Dimple: ಗುಳಿ ಕೆನ್ನೆ ಇರುವವರು ನಿಜಕ್ಕೂ ಅದೃಷ್ಟವಂತರಾ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಗುಳಿ ಕೆನ್ನೆ ಕೇವಲ ಸೌಂದರ್ಯವಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ವ್ಯಕ್ತಿಯ ಅದೃಷ್ಟ, ಬುದ್ಧಿವಂತಿಕೆ ಮತ್ತು ಯಶಸ್ಸಿನ ಸಂಕೇತವಾಗಿದೆ. ಚಿಕ್ಕ ವಯಸ್ಸಿನಲ್ಲೇ ಕೀರ್ತಿ, ನೆನಪಿನ ಶಕ್ತಿ, ಚುರುಕುತನ, ಮತ್ತು ಆರ್ಥಿಕ ಜಾಣ್ಮೆ ಇವರ ಗುಣಲಕ್ಷಣಗಳು. ಆದರೂ, ವೈವಾಹಿಕ ಜೀವನದಲ್ಲಿ ಸಣ್ಣ ಸವಾಲುಗಳಿರಬಹುದು. ದೇವಿ ಆರಾಧನೆ ಮತ್ತು ಸಿಹಿ ದಾನದಂತಹ ಪರಿಹಾರಗಳಿಂದ ಅದೃಷ್ಟ ವೃದ್ಧಿಸಿಕೊಳ್ಳಬಹುದು.

Dimple: ಗುಳಿ ಕೆನ್ನೆ ಇರುವವರು ನಿಜಕ್ಕೂ ಅದೃಷ್ಟವಂತರಾ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಗುಳಿ ಕೆನ್ನೆ ಇರುವವರು
Image Credit source: instagram.com/aliaabhatt

Updated on: Jun 23, 2026 | 4:42 PM

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೆನ್ನೆಯ ಮೇಲಿನ ಗುಳಿ (Dimple) ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಇದು ಕೇವಲ ಸೌಂದರ್ಯದ ಸಂಕೇತವಲ್ಲ ಬದಲಿಗೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಬುದ್ಧಿವಂತಿಕೆ ಮತ್ತು ಅದೃಷ್ಟದ ಸಂಕೇತವೂ ಹೌದು. ಕೆನ್ನೆಗಳಲ್ಲಿ ಶಂಖಾಕಾರ, ತ್ರಿಕೋನಾಕಾರ ಅಥವಾ ನೇರವಾದ ಗುಳಿಗಳು ಬಿದ್ದರೆ ಅವುಗಳ ಮಹತ್ವವೇ ಬೇರೆ ಇರುತ್ತದೆ. ಗುಳಿ ಕೆನ್ನೆ ಇರುವವರಲ್ಲಿ ಕಂಡುಬರುವ ಪ್ರಮುಖ ಗುಣಲಕ್ಷಣಗಳು ಮತ್ತು ಅದೃಷ್ಟದ ರಹಸ್ಯಗಳು ಇಲ್ಲಿವೆ.

ಚಿಕ್ಕ ವಯಸ್ಸಿನಲ್ಲೇ ಕೀರ್ತಿ, ಪ್ರತಿಷ್ಠೆ:

ಗುಳಿ ಕೆನ್ನೆ ಇರುವವರಿಗೆ ಚಿಕ್ಕ ವಯಸ್ಸಿನಲ್ಲೇ ಸಮಾಜದಲ್ಲಿ ಉತ್ತಮ ಕೀರ್ತಿ ಮತ್ತು ಪ್ರತಿಷ್ಠೆ ಲಭಿಸುತ್ತದೆ. ಇವರಲ್ಲಿ ನೆನಪಿನ ಶಕ್ತಿ (Memory Power) ಮತ್ತು ಬುದ್ಧಿವಂತಿಕೆ ತುಂಬಾ ಹೆಚ್ಚಾಗಿರುತ್ತದೆ. ಇವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಅತ್ಯಂತ ಸುಲಭವಾಗಿ ಇತರರನ್ನು ತಮ್ಮತ್ತ ಸೆಳೆಯುತ್ತಾರೆ.

ಚುರುಕುತನ ಮತ್ತು ಸ್ವಾವಲಂಬನೆ:

ಇಂತಹ ವ್ಯಕ್ತಿಗಳು ಸದಾ ಚುರುಕಾಗಿರುತ್ತಾರೆ ಮತ್ತು ತಮ್ಮ ಸ್ವಂತ ಶಕ್ತಿಯ ಮೇಲೆ ಬದುಕಲು ಇಷ್ಟಪಡುತ್ತಾರೆ (ಸ್ವಾವಲಂಬಿಗಳು). ಯಾವುದೇ ಕಷ್ಟದ ಸಂದರ್ಭ ಎದುರಾದರೂ ಅಥವಾ ಹೊಸ ವಿಷಯಗಳಿದ್ದರೂ ಇವರು ತಕ್ಷಣವೇ ಸ್ಪಂದಿಸುವ ಅದ್ಭುತ ಶಕ್ತಿಯನ್ನು ಹೊಂದಿರುತ್ತಾರೆ.

ಉನ್ನತ ಹುದ್ದೆ ಮತ್ತು ಯಶಸ್ಸು:

ತಮ್ಮ ಜೀವನದಲ್ಲಿ ಸಿಗುವ ಎಲ್ಲಾ ಸಣ್ಣ-ದೊಡ್ಡ ಅವಕಾಶಗಳನ್ನು ಇವರು ಅತ್ಯಂತ ಸಕ್ರಮವಾಗಿ ಮತ್ತು ಜಾಣ್ಮೆಯಿಂದ ಬಳಸಿಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಐಎಎಸ್ (IAS) ಅಥವಾ ಐಪಿಎಸ್ (IPS) ನಂತಹ ದೇಶದ ಅತ್ಯುನ್ನತ ಮತ್ತು ಗೌರವಾನ್ವಿತ ಹುದ್ದೆಗಳಲ್ಲಿ ಇರುವವರಲ್ಲಿ ಈ ಗುಳಿ ಕೆನ್ನೆಯ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.

ಆರ್ಥಿಕ ಬುದ್ಧಿವಂತಿಕೆ ಮತ್ತು ವಿಭಿನ್ನ ಆಲೋಚನೆ:

ಹಣಕಾಸಿನ ವಿಷಯದಲ್ಲಿ ಇವರು ತುಂಬಾ ಜಾಗರೂಕರಾಗಿರುತ್ತಾರೆ ಮತ್ತು ಇವರ ಆರ್ಥಿಕ ಲೆಕ್ಕಾಚಾರಗಳು ಯಾವಾಗಲೂ ನಿಖರವಾಗಿರುತ್ತವೆ. ಸಾಮಾನ್ಯ ಜನರು ಯೋಚಿಸುವುದಕ್ಕಿಂತ ಒಂದು ಹೆಜ್ಜೆ ಮುಂದೆಯೇ ಯೋಚಿಸುವ ವಿಭಿನ್ನ ಆಲೋಚನಾ ಶಕ್ತಿ ಇವರಿಗಿರುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಇರುವ ಕೆಲವು ನಕಾರಾತ್ಮಕ ಅಂಶಗಳು:

ಗುಳಿ ಕೆನ್ನೆ ಇರುವವರಿಗೆ ಎಲ್ಲವೂ ಧನಾತ್ಮಕವಾಗಿಯೇ ಇರುವುದಿಲ್ಲ, ಕೆಲವು ಸವಾಲುಗಳೂ ಇರುತ್ತವೆ. ಇವರ ವೈವಾಹಿಕ ಜೀವನದಲ್ಲಿ ಪೂರ್ಣ ಪ್ರಮಾಣದ ಸಂತಸ ಇರುವುದು ಸ್ವಲ್ಪ ಕಷ್ಟ. ಇವರ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಎಡವಟ್ಟುಗಳು ಅಥವಾ ಮಿಶ್ರ ಫಲಗಳು ಹೆಚ್ಚಾಗಿ ಕಂಡುಬರುತ್ತವೆ. ಇವರು ಕೆಲವು ಸಂದರ್ಭಗಳಲ್ಲಿ ಅತಿಯಾದ ಆಸೆಗೆ ಬಿದ್ದು, ಇತರರಿಂದ ಸುಲಭವಾಗಿ ಮೋಸ ಹೋಗುವ ಸಾಧ್ಯತೆ ಇರುತ್ತದೆ.

ಅದೃಷ್ಟ ಹೆಚ್ಚಾಗಲು ಸರಳ ಪರಿಹಾಗಳು:

ಜ್ಯೋತಿಷ್ಯದ ಪ್ರಕಾರ ಮುಖದ ಭಾವವು ವೃಷಭ ರಾಶಿ ಮತ್ತು ಶುಕ್ರಾಧಿಪತ್ಯಕ್ಕೆ ಒಳಪಡುವುದರಿಂದ, ಇವರು ತಮ್ಮ ಅದೃಷ್ಟವನ್ನು ವೃದ್ಧಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು:

  • ಪ್ರತಿದಿನ ಸಂಧ್ಯಾಕಾಲದಲ್ಲಿ (ಸಂಜೆ) ದೇವಿ ಆರಾಧನೆ ಮಾಡುವುದು ಅಥವಾ ದೇವಿಯ ಸ್ತೋತ್ರಗಳನ್ನು ಪಠಿಸುವುದು ಅತ್ಯಂತ ಶ್ರೇಷ್ಠ.
  • ಅತಿಯಾದ ಭಾವುಕತೆ ಅಥವಾ ಅತಿಯಾದ ಗಾಢವಾದ (Bright/Loud) ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಕಡಿಮೆ ಮಾಡಬೇಕು.
  • ಪ್ರತಿ ಭಾನುವಾರ ತಪ್ಪದೇ ಅಗತ್ಯವಿರುವವರಿಗೆ ಸಿಹಿ ಪದಾರ್ಥಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Tue, 23 June 26

Follow Us