ಆಚಾರ್ಯ ಚಾಣಕ್ಯ ಅವರು ಜೀವನದಲ್ಲಿ ಬಹಳ ಮುಖ್ಯವಾದ ಮತ್ತು ಪ್ರಯೋಜನಕಾರಿ ವಿಷಯಗಳನ್ನು ಹೇಳಿದರು. ಆಚಾರ್ಯ ಚಾಣಕ್ಯ ಒಬ್ಬ ಪ್ರಸಿದ್ಧ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿ. ಮಹಾನ್ ತಂತ್ರಜ್ಞ ಮತ್ತು ರಾಜನೀತಿಜ್ಞ ಕೂಡ.. ಆಚಾರ್ಯ ಚಾಣಕ್ಯ ಮಾನವನ ಜೀವನ, ಆಡಳಿತ ಇತ್ಯಾದಿಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಹೊಂದಿದ್ದರು. ಅವರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವ ಕೆಲವು ಪುಸ್ತಕಗಳನ್ನು ಬರೆದರು. ಅರ್ಥ ಶಾಸ್ತ್ರವನ್ನು ಚಾಣಕ್ಯ (Chanakya Niti) ಬರೆದಿದ್ದಾರೆ. ಆತನನ್ನು ಕೌಟಿಲ್ಯ ಎಂದೂ ಕರೆಯುತ್ತಾರೆ. ಮೇಲಾಗಿ ಮಾನವನ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿ ನೀತಿ ಶಾಸ್ತ್ರ ಎಂಬ ಪುಸ್ತಕವನ್ನು ಬರೆದರು. ಈ ನೀತಿ ಶಾಸ್ತ್ರ ಇಂದಿನ ಯುವಕರಿಗೆ ಮಾರ್ಗದರ್ಶಿ (Spiritual) ಎನ್ನುತ್ತಾರೆ ಹಿರಿಯರು. ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಪುರುಷ ಜೀವನದಲ್ಲಿ ಪ್ರಗತಿ ಹೊಂದಬೇಕಾದರೆ ಕೆಲವು ಮಹಿಳೆಯರಿಂದ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಬೇಕು (cautious) ಎಂದು ಹೇಳುತ್ತಾನೆ.
ಇಡೀ ಜಗತ್ತು ಆಚಾರ್ಯ ಚಾಣಕ್ಯ ಬರೆದ ಚಾಣಕ್ಯ ನೀತಿ ಶಾಸ್ತ್ರವನ್ನು ಅನುಸರಿಸುತ್ತದೆ. ಚಾಣಕ್ಯ ಪದ್ಧತಿಯನ್ನು ಅಳವಡಿಸಿಕೊಂಡು ಸಾಮಾನ್ಯನೊಬ್ಬ ರಾಜ್ಯಭಾರ ಮಾಡಿದ. ಆತ ಪ್ರಪಂಚದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದ. ಆಚಾರ್ಯ ಚಾಣಕ್ಯ ಅವರ ಜೀವನ ವಿಧಾನ ಮತ್ತು ವಿಷಯಗಳನ್ನು ಅನುಸರಿಸುವ ಮೂಲಕ ಯಾರೇ ಆಗಲಿ ಜೀವನದಲ್ಲಿ ಸಂತೋಷದಿಂದ ಬದುಕುತ್ತಾರೆ ಎಂದು www.tv9marathi.com ತನ್ನ ಆಧ್ಯಾತ್ಮ ಲೇಖನದಲ್ಲಿ ತಿಳಿಸಿದೆ.
ಒಬ್ಬ ವ್ಯಕ್ತಿಯು ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾದ ಉಪಯುಕ್ತ ಮತ್ತು ಪ್ರಮುಖ ವಿಷಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ಅದು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿ ಶಾಸ್ತ್ರದಲ್ಲಿ ಪುರುಷ ಕೆಲವು ಮಹಿಳೆಯರಿಂದ ದೂರವಿರಬೇಕು ಎಂದು ಉಲ್ಲೇಖಿಸುತ್ತಾನೆ. ಕೆಲವು ಮಹಿಳೆಯರಿಂದ ದೂರವಿರುವುದು ಉತ್ತಮ ಎಂದೂ ಬುದ್ಧಿವಾದ ಹೇಳಿದ್ದಾರೆ. ಅಂತಹ ಮಹಿಳೆಯರೊಂದಿಗೆ ಒಡನಾಟವು ಯಾವಾಗಲೂ ಹಾನಿಕಾರಕವಾಗಿದೆ ಎಂದು ಅವರು ಹೇಳಿದರು.
1. ಚಿಕ್ಕ ಕುತ್ತಿಗೆಯನ್ನು ಹೊಂದಿರುವ ಮಹಿಳೆಯರಿಂದ ಅಂತರ ಕಾಯ್ದುಕೊಳ್ಳಿ. ಏಕೆಂದರೆ ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಚಿಕ್ಕ ಕುತ್ತಿಗೆಯನ್ನು ಹೊಂದಿರುವ ಮಹಿಳೆಯರು ಯಾವಾಗಲೂ ಇತರರ ತೀರ್ಪಿನ ಮೇಲೆ ಅವಲಂಬಿತರಾಗಿರುತ್ತಾರೆ.
Also Read: Jaya Parvati Vrat 2024 – ಜಯ ಪಾರ್ವತಿ ವ್ರತ ಯಾವಾಗ? ಈ ಉಪವಾಸದಲ್ಲಿ ಉಪ್ಪಿನ ಬಳಕೆ ನಿಷೇಧಿಸಲಾಗಿದೆ ಏಕೆ?
2. ಚಪ್ಪಟೆ ಕುತ್ತಿಗೆಯನ್ನು ಹೊಂದಿರುವ ಮಹಿಳೆಯರು ತುಂಬಾ ಕೋಪ ಮತ್ತು ಕ್ರೂರ ಸ್ವಭಾವದವರು ಎಂದು ಹೇಳಲಾಗುತ್ತದೆ.
3. ಮಹಿಳೆಗೆ ಕೆನ್ನೆಯಲ್ಲಿ ಕುಳಿ (ಡಿಂಪಲ್) ಇದ್ದರೆ.. ಅವರ ಆಲೋಚನೆ ಚೆನ್ನಾಗಿಲ್ಲ ಎಂದರ್ಥ. ಅಂತವರು ನಿಮ್ಮಿಂದ ಹೆಚ್ಚಿನದ್ದು ನಿರೀಕ್ಷೆ ಮಾಡುತ್ತಾರೆ ಎಂದು ಚಾಣಕ್ಯ ಹೇಳಿದರು
4. ಇದಲ್ಲದೆ, ಹಳದಿ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಭಯಾನಕವಾಗಿ ಕಾಣುತ್ತಾರೆ. ಅಂತಹ ಮಹಿಳೆ ಕೆಟ್ಟ ಕೋಪವನ್ನು ಹೊಂದಿರುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)