AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradosh Vrat 2024: ನಿಮ್ಮ ಆಸೆಗಳು ಈಡೇರಲು ಪ್ರದೋಷ ವ್ರತದಂದು ಈ ರೀತಿ ಮಾಡಿ

ಈ ಬಾರಿ ಹಿಂದೂ ಹೊಸ ವರ್ಷದ ಮೊದಲ ಪ್ರದೋಷ ವ್ರತವನ್ನು ಎ. 21 ರಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ತಮ್ಮ ಅಪೇಕ್ಷಿತ ಬಯಕೆಗಳನ್ನು ಪೂರೈಸಿಕೊಳ್ಳಲು ಸಹ ಈ ಉಪವಾಸ ಮಾಡುತ್ತಾರೆ. ಈ ವ್ರತವನ್ನು ಶಿವ ಭಕ್ತರು ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಜೊತೆಗೆ ಈ ಶುಭ ದಿನದಂದು ಗಣೇಶ ಮತ್ತು ತಾಯಿ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ.

Pradosh Vrat 2024: ನಿಮ್ಮ ಆಸೆಗಳು ಈಡೇರಲು ಪ್ರದೋಷ ವ್ರತದಂದು ಈ ರೀತಿ ಮಾಡಿ
Pradosh Vrat 2024
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 19, 2024 | 5:39 PM

Share

ಪ್ರತಿ ತಿಂಗಳ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ತ್ರಯೋದಶಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ವಾರದ ಏಳು ದಿನಗಳಲ್ಲಿ, ಪ್ರದೋಷ ವ್ರತವನ್ನು ಅದು ಬರುವ ವಾರದ ಆಧಾರದ ಮೇಲೆ ಹೆಸರಿಸಲಾಗುತ್ತದೆ, ಆದ್ದರಿಂದ ಈ ಬಾರಿ ರವಿವಾರ ಬಂದಿರುವುದರಿಂದ ಇದನ್ನು ರವಿ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಈ ವ್ರತವನ್ನು ಶಿವ ಭಕ್ತರು ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಜೊತೆಗೆ ಈ ಶುಭ ದಿನದಂದು ಗಣೇಶ ಮತ್ತು ತಾಯಿ ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ಹಿಂದೂ ಹೊಸ ವರ್ಷದ ಮೊದಲ ಪ್ರದೋಷ ವ್ರತವನ್ನು ಎ. 21 ರಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ತಮ್ಮ ಅಪೇಕ್ಷಿತ ಬಯಕೆಗಳನ್ನು ಪೂರೈಸಿಕೊಳ್ಳಲು ಸಹ ಈ ಉಪವಾಸ ಮಾಡುತ್ತಾರೆ. ತಕ್ಷಣವೇ ನಿಮಗೆ ಪರಿಹಾರ ಸಿಗದಿದ್ದರೂ ಸಹ ಕ್ರಮೇಣ ಶಿವನ ಆಶೀರ್ವಾದದಿಂದ ಯಾವ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂಬುದು ಮನವರಿಕೆಯಾಗುತ್ತದೆ.

ರವಿ ಪ್ರದೋಷ ವ್ರತದಂದು ಈ ರೀತಿ ಮಾಡಿ:

ಶಿವನನ್ನು ಪೂಜಿಸಿ:

ಜ್ಯೋತಿಷಿಗಳ ಪ್ರಕಾರ, ರವಿ ಪ್ರದೋಷ ವ್ರತದ ದಿನ, ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ ಶಿವನನ್ನು ಪೂಜಿಸಿ. ಬಳಿಕ ಪಂಚಾಕ್ಷರಿ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ, ಶಿವನು ಸಂತೋಷಗೊಳ್ಳುತ್ತಾನೆ ಮತ್ತು ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ.

ಆದಿತ್ಯ ಹೃದಯ ಸ್ತೋತ್ರವನ್ನು 108 ಬಾರಿ ಪಠಿಸಿ:

ರವಿ ಪ್ರದೋಷ ವ್ರತವು ಸೂರ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಹಾಗಾಗಿ ಈ ದಿನ ನೀವು ಆದಿತ್ಯ ಹೃದಯ ಸ್ತೋತ್ರವನ್ನು 108 ಬಾರಿ ಪಠಿಸಿದರೆ ಶುಭ ಫಲಿತಾಂಶ ಮತ್ತು ರಾಜಯೋಗ ಪಡೆಯುತ್ತೀರಿ. ಹಗಲಿನಲ್ಲಿ ಶಿವನನ್ನು ಪೂಜಿಸಿದ ನಂತರ ಇದನ್ನು ಮಾಡಬೇಕು.

ಬಿಲ್ವಪತ್ರೆ ಅರ್ಪಿಸಿ:

ರವಿ ಪ್ರದೋಷ ವ್ರತದ ದಿನ ಶಿವನಿಗೆ ಬಿಲ್ವಪತ್ರೆ ಯನ್ನು ಅರ್ಪಿಸಿ. ನಿಮ್ಮ ಬಯಕೆಯನ್ನು ದೇವರ ಮುಂದೆ ಹೇಳಿ. ಇದನ್ನು ಸೂರ್ಯಾಸ್ತದ ಸಮಯದಲ್ಲಿ ಮಾಡಬೇಕು. ಹೀಗೆ ಮಾಡುವುದರಿಂದ ಶಿವನು ಸಂತೋಷಗೊಳ್ಳುತ್ತಾನೆ ಮತ್ತು ನಿಮ್ಮ ಆಸೆಯನ್ನು ಈಡೇರಿಸುತ್ತಾನೆ.

ಶಿವನಿಗೆ ಪಂಚಾಮೃತದ ಅಭಿಷೇಕ:

ಪ್ರದೋಷ ವ್ರತದಂದು ಶಿವನಿಗೆ ಪಂಚಾಮೃತದ ಅಭಿಷೇಕ ಮಾಡಿ. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ದೂರವಾಗುತ್ತದೆ. ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ದರೆ ನಿಮ್ಮ ಭವಿಷ್ಯ ಹೇಗಿರುತ್ತೆ ನೋಡಿ

ಬಿಳಿ ವಸ್ತುಗಳನ್ನು ದಾನ ಮಾಡಿ:

ರವಿ ಪ್ರದೋಷ ವ್ರತದ ಸಮಯದಲ್ಲಿ ದಾನಕ್ಕೂ ವಿಶೇಷ ಮಹತ್ವವಿದೆ. ಆದ್ದರಿಂದ ಈ ದಿನ ಹಾಲು, ಮೊಸರು, ಅನ್ನ ಹೀಗೆ ಬಿಳಿ ವಸ್ತುಗಳನ್ನು ದಾನ ಮಾಡಿ. ಇದು ಉದ್ಯೋಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಭಾನುವಾರವಾಗಿರುವುದರಿಂದ ನೀವು ಗೋಧಿ, ಬಾರ್ಲಿ, ತಾಮ್ರ, ಕೆಂಪು ಹೂವುಗಳನ್ನು ಕೂಡ ದಾನ ಮಾಡಬಹುದು.

ಶಿವ ಪ್ರದೋಷ ಸ್ತೋತ್ರದ ಪಠಣ:

ಶಿವ ಪುರಾಣದ ಪ್ರಕಾರ, ರವಿ ಪ್ರದೋಷ ವ್ರತವನ್ನು ಆಚರಿಸುವ ಮೂಲಕ, ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಂದ ಮುಕ್ತಿ ಪಡೆಯುತ್ತಾನೆ. ಅಲ್ಲದೆ ಪ್ರತಿಯೊಂದು ಆಸೆಯೂ ಈಡೇರುತ್ತದೆ. ನೀವು ಸಹ ನಿಮ್ಮ ಅಪೇಕ್ಷಿತ ವರನನ್ನು ಪಡೆಯಲು ಬಯಸಿದರೆ ಅಥವಾ ಯಾವುದೇ ಆಸೆಯನ್ನು ಪೂರೈಸಿಕೊಳ್ಳಲು ಬಯಸಿದಲ್ಲಿ ರವಿ ಪ್ರದೋಷದ ವ್ರತ ಮಾಡಿ ಶಿವನನ್ನು ಪೂಜಿಸಿ. ಇದಲ್ಲದೆ, ಪೂಜೆಯ ಸಮಯದಲ್ಲಿ ಶಿವ ಪ್ರದೋಷ ಸ್ತೋತ್ರವನ್ನು ಪಠಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ