ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ಹೀಗೆ ಎಲ್ಲಾ ವಿಷಯಗಳಲ್ಲಿ ಪರಿಣಿತಿ ಹೊಂದಿದವರು. ಅವರು ತಮ್ಮ ಅನುಭವದಲ್ಲಿ ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತ. ಜನರ ಬದುಕಿನ ಕಲೆಗಾಗಿ ಕೆಲವು ನೀತಿ ಸಾರವನ್ನು ಹೇಳಿದ್ದಾರೆ. ಚಾಣಕ್ಯರು ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವನವನ್ನು ನಡೆಸಿದರು. ಆದರೆ ಎಂದಿಗೂ ಯಾವ ಸನ್ನಿವೇಶದಲ್ಲಿಯೂ ತಲೆಬಾಗಲಿಲ್ಲ. ಈ ಕೆಲವು ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು ಎಂದು ಹೇಳುತ್ತಾರೆ.
ಆಚಾರ್ಯ ಚಾಣಕ್ಯರ ಪ್ರಕಾರ, ದೀರ್ಘಕಾಲದವರೆಗೆ ನಿದ್ರಿಸುವ ವ್ಯಕ್ತಿ ಸಮಯವನ್ನು ಅರ್ಥ ಮಾಡಿಕೊಳ್ಳುತ್ತಾನೆ. ಆತನು ತನ್ನ ಶಕ್ತಿಯ ಸಾಮರ್ಥ್ಯವನ್ನು ತಾನಾಗಿಯೇ ನಾಶಪಡಿಸಿಕೊಳ್ಳುತ್ತಾನೆ. ಬೆಳಗಿನ ಸಮಯದಲ್ಲಿ ದೇವರು ಮನೆಯನ್ನು ಪ್ರವೇಶಿಸುತ್ತಾನೆ ಎಂದು ನಂಬಲಾಗಿದೆ. ಆ ಸಮಯದಲ್ಲಿ ವ್ಯಕ್ತಿಯು ನಿದ್ರಿಸುವುದು ಆತನ ಶ್ರೇಯಸ್ಸಿಗೆ ಒಳ್ಳೆಯದಲ್ಲ. ಒಳ್ಳೆಯ ಸಮಯವನ್ನು ಜೀವನದಲ್ಲಿ ಬಳಸಿಕೊಳ್ಳಬೇಕೇ ವಿನಃ ಎಂದಿಗೂ ಹಾಳು ಮಾಡಬಾರದು. ನಿದ್ರೆ ಮಾಡುವ ಮೂಲಕ ಉತ್ತಮ ಸಮಯವನ್ನು ಹಾಳು ಮಾಡುವ ವ್ಯಕ್ತಿ ಎಂದಿಗೂ ಜೀವನದಲ್ಲಿ ಗುರಿ ತಲುಪುವುದಿಲ್ಲ.
ಚಾಣಕ್ಯರು ಹೇಳಿದಂತೆ, ಶುಭ್ರ ವಸ್ತ್ರವನ್ನು ಧರಿಸದ ವ್ಯಕ್ತಿ, ಸ್ವಚ್ಛವಾಗಿರದ ವ್ಯಕ್ತಿಗೆ ಎಂದಿಗೂ ಲಕ್ಷ್ಮಿದೇವಿ ಆಶೀರ್ವದಿಸುವುದಿಲ್ಲ. ಅಂಥಹ ಜನರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ದೇಹವನ್ನು ಸ್ವಚ್ಛಗೊಳಿಸದ ವ್ಯಕ್ತಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಇದರಿಂದ ಎಂದಿಗೂ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ.
ಅಗತ್ಯಕ್ಕಿಂತ ಹೆಚ್ಚಿಗೆ ಸೇವಿಸುವುದರಿಂದ ಇದು ಬಡತನಕ್ಕೆ ಜನರನ್ನು ನೂಕುತ್ತದೆ. ಹೆಚ್ಚಿನ ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ. ದುಡಿಯುವುದಕ್ಕಿಂತ ಹೆಚ್ಚಿಗೆ ಖರ್ಚು ಮಾಡಲು ಪ್ರಾರಂಭಿಸಿದಾಗ ಸಹಜವಾಗಿಯೇ ವ್ಯಕ್ತಿಯು ಬಡತನ ಸಮಸ್ಯೆಯನ್ನು ಕಾಣುತ್ತಾನೆ.
ನೀವು ನಿಮ್ಮ ಗುರಿಯತ್ತ ಸಾಗಬೇಕಾದರೆ ಒಳ್ಳೆಯ ಮಾತುಗಳನ್ನು ಆಡುವುದು ಉತ್ತಮ. ಯಾವಾಗಲೂ ಸತ್ಯವನ್ನೇ ಮಾತನಾಡಬೇಕು. ಜತೆಗೆ ಎಲ್ಲರಿಗೆ ಪ್ರಿಯವಾಗಿರಬೇಕು. ಸುಳ್ಳು ಅಥವಾ ಕೆಟ್ಟ ಪದಗಳನ್ನು ಮಾತನಾಡುವ ವ್ಯಕ್ತಿಯನ್ನು ಜನರು ಕೀಳಾಗಿ ಕಾಣುತ್ತಾರೆ. ಎಂದಿಗೂ ಆತ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಿಲ್ಲ ಹಾಗೂ ತಮ್ಮ ಗುರಿಯತ್ತ ಸಾಗಲು ಅದೆಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ:
Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ