ಮಹಿಳೆಯರ ಈ ಅಭ್ಯಾಸಗಳು ಜೀವನದಲ್ಲಿ ಸಂಕಷ್ಟ ತಂದೊಡ್ಡುತ್ತವೆ… ಗಂಡಂದಿರಿಗೆ ಚಾಣಾಕ್ಯ ಎಚ್ಚರಿಕೆ

|

Updated on: Jun 19, 2024 | 7:30 AM

Chanakya Niti and Women Habits: ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಕುತಂತ್ರಿಗಳು. ಈ ದೋಷವು ಕೆಲವೊಮ್ಮೆ ತೊಂದರೆಗಳಿಗೆ ಕಾರಣವಾಗುತ್ತದೆ. ಕೆಟ್ಟ ಚಟಗಳಿಂದಾಗಿ ಪತಿಯೂ ದೂರವಾಗುತ್ತಾರೆ. ಆದ್ದರಿಂದ ಮಹಿಳೆಯರು ಕುಟುಂಬಸ್ಥರಿಗೆ ಎಂದಿಗೂ ಮೋಸ ಮಾಡಬಾರದು.

ಮಹಿಳೆಯರ ಈ ಅಭ್ಯಾಸಗಳು ಜೀವನದಲ್ಲಿ ಸಂಕಷ್ಟ ತಂದೊಡ್ಡುತ್ತವೆ... ಗಂಡಂದಿರಿಗೆ ಚಾಣಾಕ್ಯ ಎಚ್ಚರಿಕೆ
ಮಹಿಳೆಯರ ಈ ಅಭ್ಯಾಸಗಳು ಜೀವನದಲ್ಲಿ ಸಂಕಷ್ಟ ತಂದೊಡ್ಡುತ್ತದೆ
Follow us on

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಅರ್ಥಗರ್ಭಿತವಾಗಿ ತಿಳಿಸಿದ್ದಾರೆ. ಅವರಲ್ಲಿ ಹೆಂಗಸರು.. ಅವರ ವಿವಿಧ ಅಭ್ಯಾಸಗಳು/ ಹವ್ಯಾಸಗಳ ಬಗ್ಗೆ ತಿಳಿಸಿದರು. ಆದರೆ ಇಂತಹ ಅಭ್ಯಾಸಗಳಿಂದ ಮನೆಯಲ್ಲಿ ವೈಷಮ್ಯ, ಜಗಳಗಳು ತಾಂಡವವಾಡುತ್ತವೆ ಎಂದರು. ಮಹಿಳೆಯರ ಕೆಲವು ಅಭ್ಯಾಸಗಳು ತಮ್ಮ ಗಂಡನ ಜೀವನವನ್ನು ತೊಂದರೆಗೆ ಸಿಲುಕಿಸುತ್ತವೆ. ಕಷ್ಟಗಳು/ ಪ್ರತಿಕೂಲ ಪರಿಸ್ಥಿತಿಗಳು ಎಂಬುದು ಜೀವನದ ಒಂದು ಭಾಗವಾಗಿದೆ. ಇದು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಅನ್ವಯಿಸುತ್ತದೆ. ಕೆಲವು ಅಭ್ಯಾಸಗಳು ಯಾರನ್ನಾದರೂ ಸರುಯೇ ಕಾಡುತ್ತವೆ. ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಇದು ದಂಪತಿ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ/ ಪ್ರತಿಕೂಲ ಪರಿಸ್ಥಿತಿಯನ್ನು ಉಂಟುಮಾಡಬಹುದು. ಮಹಿಳೆಯರು ತಮ್ಮ ದುಃಖದಲ್ಲಿರುವ ಗಂಡನನ್ನು ಬೆಂಬಲಿಸದಿದ್ದರೆ.. ದಂಪತಿಯ ಜೀವನವು ಕಷ್ಟಗಳಿಂದ ಸುತ್ತುವರೆದಿರುತ್ತದೆ.

ಮಹಿಳೆಯರು ಸಾಮಾನ್ಯವಾಗಿ ಇತರರ ಬಗ್ಗೆ ಚಾಡಿ/ ವದಂತಿಗಳನ್ನು ಹೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸವು ತುಂಬಾ ನಕಾರಾತ್ಮಕ ಎಂದು ಚಾಣಕ್ಯ ತಿಳಿಯ ಹೇಳಿದ್ದಾನೆ. ಇಂತಹ ಅಭ್ಯಾಸವಿರುವ ಮಹಿಳೆಯೊಂದಿಗೆ ಸಮಯ ಕಳೆಯುವುದು ಗಂಡನ ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. ಹಾಗಾಗಿ ವದಂತಿಗಳನ್ನು ಹರಡುವ ಅಥವಾ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮಹಿಳೆಯರಿಂದ ಸಾಧ್ಯವಾದಷ್ಟೂ ದೂರವಿರುವುದು ಅವರವರ ಹಿತದೃಷ್ಟಿಯಿಂದ ಒಳ್ಳೆಯದು. ಅಷ್ಟೇ ಅಲ್ಲ, ಹೆಂಗಸರು ಅಪ್ಪಿತಪ್ಪಿಯೂ ಅವಹೇಳನಕಾರಿಯಾಗಿ ಮಾತನಾಡಬಾರದು.

ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಕುತಂತ್ರಿಗಳು. ಈ ದೋಷವು ಕೆಲವೊಮ್ಮೆ ತೊಂದರೆಗಳಿಗೆ ಕಾರಣವಾಗುತ್ತದೆ. ಕೆಟ್ಟ ಚಟಗಳಿಂದಾಗಿ ಪತಿಯೂ ದೂರವಾಗುತ್ತಾರೆ. ಆದ್ದರಿಂದ ಮಹಿಳೆಯರು ಕುಟುಂಬಸ್ಥರಿಗೆ ಎಂದಿಗೂ ಮೋಸ ಮಾಡಬಾರದು.

Also Read: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಜೀವನದಲ್ಲಿ ಯಾವುದರಲ್ಲೇ ಆಗಲಿ ದುರಾಸೆ ಹೊಂದಿರುವುದು ಕೆಟ್ಟ ಅಭ್ಯಾಸ. ಪುರುಷರಿಗಿಂತ ಮಹಿಳೆಯರು ಹೆಚ್ಚು ದುರಾಸೆಯವರಾಗಿದ್ದಾರೆ ಎಂದು ಚಾಣಕ್ಯ ಹೇಳಿದರು. ಮಹಿಳೆಯರು ಹಣ, ಚಿನ್ನ, ವಜ್ರ, ಬಟ್ಟೆ ಇತ್ಯಾದಿಗಳ ಮೇಲೆ ಹೆಚ್ಚು ವ್ಯಾಮೋಹ/ ದುರಾಸೆ ಹೊಂದಿರುತ್ತಾರೆ. ಅವರ ಮನಸ್ಸು ಯಾವಾಗಲೂ ಈ ವಿಷಯಗಳಿಂದ ತುಂಬಿರುತ್ತದೆ. ಶಕ್ತಿ ಮೀರಿ ಅದನ್ನು ಅಪೇಕ್ಷಿಸುವ ದುರಾಸೆ ಹೆಣ್ಣಿನದು. ಅವರ ಈ ಗುಣವು ಮನೆಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಗಂಡನೊಂದಿಗೆ ಜಗಳವೂ ಶುರುವಾಗುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರಬೇಕಾದರೆ ಮಹಿಳೆಯರು ಎಂದಿಗೂ ದುರಾಸೆಯಿಂದ ಇರಬಾರದು.

Also Read:  Holy River ನದಿ ಸ್ನಾನಕ್ಕೆ ಕೆಲವು ನಿಯಮಗಳು.. ರಾತ್ರಿ ನದಿಯಲ್ಲಿ ಸ್ನಾನ ಮಾಡಬಾರದು ಅಂತಾರೆ, ಯಾಕೆ ಗೊತ್ತಾ?

ಇಂದು ಹೆಚ್ಚಿನ ಮಹಿಳೆಯರು ತಮ್ಮ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿದಿದ್ದಾರೆ. ಯಾವುದೇ ಪರಿಸ್ಥಿತಿ ಬಂದರೂ ಅದರಿಂದ ಹೊರಬರುವುದು ಸುಲಭ. ಆದರೆ ಈ ಸಾಮರ್ಥ್ಯವೂ ಕೆಲವು ಸಂದರ್ಭಗಳಲ್ಲಿ ಲೋಪ/ ನ್ಯೂನತೆಯಾಗಬಹುದು. ಇದರಿಂದಾಗಿ ಮಹಿಳೆಯರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಕೆಟ್ಟ ಘಣಿಗೆ/ಸಮಯದಲ್ಲಿ ಗಂಡನನ್ನು ಬೆಂಬಲಿಸದ ಸಶಕ್ತ ಹೆಂಡತಿಯನ್ನು ಹೊಂದುವುದು ವ್ಯರ್ಥ ಎಂದು ಹೇಳಿದರು. ಸುಖದಲ್ಲಿ ಯಾವಾಗಲೂ ಜೊತೆಯಾತ್ತಾಳೆ, ಅದೇ ರೀತಿ ದುಃಖದಲ್ಲೂ ಪತಿಯನ್ನು ನೋಡಿಕೊಳ್ಳುವವಳು ಉದಾತ್ತ ಮನೋಭಾವದ ಹೆಂಡತಿಯಾಗುತ್ತಾಳೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)