Mahavir Jayanti 2024: ಮಹಾವೀರ ಸ್ವಾಮಿಯ ಈ ಐದು ತತ್ವಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತೆ!
ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಭಗವಾನ್ ಮಹಾವೀರ ಸ್ವಾಮಿ, ಸಮಾಜ ಮತ್ತು ಜನರ ಕಲ್ಯಾಣಕ್ಕಾಗಿ ಅನೇಕ ಸಂದೇಶಗಳನ್ನು ನೀಡಿದ್ದರು. ಮೋಕ್ಷ ಪಡೆಯಲು ಮಾನವರಿಗೆ ಐದು ನಿಯಮಗಳನ್ನು ತಿಳಿಸಿದ್ದರು ಅವುಗಳನ್ನು ಪಂಚ ಸಿದ್ಧಾಂತ ಅಥವಾ ಪಂಚಶೀಲ ತತ್ವಗಳು ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಬಾರಿ ಮಹಾವೀರ ಜಯಂತಿ ಯಾವಾಗ? ಮಹತ್ವವೇನು? ಇಲ್ಲಿದೆ ಮಾಹಿತಿ.
ಜೈನ ಧರ್ಮದ ಅನುಯಾಯಿಗಳಿಗೆ ಮಹಾವೀರ ಜಯಂತಿ ಬಹಳ ವಿಶೇಷವಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಭಗವಾನ್ ಮಹಾವೀರ ಸ್ವಾಮಿ, ಸಮಾಜ ಮತ್ತು ಜನರ ಕಲ್ಯಾಣಕ್ಕಾಗಿ ಅನೇಕ ಸಂದೇಶಗಳನ್ನು ನೀಡಿದ್ದರು. ಮೋಕ್ಷ ಪಡೆಯಲು ಮಾನವರಿಗೆ ಐದು ನಿಯಮಗಳನ್ನು ತಿಳಿಸಿದ್ದರು ಅವುಗಳನ್ನು ಪಂಚ ಸಿದ್ಧಾಂತ ಅಥವಾ ಪಂಚಶೀಲ ತತ್ವಗಳು ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಬಾರಿ ಮಹಾವೀರ ಜಯಂತಿ ಯಾವಾಗ? ಮಹತ್ವವೇನು? ಇಲ್ಲಿದೆ ಮಾಹಿತಿ.
ಈ ವರ್ಷ ಮಹಾವೀರ ಜಯಂತಿಯನ್ನು ಎ. 21 ರಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಭಗವಾನ್ ಮಹಾವೀರರ ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾವೀರ ಸ್ವಾಮಿಯು ಕ್ರಿ.ಪೂ 599 ರಲ್ಲಿ ಚೈತ್ರ ಮಾಸದ 13 ನೇ ದಿನ ಬಿಹಾರದ ಕುಂಡ್ಗ್ರಾಮ್ / ಕುಂದಲ್ಪುರದ ರಾಜಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಬಾಲ್ಯದ ಹೆಸರು ವರ್ಧಮಾನ್. 30 ನೇ ವಯಸ್ಸಿನಲ್ಲಿ, ಅವರು ಸಿಂಹಾಸನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಹಿಡಿದರು.
ಭಗವಾನ್ ಮಹಾವೀರ ಯಾರು?
ಪೌರಾಣಿಕ ಕಥೆಗಳ ಪ್ರಕಾರ, ಮಹಾವೀರ ಸ್ವಾಮಿಯನ್ನು ಜೈನ ಧರ್ಮದ 24 ನೇ ತೀರ್ಥಂಕರರೆಂದು ಹೇಳಲಾಗುತ್ತದೆ. ಕಠಿಣ ತಪಸ್ಸು ಮಾಡಿ ಇಂದ್ರಿಯಗಳು ಮತ್ತು ಮನಸ್ಸಿನ ಭಾವನೆಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರನ್ನು ತೀರ್ಥಂಕರರು ಎಂದು ಹೇಳಲಾಗುತ್ತದೆ.
ಮಹಾವೀರ ಜಯಂತಿಯಂದು ಜೈನರು ಏನು ಮಾಡುತ್ತಾರೆ?
ಈ ದಿನದಂದು, ಮಹಾವೀರ ಸ್ವಾಮಿಯ ಭಕ್ತರು ಮೆರವಣಿಗೆಗಳನ್ನು ನಡೆಸುತ್ತಾರೆ. ಮನೆ ಅಥವಾ ಬಸದಿಗಳಲ್ಲಿ ಮಹಾವೀರ ಸ್ವಾಮಿಯ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡುತ್ತಾರೆ. ಈ ಸಮಯದಲ್ಲಿ, ಜೈನ ಪಂಥದ ಗುರುಗಳು ಭಗವಾನ್ ಮಹಾವೀರರ ಬೋಧನೆಗಳನ್ನು ವಿವರಿಸುತ್ತಾರೆ. ಈ ದಿನ, ದೇಶಾದ್ಯಂತ ಜೈನ ಬಸದಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಇದನ್ನೂ ಓದಿ: ಆನೆಗಳು ಪುತ್ತೂರಿನ ನೀರು ಕುಡಿಯುವಂತಿಲ್ಲ ಯಾಕೆ? ಗಜರಾಜನ ದೇಹದ ಭಾಗದಿಂದಲ್ಲೇ ಸೃಷ್ಟಿಯಾದ ಊರುಗಳಿವು
ಭಗವಾನ್ ಮಹಾವೀರರ ಐದು ತತ್ವಗಳು:
ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆಯ ಮಾರ್ಗವನ್ನು ಅಳವಡಿಸಿಕೊಂಡ ಭಗವಾನ್ ಮಹಾವೀರ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಮಾನವಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ತೋರಿಸಿದರು. ಮಹಾವೀರ ಸ್ವಾಮಿಗಳು 5 ಮುಖ್ಯ ತತ್ವಗಳನ್ನು ನೀಡಿದ್ದರು, ಅವುಗಳನ್ನು ಪಂಚಶೀಲ ತತ್ವಗಳು ಎಂದೂ ಕರೆಯಲಾಗುತ್ತದೆ.
ಸತ್ಯ
ಅಹಿಂಸೆ
ಅಸ್ತೇಯ (ಕದಿಯದಿರುವುದು ಎಂದರ್ಥ)
ಅಪರಿಗ್ರಹ (ವಿಷಯಗಳು ಮತ್ತು ವಸ್ತುಗಳ ಬಗ್ಗೆ ಮೋಹವಿಲ್ಲದಿರುವುದು)
ಬ್ರಹ್ಮಚರ್ಯವನ್ನು ಅನುಸರಿಸುವುದು.
ಭಗವಾನ್ ಮಹಾವೀರರ ಈ ಐದು ತತ್ವಗಳನ್ನು ಅನುಸರಿಸುವುದರಿಂದ ವ್ಯಕ್ತಿಯು ಮೋಕ್ಷ ಪಡೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ