Janmashtami 2021: ಸಂತಾನ ಪ್ರಾಪ್ತಿ ಇಷ್ಟಾರ್ಥ ಸಿದ್ಧಿಗಾಗಿ ಜನ್ಮಾಷ್ಟಮಿ ದಿನ ಯಾವೆಲ್ಲ ಮಂತ್ರ ಜಪಿಸಬೇಕು, ಇಲ್ಲಿದೆ ಸವಿವರ!

ಶೀಘ್ರ ವಿವಾಹಕ್ಕಾಗಿ ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪಿಜನವಲ್ಲಭಾಯ ಸ್ವಾಹಾ ಎಂಬ ಮಂತ್ರ ಜಪಿಸಬೇಕು. ನಿಮಗೆ ವಿವಾಹವಾಗುವುದು ವಿಳಂಬವಾಗುತ್ತಿದ್ದರೆ ಜನ್ಮಾಷ್ಟಮಿಯ ದಿನ ಈ ಮಂತ್ರ ಜಪವನ್ನು ಶುರು ಮಾಡಿ. ಪ್ರತಿ ದಿನ ಕನಿಷ್ಠ 108 ಬಾರಿ ಜಪಿಸಿಬೇಕು. ಹಾಗೆ ಮಾಡಿದರೆ ಕೆಲವೇ ದಿನಗಳಲ್ಲಿ ವಿವಾಹ ಯೋಗ ಕೂಡಿಬರುತ್ತದೆ.

Janmashtami 2021: ಸಂತಾನ ಪ್ರಾಪ್ತಿ ಇಷ್ಟಾರ್ಥ ಸಿದ್ಧಿಗಾಗಿ ಜನ್ಮಾಷ್ಟಮಿ ದಿನ ಯಾವೆಲ್ಲ ಮಂತ್ರ ಜಪಿಸಬೇಕು, ಇಲ್ಲಿದೆ ಸವಿವರ!
ಶ್ರೀ ಕೃಷ್ಣ ಜನ್ಮಾಷ್ಟಮಿ- ಸಂತಾನ ಪ್ರಾಪ್ತಿ ಇಷ್ಟಾರ್ಥ ಸಿದ್ಧಿಗಾಗಿ ಯಾವೆಲ್ಲ ಮಂತ್ರಗಳನ್ನು ಜಪಿಸಬೇಕು, ಇಲ್ಲಿದೆ ಸವಿವರ!
Follow us
TV9 Web
| Updated By: preethi shettigar

Updated on: Aug 29, 2021 | 7:52 AM

ಇನ್ನೇನು ನಾಳೆಯೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಈ ಸಂದರ್ಭದಲ್ಲಿ ಸಂತಾನ ಪ್ರಾಪ್ತಿಗಾಗಿ ಈ ಮಂತ್ರಗಳನ್ನು ಜಪಿಸತೊಡಗಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಅನ್ನಬಹುದು! ಶಾಸ್ತ್ರಗಳ ಪ್ರಕಾರ ಗೋಕುಲಾಷ್ಟಮಿ ಅತ್ಯಂತ ಪುಣ್ಯವಂತ ವ್ರತವಾಗಿದೆ. ಗೋಕುಲಾಷ್ಟಮಿ ವ್ರತವು ಶತ ಏಕಾದಶಿ ವ್ರತಗಳಿಗೆ ಸಮ. ಶ್ರೀ ಕೃಷ್ಣ ಜನ್ಮಾಷ್ಟಮಿ ಪವಿತ್ರ ದಿನ ಶ್ರೀ ಕೃಷ್ಣನನ್ನು ಸ್ವಚ್ಛ ಮನಸಿನೊಂದಿಗೆ ಪೂಜೆ ಮಾಡುವುದರಿಂದ ಎಲ್ಲ ಮನೋಕಾಮನೆಗಳು ನೆರವೇರುತ್ತವೆ. ಯಾವ ಮನೋಕಾಮನೆ ಇಷ್ಟಾರ್ಥಕ್ಕಾಗಿ ಯಾವ ಮಂತ್ರ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯೋಣ.

ಅದಕ್ಕೂ ಮುನ್ನ, ಈ ಬಾರಿ ಕೃಷ್ಣ ಜನ್ಮಾಷ್ಟಮಿಯಂದು ಆಗಸ್ಟ್ 29ರ ರಾತ್ರಿ 11.25ರಿಂದ ಆಗಸ್ಟ್ 30ರ ರಾತ್ರಿ 1.59ರವರೆಗೆ ಅಷ್ಟಮಿ ತಿಥಿ ಇರಲಿದೆ. ಆಗಸ್ಟ್ 30ರ ರಾತ್ರಿ 12.44 ರಿಂದ ಶುಭ ಮುಹೂರ್ತ ಪ್ರಾರಂಭಗೊಳ್ಳುತ್ತದೆ. 45 ನಿಮಿಷಗಳ ಕಾಲ ಶುಭ ಮುಹೂರ್ತ ಇರಲಿದೆ. ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ನಾಳೆ ಸೋಮವಾರವೇ ಕೃಷ್ಣ ಜನ್ಮೋತ್ಸವ. ದೇವಕಿ ಮತ್ತು ಯಶೋದಾ ಮಮತಾ ಮಾತೆಯರ ಸುಪುತ್ರ, ರಾಧಾರಾಣಿಯ ಪ್ರಿಯತಮ ಭಗವಂತ ಶ್ರೀಕೃಷ್ಣ.

ದ್ವಾಪರಯುಗದ ಅಧಿಪತಿ ಭಗವಾನ್ ಶ್ರೀಕೃಷ್ಣ. ಶತ ಏಕಾದಶಿ ವ್ರತಗಳಿಗೆ ಸಮವಾದ ಕೃಷ್ಣನ ಜನ್ಮಾಷ್ಟಮಿಯ ದಿನ ವಿಶೇಷ ಜಪತಪ ಮಾಡುವುದರಿಂದ ಅಂದುಕೊಂಡಿದ್ದೆಲ್ಲವೂ ನೆರವೇರುತ್ತದೆ. ಅದಕ್ಕಾಗಿ ಈ ಮಂತ್ರಗಳನ್ನು ಭಕ್ತಿಯಿಂದ ಜಪಿಸಿ.

1. ದೀರ್ಘ ಕಾಲದಿಂದ ನಿಂತುಹೋಗಿರುವ ಕೆಲಸ ಪೂರ್ಣಗೊಳ್ಳಲು ಈ ಮಂತ್ರ ಜಪಿಸಿ: ಓಂ ಶ್ರೀ ನಮಃ ಶ್ರೀಕೃಷ್ಣಾಯ ಪರಿಪೂರ್ಣತಮಾಯ ಸ್ವಾಹಾ ನಿಮಗೆ ಯಾವುದಾದರೂ ಕೆಲಸ ಕಾರ್ಯ ದೀರ್ಘಾವಧಿಯಿಂದ ಕೈಗೂಡದೆ ಬಾಧಕವಾಗಿ ನಿಂತುಹೋಗಿದ್ದರೆ ನಿಮ್ಮ ಮನೋಕಾಮನೆಯನ್ನು ಭಗವಂತನಿಗೆ ನಿವೇದಿಸುತ್ತಾ, ಈ ಮಂತ್ರವನ್ನು ಜಪಿಸಿ, ಪೂಜೆ ಮಾಡಿ.

2. ಸಂತಾನ ಪ್ರಾಪ್ತಿಗಾಗಿ ಈ ಮಂತ್ರ ಜಪಿಸಿ: ಮೊದಲ ಮಂತ್ರ: ದೇವಕಿ ಸುತ ಗೋವಿಂದ ವಾಸುದೇವ ಜಗತ್ಪತೆ, ದೇಹಿಮೆ ತನಯಂ ಕೃಷ್ಣ ತ್ವಮಹಃ ಶರಣಂ ಗತಃ ಎರಡನೆಯ ಮಂತ್ರ: ಕ್ಲೀಂ ಗ್ಲೌ ಕ್ಲೀಂ ಶ್ಯಾಮಲಾಂಗಾಯ ನಮಃ

ಯಾರಿಗೆ ಸಂತಾನ ಪ್ರಾಪ್ತಿ ಬಯಕೆ ಇರುತ್ತದೋ ಅವರು ಪತಿ ಪತ್ನಿ ಜಂಟಿಯಾಗಿ ಜನ್ಮಾಷ್ಟಮಿಯ ದಿನ ಮೇಲಿನ ಎರಡೂ ಮಂತ್ರಗಳನ್ನು ಜಪಿಸಿದರೆ ಪ್ರಭು ಶ್ರೀಕೃಷ್ಣ ಮನೋಕಾಮನೆಯನ್ನು ಈಡೇರಿಸುತ್ತಾನೆ.

3. ಶೀಘ್ರ ವಿವಾಹಕ್ಕಾಗಿ ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪಿಜನವಲ್ಲಭಾಯ ಸ್ವಾಹಾ

ನಿಮಗೆ ವಿವಾಹವಾಗುವುದು ವಿಳಂಬವಾಗುತ್ತಿದ್ದರೆ ಜನ್ಮಾಷ್ಟಮಿಯ ದಿನ ಈ ಮಂತ್ರ ಜಪವನ್ನು ಶುರು ಮಾಡಿ. ಪ್ರತಿ ದಿನ ಕನಿಷ್ಠ 108 ಬಾರಿ ಜಪಿಸಿಬೇಕು. ಹಾಗೆ ಮಾಡಿದರೆ ಕೆಲವೇ ದಿನಗಳಲ್ಲಿ ವಿವಾಹ ಯೋಗ ಕೂಡಿಬರುತ್ತದೆ.

4. ವೃತ್ತಿ ಜೀವನದಲ್ಲಿ ಸಫಲತೆ ಸಾಧಿಸಲು ಗೋವಲ್ಲಭಾಯ ಸ್ವಾಹಾ

ಈ ಮಂತ್ರ ಜಪಿಸುವುದರಿಂದ ನೆಲಕಚ್ಚಿರುವ ವ್ಯಕ್ತಿ ವೃತ್ತಿಜೀವನದಲ್ಲಿ ಶಿಖರಕ್ಕೇರಬಹುದು. ಈ ಮಂತ್ರದಿಂದ ಆರ್ಥಿಕ ಸಮೃದ್ಧಿಯ ಜೊತೆಗೆ ಸುಖ ಸಮೃದ್ಧಿಯಾಗುತ್ತದೆ. ಎಲ್ಲವೂ ಸಂಪೂರ್ಣವಾಗಿ ಸಿದ್ಧಿಸಲಿದೆ.

5. ಎಲ್ಲ ಕರ್ಷ ಕಾರ್ಪಣ್ಯಗಳೂ ದೂರವಾಗಲು ಮೊದಲ ಮಂತ್ರ: ಕೃಂ ಕೃಷ್ಣಾಯ ನಮಃ ಎರಡನೆಯ ಮಂತ್ರ: ಓಂ ಶ್ರೀ ಹ್ರೀಂ ಕ್ಲೀಂ ಶ್ರೀಕೃಷ್ಣಾಯ ಗೋವಿಂದಾಯ ಗೋಪೀಜನ ವಲ್ಲಭಾಯ ಶ್ರೀ ಶ್ರೀ ಶ್ರೀ ಈ ಮಂತ್ರವನ್ನು ಜಪಿಸುವುದರಿಂದ ಎಲ್ಲ ಸ್ವರೂಪದ ಬಾಧೆಗಳು ದೂರವಾಗುತ್ತವೆ. ನಿಂತುಹೋಗಿರುವ ಧನ ಸಂಪತ್ತು ಮರಳಿ ವಾಪಸಾಗುತ್ತದೆ.

janmashtami 2021: ಕೃಷ್ಣ ಜನ್ಮಾಷ್ಟಮಿ – ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?

(chant these mantras on janmashtami 2021 according to the desire to fulfill your wish )

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ