Kannada News Spiritual chanakya niti according to acharya-chanakya these 4 things are precious and valuable know in kannada
Chanakya Niti: ಜೀವನದಲ್ಲಿ ಈ 4 ಸಂಗತಿಗಳಿಗೇ ಕಿಮ್ಮತ್ತು ಇರುವುದು-ಕಿಮ್ಮತ್ತು ಬರುವುದು, ಉಳಿದದ್ದೆಲ್ಲಾ ವ್ಯರ್ಥ! ಅವು ಯಾವುವು?
Donation: ಆಚಾರ್ಯ ಚಾಣಕ್ಯನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಧರ್ಮವೆಂದರೆ ಅದು ದಾನದ ಧರ್ಮ. ಅರ್ಹರಿಗೆ, ಅಗತ್ಯ ಇರುವವರಿಗೆ ದಾನ ಮಾಡುವುದು ಅತ್ಯಂತ ದೊಡ್ಡ ಧರ್ಮ. ಇದು ಅತ್ಯಂತ ಅಮೂಲ್ಯ. ನಾವು ಮಾಡುವ ದಾನ ಬೆಲೆ ಕಟ್ಟಲಾಗದಂತಹುದು. ದಾನದ ಮುಂದೆ ಬೇರೊಂದಿಲ್ಲ.
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
Follow us on
ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ಚಾಣಕ್ಯನ ಪ್ರಕಾರ ಮನುಷ್ಯನ ದೈನಂದಿನ ಜೀವನದಲ್ಲಿ ಈ ನಾಲ್ಕು ಸಂಗತಿಗಳಿಗೇ ಕಿಮ್ಮತ್ತು ಇರುವುದು ಮತ್ತು ಕಿಮ್ಮತ್ತು ಬರುವುದು. ಉಳಿದವೆಲ್ಲಾ ವ್ಯರ್ಥ, ವ್ಯರ್ಥ! ಅವು ಯಾವುವು? ಬನ್ನೀ ತಿಳಿಯೋಣ.
ದಾನ (Donation): ಆಚಾರ್ಯ ಚಾಣಕ್ಯನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಧರ್ಮವೆಂದರೆ ಅದು ದಾನದ ಧರ್ಮ. ಅರ್ಹರಿಗೆ, ಅಗತ್ಯ ಇರುವವರಿಗೆ ದಾನ ಮಾಡುವುದು ಅತ್ಯಂತ ದೊಡ್ಡ ಧರ್ಮ. ಇದು ಅತ್ಯಂತ ಅಮೂಲ್ಯ. ನಾವು ಮಾಡುವ ದಾನ ಬೆಲೆ ಕಟ್ಟಲಾಗದಂತಹುದು. ದಾನದ ಮುಂದೆ ಬೇರೊಂದಿಲ್ಲ. ಹಾಗಾಗಿ ಜನ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಸಾರವಾಗಿ ಅರ್ಹರಿಗೆ ದಾನ ಮಾಡುವುದು ಅತ್ಯಗತ್ಯವಾಗುತ್ತದೆ.
ಏಕಾದಶಿ ವ್ರತ (Ekadashi Fasting): ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷ ಮಹತ್ವವಿದೆ. ಏಕಾದಶಿಯ ದಿನ ವ್ರತ ಆಚರಿಸುವವರು ಮತ್ತು ಪೂಜೆ ಮಾಡುವವರು ಭಗವಂತ ವಿಷ್ಣುವಿನ ಆಶೀರ್ವಾದ ಸದಾ ಸಿಗುತ್ತದೆ. ಇದರಿಂದ ಆತ್ಮ ಮತ್ತು ಶರೀರ ಎರಡೂ ಶುದ್ಧಗೊಳ್ಳುತ್ತವೆ.
ಗಾಯತ್ರಿ ಮಂತ್ರ ಜಪಿಸುವುದು (Gayatri Mantra): ಸನಾತನ ಹಿಂದೂ ಧರ್ಮದಲ್ಲಿ ಅನೇಕ ಮಂತ್ರಗಳನ್ನು ಜಪಿಸುತ್ತಾರೆ/ ಪಠಿಸುತ್ತಾರೆ. ಇದರಲ್ಲಿ ಅತ್ಯಂತ ಶಕ್ತಿಶಾಲಿ ಮಂತ್ರವೆಂದರೆ ಗಾಯತ್ರಿ ಮಂತ್ರ ಎಂದು ಪರಿಗಣಿಸಲಾಗಿದೆ. ಆಚಾರ್ಯ ಚಾಣಕ್ಯ ಹೇಳುವಂತೆ ಜನ ನಿಯಮ ಪ್ರಕಾರವಾಗಿ ಗಾಯತ್ರಿ ಮಂತ್ರ ಜಪಿಸಬೇಕು. ಇದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳು/ ಸಂಂಘರ್ಷಗಳನ್ನು ಯಶಸ್ವಿಯಾಗಿ ಎದುರಿಸಲು ಶಕ್ತಿ ಸಿಗುತ್ತದೆ.
ತಾಯಿಯ ಆಶೀರ್ವಾದ (Mother Blessing): ಆಚಾರ್ಯ ಚಾಣಕ್ಯನ ಪ್ರಕಾರ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನ ಸಲ್ಲಬೇಕಿರುವುದು ಹೆತ್ತಮ್ಮನಿಗೆ. ನಾವು ನಮ್ಮ ತಂದೆ-ತಾಯಿಯ ಸೇವೆಯನ್ನು ಅಗತ್ಯವಾಗಿ ಮಾಡಬೇಕು. ಇದರಿಂದ ಅವರ ಆಶಿರ್ವಾದ/ ಹಾರೈಕೆಗಳೂ ಹೇರಳವಾಗಿ ಪ್ರಾಪ್ತಿಯಾಗುತ್ತದೆ. ಇದರಿಂದ ನಮ್ಮ ಜೀವನ ಸುಖ-ನೆಮ್ಮದಿಯಿಂದ ಕೂಡಿರುತ್ತದೆ
(ಬರಹ -ವಾಟ್ಸಪ್ ಸಂದೇಶ)ಆಧ್ಯಾತ್ಮ ಕುರಿತಾದ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ