Chaitra Purnima 2024: ಚೈತ್ರ ಹುಣ್ಣಿಮೆಯ ಪೂಜೆ ಹೇಗೆ ಮಾಡಬೇಕು? ಇಲ್ಲಿದೆ ಸರಳ ಪೂಜಾ ವಿಧಾನ

ಈ ಬಾರಿ ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮೆಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಎ. 23 ರಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣು, ಲಕ್ಷ್ಮೀ ದೇವಿ ಮತ್ತು ಚಂದ್ರ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವ್ರತವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದರೆ ದೇವರ ಆಶೀರ್ವಾದ, ಮನಸ್ಸಿಗೆ ಶಾಂತಿ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.

Chaitra Purnima 2024: ಚೈತ್ರ ಹುಣ್ಣಿಮೆಯ ಪೂಜೆ ಹೇಗೆ ಮಾಡಬೇಕು? ಇಲ್ಲಿದೆ ಸರಳ ಪೂಜಾ ವಿಧಾನ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2024 | 3:12 PM

ಪಂಚಾಂಗದ ಪ್ರಕಾರ ಇಡೀ ವರ್ಷದಲ್ಲಿ 12 ಹುಣ್ಣಿಮೆಗಳನ್ನು ಆಚರಣೆ ಮಾಡಲಾಗುತ್ತದೆ. ಆದರೆ ಚೈತ್ರ ಮಾಸದ ಹುಣ್ಣಿಮೆಯು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಬಾರಿ ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮೆಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಎ. 23 ರಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣು, ಲಕ್ಷ್ಮೀ ದೇವಿ ಮತ್ತು ಚಂದ್ರ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವ್ರತವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದರೆ ದೇವರ ಆಶೀರ್ವಾದ, ಮನಸ್ಸಿಗೆ ಶಾಂತಿ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ.

ಚೈತ್ರ ಹುಣ್ಣಿಮೆಯನ್ನು ಎ. 23 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ತಿಥಿ ಮುಂಜಾನೆ 3:26 ಕ್ಕೆ ಪ್ರಾರಂಭವಾಗಿ ಎ. 24 ರಂದು (ಬುಧವಾರ) ಬೆಳಿಗ್ಗೆ 5:19 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಹುಣ್ಣಿಮೆ ವ್ರತವನ್ನು ಮಂಗಳವಾರ ಆಚರಿಸಲಾಗುವುದು. ಹುಣ್ಣಿಮೆಯ ಜೊತೆಗೆ, ಹನುಮಾನ್ ಜಯಂತಿಯನ್ನು ಸಹ ಈ ದಿನ ಆಚರಿಸಲಾಗುತ್ತದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡುವುದು ಶುಭವೆಂದು ಹೇಳಲಾಗುತ್ತದೆ. ಇದರಿಂದ ಎಲ್ಲಾ ಪಾಪಗಳು ದೂರವಾಗಿ ಪುಣ್ಯಫಲ ಸಿಗುತ್ತದೆ. ಚೈತ್ರ ಹುಣ್ಣಿಮೆಯ ದಿನ ಚಂದ್ರೋದಯ ಸಂಜೆ 6:25 ಕ್ಕೆ. ಪೂಜಾ ಸಮಯ ಸಂಜೆ 6:25 ರ ನಂತರವಾಗಿದೆ.

ಚೈತ್ರ ಹುಣ್ಣಿಮೆಯ ಪೂಜೆಯನ್ನು ಹೇಗೆ ಮಾಡುವುದು?

-ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಅಥವಾ ನೀವು ಸ್ನಾನ ಮಾಡುವ ನೀರಿಗೆ ಗಂಗಾ ಜಲ ಹಾಕಿ.

-ಚೈತ್ರ ಹುಣ್ಣಿಮೆಯಂದು, ದೇವರ ಕೋಣೆಯಲ್ಲಿ ಹಳದಿ ಬಟ್ಟೆಯನ್ನು ಇರಿಸಿ ಅದರ ಮೇಲೆ ವಿಷ್ಣು ಮೂರ್ತಿಯನ್ನು ಇಟ್ಟು ಗಂಗಾ ಜಲದಿಂದ, ಬಳಿಕ ಪಂಚಾಮೃತದಿಂದ ಅಭಿಷೇಕ ಮಾಡಿ.

-ಶುಭ ಮುಹೂರ್ತದಲ್ಲಿ ವಿಷ್ಣುವಿನ ಮಂತ್ರಗಳನ್ನು ಪಠಿಸಿ, ಆರತಿ ಮಾಡಿ.

-ತುಳಸಿ ಎಲೆ ಮತ್ತು ವಿಷ್ಣುವಿಗೆ ಪ್ರೀಯವಾದ ಹೆಸರುಬೇಳೆ ಪಾಯಸವನ್ನು ದೇವರಿಗೆ ನೈವೇದ್ಯ ಮಾಡಿ.

-ಸಂಜೆ ಮುಹೂರ್ತದಲ್ಲಿ, ಚಂದ್ರ ದೇವನನ್ನು ಪೂಜೆ ಮಾಡಿ. ಹಸಿ ಹಾಲನ್ನು ಚಂದ್ರನಿಗೆ ಅರ್ಘ್ಯವಾಗಿ ಅರ್ಪಿಸಿ ಬಳಿಕ ನೀವು ಉಪವಾಸ ಮಾಡಿದ್ದರೆ ಅದನ್ನು ಮುಕ್ತಾಯಗೊಳಿಸಿ.

ಇದನ್ನೂ ಓದಿ: ಮಹಾವೀರ ಸ್ವಾಮಿ ಮತ್ತು ಭಗವಾನ್ ಶ್ರೀರಾಮ ಒಂದೇ ಕುಲ? ಇದು ಸತ್ಯವೇ?

-ಚೈತ್ರ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಭಕ್ತರು ದಿನವಿಡೀ ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ.

-ಚೈತ್ರ ಪೂರ್ಣಿಮಾ ಅಥವಾ ಹುಣ್ಣಿಮೆಯಂದು ಉಪವಾಸದ ಸಮಯದಲ್ಲಿ, ಭಕ್ತರು ಧಾನ್ಯಗಳು ಮತ್ತು ತರಕಾರಿಗಳನ್ನು ತಿನ್ನದೆಯೇ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ಹಾಲು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ