ಚಾಣಕ್ಯ ನೀತಿ: ಈ ಘಟನೆಗಳು ಪ್ರತಿಯೊಬ್ಬರ ಜೀವನವನ್ನೂ ಬದಲಾಯಿಸುತ್ತದೆ.. ಅದು ಒಳ್ಳೆಯದೂ ಆಗಬಹುದು ಅಥವಾ ವಿಪತ್ತೂ ಆಗಿರಬಹುದು!

| Updated By: ಸಾಧು ಶ್ರೀನಾಥ್​

Updated on: Aug 23, 2022 | 6:48 AM

Chanakya Niti: ಆಚಾರ್ಯ ಚಾಣಕ್ಯನ ಬಗ್ಗೆ ಪ್ರತ್ಯತೇಕವಾಗಿ ಹೇಳುವ ಅಗತ್ಯವಿಲ್ಲ. ದೂರದೃಷ್ಟಿಯೊಂದಿಗೆ ಅಗಾಧವಾದ ಜ್ಞಾನ ಹೊಂದಿರುವ, ಅತ್ಯುತ್ತಮ ಕಾರ್ಯತಂತ್ರ, ಪ್ರತಿತಂತ್ರಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಮೇಧಾವಿ ಆತ..

ಚಾಣಕ್ಯ ನೀತಿ: ಈ ಘಟನೆಗಳು ಪ್ರತಿಯೊಬ್ಬರ ಜೀವನವನ್ನೂ ಬದಲಾಯಿಸುತ್ತದೆ.. ಅದು ಒಳ್ಳೆಯದೂ ಆಗಬಹುದು ಅಥವಾ ವಿಪತ್ತೂ ಆಗಿರಬಹುದು!
ಈ 3 ಅಭ್ಯಾಸಗಳು ಯುವಕರ ಜೀವನವನ್ನು ಹಾಳುಮಾಡುತ್ತವೆ, ತಕ್ಷಣವೇ ಅವುಗಳನ್ನು ಬಿಟ್ಟುಬಿಡಿ
Follow us on

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯನ ಬಗ್ಗೆ ಪ್ರತ್ಯತೇಕವಾಗಿ ಹೇಳುವ ಅಗತ್ಯವಿಲ್ಲ. ದೂರದೃಷ್ಟಿಯೊಂದಿಗೆ ಅಗಾಧವಾದ ಜ್ಞಾನ ಹೊಂದಿರುವ, ಅತ್ಯುತ್ತಮ ಕಾರ್ಯತಂತ್ರ, ಪ್ರತಿತಂತ್ರಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಮೇಧಾವಿ ಎಂದು ವೈಭವೀಕರಿಸಿದ್ದಾರೆ. ಮಹಾ ಚೇತನ ಚಾಣಕ್ಯನಿಗೆ ಅರ್ಥಶಾಸ್ತ್ರದಲ್ಲಿ, ರಾಜಕೀಯದಲ್ಲಿ ಪಾಂಡಿತ್ಯವಿತ್ತು. ಆದ್ದರಿಂದಲೇ ಅವನನ್ನು ಅಪರ ಚಾಣಕ್ಯ ಎಂದು ಕರೆಯುತ್ತಾರೆ. ಆದಾಗ್ಯೂ, ಈ ಚಾಣಕ್ಯ ತನ್ನ ಜ್ಞಾನವನ್ನು ಭವಿಷ್ಯದ ಪೀಳಿಗೆಗೆ ವರ್ಗಾಯಿಸಿದ. ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಔನತ್ಯ ಮತ್ತು ಯಶಸ್ಸು ಸಾಧಿಸಲು ಏನು ಮಾಡಬೇಕು? ಏನು ಮಾಡಬಾರದು? ಅವು ಸುತ್ತುವರಿದಾಗ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂಬುದನ್ನು ಚಾಣಕ್ಯ ಬಿಡಿಸಿ ಹೇಳಿದ್ದಾನೆ.

ಸಮಸ್ಯೆಗಳ ವರ್ತುಲದಿಂದ ಹೊರಬರುವುದು ಹೇಗೆ.. ಇವೇ ಮುಂತಾದ ಹಲವು ವಿಷಯಗಳನ್ನೊಳಗೊಂಡ ಅನೇಕ ಪುಸ್ತಕ ಬರೆದಿದ್ದಾನೆ ಚಾಣಕ್ಯ. ಅದರಲ್ಲೊಂದು ನೀತಿಶಾಸ್ತ್ರ. ಈ ನೀತಿಶಾಸ್ತ್ರದ ಪುಸ್ತಕವು ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. ಆಚಾರ್ಯ ಚಾಣಕ್ಯ ಇಂದಿಗೂ ಪ್ರಸ್ತುತ. ಏಕೆಂದರೆ ಅದರಲ್ಲಿ ಉಲ್ಲೇಖಿಸಲಾದ ವಿಷಯಗಳು ಇಂದಿಗೂ ಮತ್ತು ಭವಿಷ್ಯದ ಜನರಿಗೂ ಬೇಕಾಗಿರುವಂತಹುದು.

  1. ಜೀವನದಲ್ಲಿ ಸಂತೋಷ ಮತ್ತು ದುಃಖ: ಜೀವನದಲ್ಲಿ ಸಂತೋಷ ಮತ್ತು ದುಃಖ ಬಂದೇ ಬರುತ್ತದೆ. ಕೆಟ್ಟ ಸಂದರ್ಭಗಳಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದು ನಮ್ಮ ಜೀವನ, ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಕೆಲವರು ಅದೃಷ್ಟವನ್ನೂ ದುರದೃಷ್ಟವನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಯಾವ ಪರಿಸ್ಥಿತಿಯಲ್ಲಿ ಹೇಗಿರಬೇಕು ಎಂಬುದನ್ನು ಆಚಾರ್ಯ ಚಾಣಕ್ಯ ತಿಳಿಸಿದ್ದಾರೆ. ಅದನ್ನು ಈಗ ತಿಳಿದುಕೊಳ್ಳೋಣ..
  2. ಭಾರೀ ಮೊತ್ತದ ಹಣ ಕಳೆದುಕೊಂಡಾಗ.. ಸಾಮಾನ್ಯವಾಗಿ ಹಣಕ್ಕೆ ಇರುವ ಮೌಲ್ಯ ಜನರಿಗೆ ಇರುವುದಿಲ್ಲ. ಇಂದು ಹಣಕ್ಕಾಗಿ ಏನು ಬೇಕಾದರೂ ಮಾಡುವ ಸ್ಥಿತಿಯಲ್ಲಿ ಜನ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಹಣಕ್ಕೆ ಇರುವ ಮೌಲ್ಯ, ಅವಶ್ಯಕತೆಗಳನ್ನು ತಿಳಿದುಕೊಂಡು ಅನೇಕ ಮಂದಿ ಹಣ ಗುಡ್ಎ ಹಾಕುವುದರಲ್ಲಿ ತೊಡಗುತ್ತಾರೆ. ಕೆಲವರು ಕೆಲವೊಮ್ಮೆ ರಹಸ್ಯವಾಗಿ ಗಳಿಸಿದ ಹಣವನ್ನು ಕಳೆದುಕೊಳ್ಳುತ್ತಾರೆ. ಆದರೆ ಅವರಿಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಭಾರೀ ನಷ್ಟವನ್ನು ಸಹಿಸಲಾಗದೆ ಕಷ್ಟಪಟ್ಟು ದುಡಿದ ಹಣದ ನಷ್ಟದಿಂದ ಅವರು ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಜೀವನದಲ್ಲಿ ದೊಡ್ಡ ಬದಲಾವಣೆ ಪ್ರಾರಂಭವಾಗುತ್ತದೆ. ಆದರೆ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮುಂದೆ ಇಂತಹ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕು.
  3. ಸಂಗಾತಿಯಿಂದ ಬೇರ್ಪಡುವಿಕೆ.. ಯಾವುದೇ ಕಾರಣಕ್ಕಾದರೂ ಸಂಗಾತಿ ಬಿಟ್ಟು ಹೋದರೆ ಜೀವನ ಹಾಳಾಗುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯ ಹೇಳಿದ್ದಾನೆ. ಮದುವೆಯಾದ ನಂತರ, ನಿಮ್ಮ ಸಂಗಾತಿಯ ಬೆಂಬಲ ಎಷ್ಟು ಮುಖ್ಯ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ಆದರೆ, ಕೆಲವೊಮ್ಮೆ ಸನ್ನಿವೇಶಗಳು ಬೇರ್ಪಡುವ ಹಂತಕ್ಕೆ ಬರಬಹುದು. ಇದು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪ್ರತಿ ದಿನವೂ ದುಃಖದ ಪರಿಸ್ಥಿತಿಯೇ ಆಗಿಬಿಡುತ್ತದೆ. ಇದು ವ್ಯಕ್ತಿಯ ಜೀವನದ ಮೇಲೂ ಪರಿಣಾಮ ಬೀರುತ್ತದೆ.
  4. ಪೋಷಕರಿಂದ ದೂರವಾಗುವಿಕೆ: ನಾವು ಎಷ್ಟೇ ಹಣ ಸಂಪಾದಿಸಿದರೂ, ಎಷ್ಟೇ ದೊಡ್ಡ ಸಾಧನೆ ಮಾಡಿದರೂ ನಮ್ಮ ತಂದೆ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಪೋಷಕರಿಂದ ದೂರವಿರುವುದಕ್ಕಿಂತ ಹೆಚ್ಚಿನ ಬೇರ್ಪಡುವಿಕೆ ಮತ್ತೊಂದಿಲ್ಲ. ಪೋಷಕರಿಲ್ಲದ ನಷ್ಟವನ್ನು ಯಾವುದೂ ತುಂಬಲು ಸಾಧ್ಯವಿಲ್ಲ. ಜೀವನದಲ್ಲಿ ಯಾವುದೋ ಕಾರಣಕ್ಕೆ ತಂದೆ-ತಾಯಿಯಿಂದ ದೂರವಾಗಬೇಕಾದರೆ ಅದು ತುಂಬಾ ನೋವಿನ ಸಂಗತಿ. ಆದಾಗ್ಯೂ, ಇದು ಜೀವನದಲ್ಲಿ ದೊಡ್ಡ ಬದಲಾವಣೆಗೆ ಅವಕಾಶ ನೀಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

Published On - 6:06 am, Tue, 23 August 22