AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chaturvimsati Namas: ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುವುದು, ಹೇಗೆ ಗೊತ್ತಾ?

ವಿಷ್ಣುವಿನ 24 ಹೆಸರುಗಳು ವೈಷ್ಣವರಿಗೆ ಅತ್ಯಂತ ಪವಿತ್ರವಾದ ಕೇಶವ ನಾಮಗಳಾಗಿವೆ. ವೈಷ್ಣವ ವೈದಿಕ ಪೂಜೆಗಳ ಆರಂಭದಲ್ಲಿ ಈ 24 ಹೆಸರುಗಳನ್ನು ಪಠಿಸಲಾಗುತ್ತೆ.

Chaturvimsati Namas: ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುವುದು, ಹೇಗೆ ಗೊತ್ತಾ?
ವಿಷ್ಣು
TV9 Web
| Updated By: ಆಯೇಷಾ ಬಾನು|

Updated on: Jan 06, 2022 | 7:15 AM

Share

ಭಗವಾನ್ ವಿಷ್ಣುವಿಗೆ(Lord Vishnu) ಅನೇಕ ಹೆಸರುಗಳಿಂದ ಕರೆಯಲಾಗುತ್ತೆ. ಈ ಪೈಕಿ ಚತುರ್ವಿಂಶತಿ ನಮಸ್ ವಿಷ್ಣುವಿನ 24 ಹೆಸರುಗಳನ್ನು ಬಳಗೊಂಡಿದೆ. ವಿಷ್ಣುವಿನ 24 ಹೆಸರುಗಳು ವೈಷ್ಣವರಿಗೆ ಅತ್ಯಂತ ಪವಿತ್ರವಾದ ಕೇಶವ ನಾಮಗಳಾಗಿವೆ. ವೈಷ್ಣವ ವೈದಿಕ ಪೂಜೆಗಳ ಆರಂಭದಲ್ಲಿ ಈ 24 ಹೆಸರುಗಳನ್ನು ಪಠಿಸಲಾಗುತ್ತೆ. ಇನ್ನು ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುತ್ತೆ. ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ ಇರುವಂತೆ ನೀಡಲಾಗಿದೆ.

1.ಕೇಶವ (ಶಂಕು, ಚಕ್ರ, ಗಧ, ಪದ್ಮ) 2.ನಾರಾಯಣ (ಪದ್ಮ, ಗಧ, ಚಕ್ರ, ಶಂಕು) 3.ಮಾಧವ (ಚಕ್ರ, ಶಂಕು, ಪದ್ಮ, ಗಧ) 4.ಗೋವಿಂದ (ಗಧ, ಪದ್ಮ, ಶಂಕು, ಚಕ್ರ) 5.ವಿಷ್ಣು (ಪದ್ಮ, ಶಂಕು, ಚಕ್ರ, ಗಧ) 6.ಮಧುಸೂದನ (ಶಂಕು, ಪದ್ಮ, ಗಧ, ಚಕ್ರ) 7.ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ) 8.ವಾಮನ (ಚಕ್ರ, ಗಧ, ಪದ್ಮ, ಶಂಕು) 9.ಶ್ರೀಧರ (ಚಕ್ರ, ಗಧ, ಶಂಕು, ಪದ್ಮ) 10.ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ) 11.ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು) 12.ದಾಮೋದರ (ಶಂಕು, ಗಧ, ಚಕ್ರ, ಪದ್ಮ) 13.ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ) 14.ವಾಸುದೇವ (ಶಂಕು, ಚಕ್ರ, ಪದ್ಮ, ಗಧ) 15.ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ) 16.ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ) 17.ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ) 18.ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ) 19.ನರಸಿಂಹ (ಪದ್ಮ, ಗಧ, ಶಂಕು, ಚಕ್ರ) 20.ಅಚ್ಯುತ (ಪದ್ಮ, ಚಕ್ರ, ಶಂಕು, ಗಧ) 21.ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ) 22.ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು) 23.ಹರಿ (ಚಕ್ರ, ಪದ್ಮ, ಗಧ, ಶಂಕು) 24.ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)

ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು ಗಾಯಿತ್ರಿಯ ಮಂತ್ರದ ಪ್ರಕಾರ: ತತ್ = ಕೇಶವ – ಸ್ಯ = ವಾಸುದೇವ ಸ = ನಾರಾಯಣ – ಧೀ = ಸಂಕರ್ಷಣ ವಿ = ಮಾಧವ – ಮ = ಪ್ರದ್ಯುಮ್ನ ತು: = ಗೋವಿಂದ – ಹಿ = ಅನಿರುದ್ಧ ವ = ವಿಷ್ಣು – ಧಿ = ಪುರುಷೋತ್ತಮ ರೇ = ಮಧುಸೂಧನ – ಯೊ = ಅಧೋಕ್ಷಜ ಣಿ = ತ್ರಿವಿಕ್ರಮ – ಯೋ= ನಾರಸಿಂಹ ಯಮ್= ವಾಮನ – ನ: = ಅಚ್ಯುತ ಭರ್ = ಶ್ರೀಧರ – ಪ್ರ = ಜನಾರ್ಧನ ಗ: = ಹೃಶೀಕೇಶ – ಚೋ = ಉಪೇಂದ್ರ ದೇ = ಪದ್ಮನಾಭ – ದ = ಹರಿ ವ = ದಾಮೋಧರ – ಯಾತ್ = ಕೃಷ್ಣ

ತ್ರಿವಿಕ್ರಮ ಹಾಗೂ ವಾಮನ ರೂಪ ಒಂದೇ ಆಗಿರುವುದರಿಂದ ಉಚ್ಚಾರಣೆ ಮಾಡುವಾಗ ಣ್ಯಿಮ್ ೨೪ ಅಕ್ಷರಗಳು ಬರುವ ಹಾಗೆ ಉಚ್ಚಾರಣೆ ಮಾಡಬೇಕು ಭಗವಂತನದು 77 ಅಂತರ್ಯಾಮಿ ರೂಪಗಳು, ಅಕ್ಷರಗಳಿಂದ ಕರೆಯಿಸಿಕೊಳ್ಳುವ 51 ನಾಮಾತ್ಮಕ ರೂಪಗಳು, ಹಾಗೂ ಮೇಲೆ ಹೇಳಿರುವ 24 ರೂಪಾತ್ಮಕ ರೂಪಗಳು ಮತ್ತು ಇವೆಲ್ಲಕ್ಕಿಂತಲೂ, ಲಕ್ಷ್ಮಿಯಲ್ಲಿರುವ ರೂಪ, ಮತ್ತು ನಾರಾಯಣನಲ್ಲಿ ಲಕ್ಷ್ಮಿ ಇರುವ ರೂಪ.

ಇದನ್ನೂ ಓದಿ: Lord Vishnu: ಗುರುವಾರ ವಿಷ್ಣು ಪೂಜೆ ಮಾಡುವುದರಿಂದ ಸಿಗುವ ಫಲಗಳೇನು?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!