AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puttur Mahalingeshwar : ಆನೆಗಳು ಪುತ್ತೂರಿನ ನೀರು ಕುಡಿಯುವಂತಿಲ್ಲ ಯಾಕೆ? ಗಜರಾಜನ ದೇಹದ ಭಾಗದಿಂದಲ್ಲೇ ಸೃಷ್ಟಿಯಾದ ಊರುಗಳಿವು

ಹತ್ತೂರು ಬಿಟ್ಟರೂ ಪುತ್ತೂರು ಬಿಡೆ ಎಂಬ ಮಾತು ಪುತ್ತೂರಿಗೆ ಇರುವ ವಿಶೇಷತೆಯನ್ನು ತೋರಿಸುತ್ತದೆ. ಈ ದೇವಸ್ಥಾನದ ಜೊತೆಗೆ ಪುತ್ತೂರಿನ ಸುತ್ತಮುತ್ತ ಇರುವ ಊರಿನ ಹೆಸರಿನಲ್ಲೂ ವಿಶೇಷತೆ ಇದೆ ಎಂದರೆ ನಂಬುತ್ತೀರಾ? ಹೌದು. ಪುತ್ತೂರಿನ ಮಹಾಲಿಂಗೇಶ್ವರನಿಗೂ ಹಾಗೂ ಅಲ್ಲಿನ ಊರುಗಳಿಗೂ ಒಂದು ಸಂಬಂಧವಿದೆ ಮತ್ತು ಸಾವಿರಾರು ವರ್ಷಗಳ ಇತಿಹಾಸವಿದೆ. ಏನದು? ಇಲ್ಲಿದೆ ಮಾಹಿತಿ.

Puttur Mahalingeshwar : ಆನೆಗಳು ಪುತ್ತೂರಿನ ನೀರು ಕುಡಿಯುವಂತಿಲ್ಲ ಯಾಕೆ? ಗಜರಾಜನ ದೇಹದ ಭಾಗದಿಂದಲ್ಲೇ ಸೃಷ್ಟಿಯಾದ ಊರುಗಳಿವು
ಪುತ್ತೂರು, ಮಹಾಲಿಂಗೇಶ್ವರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 20, 2024 | 9:55 AM

Share

ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ (Puttur Mahalingeshwar) ಕ್ಷೇತ್ರದ ಹಿರಿಮೆ ಅಪಾರ. ಹತ್ತೂರು ಬಿಟ್ಟರೂ ಪುತ್ತೂರು ಬಿಡೆ ಎಂಬ ಮಾತು ಪುತ್ತೂರಿಗೆ ಇರುವ ವಿಶೇಷತೆಯನ್ನು ತೋರಿಸುತ್ತದೆ. ಈ ದೇವಸ್ಥಾನದ ಜೊತೆಗೆ ಪುತ್ತೂರಿನ ಸುತ್ತಮುತ್ತ ಇರುವ ಊರಿನ ಹೆಸರಿನಲ್ಲೂ ವಿಶೇಷತೆ ಇದೆ ಎಂದರೆ ನಂಬುತ್ತೀರಾ? ಹೌದು. ಪುತ್ತೂರಿನ ಮಹಾಲಿಂಗೇಶ್ವರನಿಗೂ ಹಾಗೂ ಅಲ್ಲಿನ ಊರುಗಳಿಗೂ ಒಂದು ಸಂಬಂಧವಿದೆ ಮತ್ತು ಸಾವಿರಾರು ವರ್ಷಗಳ ಇತಿಹಾಸವಿದೆ. ಏನದು? ಇಲ್ಲಿದೆ ಮಾಹಿತಿ.

ಬಹಳ ಹಿಂದೆ, ಬ್ರಾಹ್ಮಣೋತ್ತಮರೊಬ್ಬರು ಪ್ರಯಾಣ ಮಾಡುತ್ತಾ ಪುತ್ತೂರಿಗೆ ಬಂದರು. ಅಲ್ಲಿ ಅವರು ಕಾಶಿ ಕ್ಷೇತ್ರದಿಂದ ತಂದ ಶಿವಲಿಂಗವನ್ನು ಪೂಜಿಸುವ ಮೊದಲು ಕೆರೆಯಲ್ಲಿ ಸ್ನಾನ ಮಾಡಲು ತೆರಳಿದಾಗ ಮರೆತು ಶಿವಲಿಂಗವನ್ನು ಭೂಮಿಯ ಮೇಲೆ ಇಟ್ಟರು. ಬಳಿಕ ಅದನ್ನು ಎತ್ತಲು ಪ್ರಯತ್ನಿಸಿದರು. ಆದರೆ ಶಿವಲಿಂಗ ಮೇಲೆ ಬರಲಿಲ್ಲ. ಇನ್ನಷ್ಟು ಶಕ್ತಿಯಿಂದ ಮೇಲೆತ್ತಲು ಪ್ರಯತ್ನಿಸಿದರೂ, ಲಿಂಗವನ್ನು ಕದಲಿಸಲು ಸಾಧ್ಯವಾಗಲಿಲ್ಲ. ಆಗ ಬ್ರಾಹ್ಮಣೋತ್ತಮರು ಶಿವಾಪರಾಧವಾಯಿತೆಂದು ದುಃಖಿತರಾದರು. ಬಳಿಕ ಆ ಸ್ಥಳದಲ್ಲಿ ಹತ್ತಾರು ಜನ ಸೇರಿ, ಶಿವಲಿಂಗವನ್ನು ಕೀಳಲು ಪ್ರಯತ್ನಿಸಿದರು. ಆ ಸಮಯದಲ್ಲಿ ಅಲ್ಲಿಯ ಪ್ರದೇಶವನ್ನು ಆಳುತ್ತಿದ್ದ ರಾಜ ಬಂಗರಸ ತನ್ನ ಸಿಪಾಯಿಗಳನ್ನು ಕರೆದು ಲಿಂಗವನ್ನು ಕೀಳಲು ಮತ್ತೊಮ್ಮೆ ಪ್ರಯತ್ನಿಸಿದ. ಅವನ ಆಳುಕಾಳುಗಳು, ಪುರ ಜನರ ಎಲ್ಲಾ ಪ್ರಯತ್ನಗಳೂ ನಿಷ್ಪ್ರಯೋಜಕವಾದವು.

ಇದನ್ನೂ ಓದಿ; ಈ ದೇವಾಲಯದಲ್ಲಿರುವ ದೇವಿ ಬಂಜೆತನ ದೂರ ಮಾಡುತ್ತಾಳೆ! ಎಲ್ಲಿದೆ ಗೊತ್ತಾ?

ಬಳಿಕ ಬಂಗರಸನು ತನ್ನ ಪಟ್ಟದ ಆನೆಯನ್ನು ಕರೆತಂದು ಸರಪಳಿಯಿಂದ ಶಿವಲಿಂಗವನ್ನು ಬಿಗಿದು, ಆನೆಯಿಂದ ಲಿಂಗವನ್ನು ಎಳೆಸಿದ. ಆಗ ಚಿಕ್ಕದಾಗಿದ್ದ ಶಿವಲಿಂಗವು ಮಹಾಲಿಂಗೇಶ್ವರನಾಗಿ ಕಂಗೊಳಿಸಿದನು. ದುಷ್ಟರಿಗೆ ರುದ್ರರೂಪಿ, ಪ್ರಳಯಂತಕನಾಗಿ ಪ್ರಜ್ವಲಿಸಿದನು. ಇದಾವುದನ್ನು ಗಮನಿಸದ ಆನೆಯು ಇನ್ನೂ ಶಿವಲಿಂಗವನ್ನು ಎಳೆಯುತ್ತಿದ್ದುದರಿಂದ ನೋವು ತಾಳಲಾರದೆ ಭಯಂಕರವಾಗಿ ಘೀಳಿಡುತ್ತಾ ದೊಪ್ಪನೆ ಬಿದ್ದಿತು. ಆಗ, ಆನೆಯ ಅಂಗಾಗಳು ಛಿದ್ರೋಪಛಿದ್ರಗೊಂಡು ದೂರ ದೂರುಗಳಿಗೆ ಎಸೆಯಲ್ಪಟ್ಟವು ಆನೆಯ ಕೊಂಬು ಬಿದ್ದ ಸ್ಥಳವು ಮುಂದೆ ಕೊಂಬೆಟ್ಟು ಎಂದು ಕರೆಯಲ್ಪಟ್ಟಿತು. ಅದರಂತೆ ಕರಿ ಬಿದ್ದಲ್ಲಿ ಕರಿಯಾಲ, ಕಾಲು ಬಿದ್ದಲ್ಲಿ ಕಾರ್ಜಾಲ, ಕೈ ಬಿದ್ದಲ್ಲಿ ಕೈಪಳ, ಬಾಲ ಬಿದ್ದಲ್ಲಿ ಬೀದಿಮಜಲು ತಲೆ ಬಿದ್ದಲ್ಲಿ ತಾಲೆಪ್ಪಾಡಿ, ಬೆನ್ನು ಬಿದ್ದಲ್ಲಿ ಬೆರಿಪದವು ಎಂಬ ಹೆಸರುಗಳು ಬಂದವು. ಆನೆ ಬಿದ್ದ ಹೊಂಡವೇ ಈಗ ಕೆರೆಯಾಗಿ ಅಲ್ಲಿನ ನೀರು ಗಜ ಸಂತತಿಗೆ ವಿಷಪ್ರಾಯವಾಗಿದೆ. ಇಂದಿಗೂ ಅಲ್ಲಿಯ ನೀರನ್ನು ಆನೆಗಳಿಗೆ ಕುಡಿಸುವಂತಿಲ್ಲ. ಈ ರೀತಿಯಾಗಿ ಸುಪ್ರಸನ್ನನಾದ ಶಿವನು ಮಹಾಲಿಂಗೇಶ್ವರನಾಗಿ ಪುತ್ತೂರಿನ ಪುಣ್ಯಭೂಮಿಯಲ್ಲಿ ನೆಲೆಸಿದನು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ