ತಾರೆ. ಸಾಯಿಬಾಬಾ ತನನ್ನು ನಂಬಿದ ಭಕ್ತರನ್ನು ಎಂದೂ ಕೈ ಬಿಟ್ಟಿಲ್ಲ. ಇದಕ್ಕೆ ಅವರ ಭಕ್ತರೆ ಸಾಕ್ಷಿ. ಸಾಯಿಬಾಬಾರ ವಿಶೇಷ ಕೃಪೆಗೆ ಪಾತ್ರರಾಗಲು ಗುರುವಾರ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸಾಯಿಬಾಬಾರ ಮೂರ್ತಿ ಅಥವಾ ಫೋಟೋವನ್ನು ಸ್ವಚ್ಛಗೊಳಿಸಿ ಬಳಿಕ ಪೂಜೆಯನ್ನು ಸಲ್ಲಿಸಬೇಕು. ಬಾಬಾರವರ ವಿಗ್ರಹದ ಕೆಳಗೆ ಹಳದಿ ಬಟ್ಟೆಯನ್ನು ಹರಡಿ ನಂತರ ಅವರಿಗೆ ಹೂವಿನ ಹಾರವನ್ನು ಅರ್ಪಿಸಿ. ಬಾಬಾರವರಿಗೆ ಬೇಳೆ ಹಿಟ್ಟಿನ ಲಡ್ಡುಗಳನ್ನು ಯಾವುದೇ ಸಿಹಿತಿಂಡಿಗಳನ್ನು ಅರ್ಪಿಸಬಹುದು. ಬಾಬಾರ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ಸಾಯಿ ವ್ರತ ಕಥೆಯನ್ನು ಓದಿ ಮತ್ತು ಸಾಯಿಬಾಬಾರನ್ನು ಧ್ಯಾನಿಸಿ. ಬಾಬಾರವರ ಪ್ರಸಾದವನ್ನು ಮನೆಯವರೆಲ್ಲರಿಗೂ ಹಂಚಿ ನೀವೂ ಸ್ವೀಕರಿಸಿ. ಇದನ್ನೂ ಓದಿ: Lord Shiva: ಮಹಾದೇವ ಶಿವನ 19 ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಾಯಿಬಾಬಾ ವ್ರತ ಕಥೆ ಗುಜರಾತ್​‌ನ ನಗರವೊಂದರಲ್ಲಿ ಕೋಕಿಲಾ ಮತ್ತು ಆಕೆಯ ಪತಿ ಮಹೇಶ್‌ಭಾಯ್ ವಾಸಿಸುತ್ತಿದ್ದರು. ಮಹೇಶಭಾಯಿಯ ಸ್ವಭಾವವು ಜಗಳವಾಡುವುದಾಗಿತ್ತು. ಮತ್ತೊಂದೆಡೆ, ಕೋಕಿಲಾ ತುಂಬಾ ಧಾರ್ಮಿಕ ಮಹಿಳೆ, ಯಾವಾಗಲೂ ದೇವರನ್ನು ನಂಬುತ್ತಿದ್ದಳು. ಅವನ ಜಗಳದ ಸ್ವಭಾವದಿಂದಾಗಿ ಗಂಡನ ವ್ಯಾಪಾರ, ಉದ್ಯೋಗ ನಿಂತುಹೋಗಿ ಬೇರೆ ಆದಾಯವೂ ಇರಲಿಲ್ಲ. ಉದ್ಯೋಗದ ಕುಂಠಿತದಿಂದಾಗಿ, ಮಹೇಶಭಾಯ್ ಇಡೀ ದಿನ ಮನೆಯಲ್ಲಿಯೇ ಇರಲು ಪ್ರಾರಂಭಿಸಿದನು ಮತ್ತು ಇದರಿಂದ ತಪ್ಪು ದಾರಿ ಕಡೆಗೆ ನಡೆದಿದ್ದ.

ಅವನು ಕೆಲಸವಿಲ್ಲದೆ ಖಾಲಿ ಇದ್ದುದರಿಂದ ಅವನ ಸ್ವಭಾವವೂ ಮತ್ತಷ್ಟು ಉದ್ವೇಗಕ್ಕೆ ಒಳಗಾಯಿತು. ಒಂದು ದಿನ ಮಧ್ಯಾಹ್ನದ ಸಮಯದಲ್ಲಿ. ಒಬ್ಬ ಮುದುಕ ಅವನ ಮನೆ ಬಾಗಿಲಲ್ಲಿ ನಿಂತು ಬೇಳೆ ಮತ್ತು ಅಕ್ಕಿ ಕೇಳಿದನು. ಧಾರ್ಮಿಕ ಸ್ವಭಾವದ ಕೋಕಿಲಾ ಬೇಳೆ ಮತ್ತು ಅನ್ನವನ್ನು ನೀಡಿ ಮುದುಕನಿಗೆ ಎರಡೂ ಕೈಗಳಿಂದ ನಮಸ್ಕರಿಸಿದಳು. ಮುದುಕನು ಸಾಯಿಬಾಬಾರ ಪರಮ ಭಕ್ತನಾಗಿದ್ದನು. ಹಾಗೂ ಆಕೆಯನ್ನು ಸುಖ, ಸಂತೋಷದಿಂದಿರು ಎಂದು ಆಶೀರ್ವದಿಸಿದನು. ಆಗ ಕೋಕಿಲಾ ಸ್ವಾಮಿ ಸುಖ ನನ್ನ ಅದೃಷ್ಟದಲ್ಲಿಲ್ಲ ತನ್ನ ಜೊತೆ ನಡೆದ ಘಟನೆಯನ್ನು ಹೇಳಿಕೊಳ್ಳುತ್ತಾಳೆ. ಇದನ್ನೂ ಓದಿ: Temple Tour: ಅಮೃತ ಶಿಲೆಯಲ್ಲಿ ದಿವ್ಯ ಸ್ವರೂಪನಾಗಿ ಕಂಗೊಳಿಸುತ್ತಿದ್ದಾನೆ ಸಾಯಿಬಾಬಾ

ಆಗ ಆ ಮುದುಕನು ಸಾಯಿಬಾಬಾರವರ ಉಪವಾಸದ ಬಗ್ಗೆ ಕೋಕಿಲಾಗೆ ತಿಳಿಸಿದನು. ಈ ವ್ರತವನ್ನು ಆಚರಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಬಾಬಾರವರ ಆಶೀರ್ವಾದ ಸದಾ ಅವರ ಮನೆಯಲ್ಲಿ ನೆಲೆಸುತ್ತದೆ ಎಂದು ಸಲಹೆಯನ್ನು ನೀಡಿದನು. ಅ ಮುದುಕನ ಮಾತಿನಂತೆ ಕೋಕಿಲಾ 9 ಗುರುವಾರದವರೆಗೆ ಉಪವಾಸ ಮಾಡಿದಳು. ಆತ ಹೇಳಿದಂತೆ ಎಲ್ಲಾ ಕೆಲಸಗಳನ್ನೂ ಮಾಡಿದಳು. ಸ್ವಲ್ಪ ಸಮಯದ ನಂತರ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಯಿತು. ಗಂಡ ಹೆಂಡತಿ ಇಬ್ಬರೂ ಸುಖವಾಗಿ ಬಾಳಲು ಆರಂಭಿಸಿದರು. ಅವರ ವ್ಯಾಪಾರ-ಉದ್ಯೋಗದಲ್ಲಿ ಮತ್ತೆ ಅಭಿವೃದ್ಧಿ ಪ್ರಾರಂಭವಾಯಿತು ಮತ್ತು ಮಹೇಶ್‌ಭಾಯಿಯ ಸ್ವಭಾವವೂ ಬದಲಾಯಿತು.

ಶ್ರೀ ಸಾಯಿ ಮಂತ್ರಗಳು ಗುರುವಾರ ಉಪವಾಸ ಮಾಡಿ ಈ ಮಂತ್ರವನ್ನು ತಪ್ಪದೇ ಪಠಿಸಬೇಕು. ಸಾಯಿಬಾಬಾರ ವಿಶೇಷ ಕೃಪೆಗೆ ಪಾತ್ರರಾಗಬಹುದು – ಓಂ ಸಾಯಿ ರಾಂ|| – ಓಂ ಸಾಯಿ ಗುರುವಾಯ ನಮಃ|| – ಓಂ ಸಾಯಿ ದೇವಾಯ ನಮಃ|| – ಓಂ ಶಿರ್ಡಿ ದೇವಾಯ ನಮಃ|| – ಓಂ ಸಮಾಧಿದೇವಾಯ ನಮಃ|| – ಓಂ ಸರ್ವದೇವಾಯ ರೂಪಾಯ ನಮಃ|| – ಓಂ ಮಾಲಿಕಾಯ ನಮಃ||

Follow us on

Related Stories

Most Read Stories

Click on your DTH Provider to Add TV9 Kannada