AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahavir Jayanti 2024: ಮಹಾವೀರ ಸ್ವಾಮಿ ಮತ್ತು ಭಗವಾನ್ ಶ್ರೀರಾಮ ಒಂದೇ ಕುಲ? ಇದು ಸತ್ಯವೇ?

ಮಹಾವೀರ ಸ್ವಾಮಿಗಳು ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಜನಿಸಿದರು. ಅವರನ್ನು ಜೈನ ಧರ್ಮದ ಕೊನೆಯ ತೀರ್ಥಂಕರ ಎಂದೂ ಕರೆಯಲಾಗುತ್ತದೆ. ಜೈನ ಸಮುದಾಯದಲ್ಲಿ ಮಹಾವೀರ ಜಯಂತಿಗೆ ವಿಶೇಷ ಮಹತ್ವವಿದ್ದು ಈ ಬಾರಿ ಎ. 21 ರಂದು ಆಚರಿಸಲಾಗುತ್ತದೆ. ಇನ್ನು ಮಹಾವೀರರಿಗೂ ಭಗವಾನ್ ಶ್ರೀರಾಮರಿಗೂ ಸಂಬಂಧವಿದೆ ಎನ್ನಲಾಗುತ್ತದೆ! ಇದು ಸತ್ಯವೇ? ಹಾಗಾದರೆ ಅವರಿಬ್ಬರಿಗೂ ಇರುವ ಸಂಬಂಧವೇನು? ಇಲ್ಲಿದೆ ಮಾಹಿತಿ.

Mahavir Jayanti 2024: ಮಹಾವೀರ ಸ್ವಾಮಿ ಮತ್ತು ಭಗವಾನ್ ಶ್ರೀರಾಮ ಒಂದೇ ಕುಲ? ಇದು ಸತ್ಯವೇ?
ಸಾಮದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 20, 2024 | 5:47 PM

Share

ಜೈನ ಧರ್ಮದ 24 ನೇ ತೀರ್ಥಂಕರರಾದ ಮಹಾವೀರ ಸ್ವಾಮಿಗಳು ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಜನಿಸಿದರು. ಅವರನ್ನು ಜೈನ ಧರ್ಮದ ಕೊನೆಯ ತೀರ್ಥಂಕರ ಎಂದೂ ಕರೆಯಲಾಗುತ್ತದೆ. ಜೈನ ಸಮುದಾಯದಲ್ಲಿ ಮಹಾವೀರ ಜಯಂತಿಗೆ ವಿಶೇಷ ಮಹತ್ವವಿದ್ದು ಈ ಬಾರಿ ಎ. 21 ರಂದು ಆಚರಿಸಲಾಗುತ್ತದೆ. ಈ ದಿನ ಜೈನ ಧರ್ಮದ ಅನುಯಾಯಿಗಳು ಭಗವಾನ್ ಮಹಾವೀರನನ್ನು ಭಕ್ತಿಯಿಂದ ಪೂಜಿಸುತ್ತಾರೆ ಮತ್ತು ಅವರು ನೀಡಿದ ಬೋಧನೆಗಳು ಮತ್ತು ತತ್ವಗಳನ್ನು ಗುರುಗಳ ಮೂಲಕ ಕೇಳುತ್ತಾರೆ. ಭಗವಾನ್ ಮಹಾವೀರರು ಸಾರ್ವಜನಿಕ ಕಲ್ಯಾಣಕ್ಕಾಗಿ ಐದು ತತ್ವಗಳನ್ನು ನೀಡಿದರು, ಅದು ಇಂದಿಗೂ ಜನರನ್ನು ಸಮೃದ್ಧ ಜೀವನದತ್ತ ಕರೆದೊಯ್ಯುತ್ತಿದೆ. ಇನ್ನು, ಮಹಾವೀರರಿಗೂ ಭಗವಾನ್ ಶ್ರೀರಾಮರಿಗೂ ಸಂಬಂಧವಿದೆ ಎನ್ನಲಾಗುತ್ತದೆ! ಇದು ಸತ್ಯವೇ? ಹಾಗಾದರೆ ಅವರಿಬ್ಬರಿಗೂ ಇರುವ ಸಂಬಂಧವೇನು? ಇಲ್ಲಿದೆ ಮಾಹಿತಿ.

ಭಗವಾನ್ ಶ್ರೀರಾಮ ಮತ್ತು ಮಹಾವೀರರಿಗೆ ಇರುವ ಸಂಬಂಧವೇನು?

ಭಗವಾನ್ ಮಹಾವೀರ ಸ್ವಾಮಿ, ಜೈನ ಧರ್ಮದ 24 ನೇ ಮತ್ತು ಕೊನೆಯ ತೀರ್ಥಂಕರ, ಕ್ರಿ.ಪೂ 599 ರಲ್ಲಿ ಬಿಹಾರದಲ್ಲಿ ಜನಿಸಿದರು. ಕೆಲವು ನಂಬಿಕೆಗಳ ಪ್ರಕಾರ ಅವರು ಇಕ್ಷ್ವಾಕು ರಾಜವಂಶದಲ್ಲಿ ಜನಿಸಿದ್ದರು ಎನ್ನಲಾಗುತ್ತದೆ. ಹಾಗಾಗಿ ಮಹಾವೀರ ಸ್ವಾಮಿ ಮತ್ತು ಭಗವಾನ್ ಶ್ರೀರಾಮರು ಒಂದೇ ಕುಲದಲ್ಲಿ ಜನಿಸಿದ್ದರು ಎನ್ನಲಾಗುತ್ತದೆ. ಇಬ್ಬರೂ ಕೂಡ ಸೂರ್ಯವಂಶಿಗಳು. ಹಾಗಾಗಿ ಇಬ್ಬರಿಗೂ ಸಂಬಂಧವಿದೆ ಎಂಬ ನಂಬಿಕೆ ಇದೆ. ಕ್ರಿ.ಪೂ. ಆರನೇ ಶತಮಾನದಲ್ಲಿ ಭಗವಾನ್ ಮಹಾವೀರರು ಜೈನ ಧರ್ಮವನ್ನು ಬೋಧಿಸಿದಾಗ, ಈ ಧರ್ಮವು ಪ್ರಾಮುಖ್ಯತೆಗೆ ಬಂದಿತು ಎಂದು ಹೇಳಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ