ಯಾರ ಜೊತೆಗೇ ಆಗಲಿ ಸ್ನೇಹ ಬೆಳೆಸುವ ಮುನ್ನ ಈ ಸಂಗತಿಗಳಿಗೆ ಮಹತ್ವ ನೀಡಿ, ಇಲ್ಲವಾದಲ್ಲಿ ಮೋಸ ಹೋಗುವಿರಿ

| Updated By: ಸಾಧು ಶ್ರೀನಾಥ್​

Updated on: Nov 16, 2021 | 7:21 AM

Chanakya Niti: ಸ್ನೇಹಿತ ಕೆಟ್ಟ ಮಾರ್ಗದಲ್ಲಿ ನಡೆದಾಗ ಅವರನ್ನು ಸರಿ ದಾರಿಗೆ ತರುವುದು ಸ್ನೇಹಿತನಾಗಿ ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಸ್ನೇಹಿತನನ್ನು ಜೀವನದಲ್ಲಿ ಸದಾ ಮುನ್ನಡೆಯುವುದಕ್ಕೆ ಪ್ರೇರೇಪಿಸಬೇಕು. ಆಚಾರ್ಯ ಚಾಣಕ್ಯ ಹೇಳುವ ಇಂತಹ ಮಾರ್ಗಸೂಚಿಗಳನ್ನು ಪಾಲಿಸಿ, ನಿಮ್ಮ ಸ್ನೇಹವನ್ನು ಕಾಪಿಡಿ.

ಯಾರ ಜೊತೆಗೇ ಆಗಲಿ ಸ್ನೇಹ ಬೆಳೆಸುವ ಮುನ್ನ ಈ ಸಂಗತಿಗಳಿಗೆ ಮಹತ್ವ ನೀಡಿ, ಇಲ್ಲವಾದಲ್ಲಿ ಮೋಸ ಹೋಗುವಿರಿ
Chanakya Niti: ಜೀವನದಲ್ಲಿ ಈ ನಾಲ್ಕು ಸಂಗತಿಗಳನ್ನು ಶ್ರದ್ಧೆಯಿಂದ ಪಾಲಿಸಿದರೆ ಜೀವನ ಸುಗಮ ಮತ್ತು ಸುಸೂತ್ರ!
Follow us on

ಯಾರ ಜೊತೆಗೇ ಆಗಲಿ ಸ್ನೇಹ ಬೆಳೆಸುವ ಮುನ್ನ ಈ ಸಂಗತಿಗಳಿಗೆ ಮಹತ್ವ ನೀಡಿ, ಇಲ್ಲವಾದಲ್ಲಿ ಮೋಸ ಹೋಗುವಿರಿ ಎನ್ನುತ್ತದೆ ಚಾಣಕ್ಯ ನೀತಿ! ಒಳ್ಳೆಯ ಸ್ನೇಹ ಎಂಬುದು ಒಳ್ಳೆಯ ಸಂಪತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾವುದೇ ವ್ಯಕ್ತಿಯ ಜೊತೆ ಸ್ನೇಹ ಮಾಡುವ ಮೊದಲು ಅವರ ಬಗ್ಗೆ ವಿಶ್ಲೇಷಣೆ ಮಾಡುವುದು ಅತ್ಯವಶ್ಯ. ಜೊತೆಗೆ ಮಿತ್ರತ್ವದ ಬೆಳೆ ಬೆಳೆಯಲು ಕೆಲ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಆಗಲೇ ಆ ಸ್ನೇಹ ಸಂಬಂಧದಲ್ಲಿನ ಮಾಧುರ್ಯ ಕಾಯಂ ಆಗುತ್ತದೆ. ಸ್ನೇಹದ ಮೊದಲ ಪಾಠವೇ ಸಮರ್ಪಣೆ. ಯಾವುದೇ ವ್ಯಕ್ತಿಯ ಜೊತೆ ಸ್ನೇಹ ಬೆಳೆಸುವ ಮುನ್ನ ನಿಮ್ಮಲ್ಲಿ ಸಮರ್ಪಣಾ ಭಾವ ಇರಬೇಕು. ಸಮರ್ಪಣಾ ಭಾವ ಪೂರ್ತ ಇದ್ದಾಗಲಷ್ಟೇ ವಿಶ್ವಾಸ, ಭರವಸೆ ಬೆಳೆದು ಸ್ನೇಹ ಹೆಮ್ಮರವಾಗಿ ಸದೃಢವಾಗುತ್ತದೆ.

ದುರಾಸೆ, ಚಾಲ್​ ಚಲಾಕಿಗಳು ಮತ್ತು ಮೋಸ ಮಾಡುವ ಕೆಟ್ಟ ಉದ್ದೇಶಗಳು ಇರಬಾರದು. ಸ್ನೇಹದಲ್ಲಿ ಸ್ವಾರ್ಥ ಇರಬಾರದು. ಗಟ್ಟಿ ಸ್ನೇಹ ಲೋಭದಿಂದ ದೂರ ಇರಬೇಕು. ಸುಳ್ಳುಗಳ ಬುನಾದಿಯ ಮೇಲೆ ಯಾವುದೇ ಸಂಬಂಧವಾದರೂ ಯಾವುದೇ ಕ್ಷಣ ಕುಸಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಸ್ನೇಹ ಸಂಬಂಧಗಳ ಮಧ್ಯೆ ಸ್ವಾರ್ಥ ನುಸುಳಿದರೆ ಅದು ಕೆಟ್ಟ ಸ್ನೇಹವಾಗಿ ಮಾರ್ಪಡುವುದು ಖಚಿತ. ಸ್ನೇಹಿತ ಕಷ್ಟದಲ್ಲಿದ್ದಾಗ ಅವರಿಗೆ ನೆರವಾಗುವುದು ಸ್ನೇಹದ ಧರ್ಮವಾಗಿರುತ್ತದೆ. ಸ್ನೇಹಿತ ಕೆಟ್ಟ ಮಾರ್ಗದಲ್ಲಿ ನಡೆದಾಗ ಅವರನ್ನು ಸರಿ ದಾರಿಗೆ ತರುವುದು ಸ್ನೇಹಿತನಾಗಿ ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಸ್ನೇಹಿತನನ್ನು ಜೀವನದಲ್ಲಿ ಸದಾ ಮುನ್ನಡೆಯುವುದಕ್ಕೆ ಪ್ರೇರೇಪಿಸಬೇಕು. ಆಚಾರ್ಯ ಚಾಣಕ್ಯ ಹೇಳುವ ಇಂತಹ ಮಾರ್ಗಸೂಚಿಗಳನ್ನು ಪಾಲಿಸಿ, ನಿಮ್ಮ ಸ್ನೇಹವನ್ನು ಕಾಪಿಡಿ.

(chanakya niti in kannada to maintain fruitful relation with your friend for lifetime then dont forget this lesson from acharya chanakya)