Astro Tips: ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಲವಾಗಿದ್ದರೆ ಈ ಒಂದು ಪರಿಹಾರ ಪ್ರಯತ್ನಿಸಿ

ಜ್ಯೋತಿಷ್ಯದಲ್ಲಿ, ಹಸು ಗುರು ಗ್ರಹದ ಸಂಕೇತವಾಗಿದೆ. ಹಸುವಿಗೆ ಆಹಾರ ನೀಡುವುದು ಗುರುವಿನ ಪ್ರಭಾವವನ್ನು ಹೆಚ್ಚಿಸಿ, ಮನಶಾಂತಿ, ಕುಟುಂಬದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದು ಶನಿ ಮತ್ತು ಪಿತೃ ದೋಷಗಳ ನಿವಾರಣೆಗೂ ಇದು ಸಹಾಯಕ ಎಂದು ಹೇಳಲಾಗುತ್ತದೆ. ಪ್ರತಿದಿನ ಹಸುವಿಗೆ ಆಹಾರ ನೀಡುವುದರಿಂದ ದೇವರ ಆಶೀರ್ವಾದ ಪಡೆಯಬಹುದು.

Astro Tips: ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಲವಾಗಿದ್ದರೆ ಈ ಒಂದು ಪರಿಹಾರ ಪ್ರಯತ್ನಿಸಿ
Cow Feeding Benefits

Updated on: May 14, 2025 | 1:01 PM

ಜ್ಯೋತಿಷ್ಯದಲ್ಲಿ, ಹಸು ಗುರು ಗ್ರಹದ ಸಂಕೇತವಾಗಿದೆ. ಹಸುವಿಗೆ ಆಹಾರ ನೀಡುವುದರಿಂದ ಗುರುವಿನ ಪ್ರಭಾವ ಬಲಗೊಳ್ಳುತ್ತದೆ. ಹಸುಗಳಿಗೆ ಆಹಾರ ನೀಡುವುದು ಇದು ಮನಸ್ಸಿನ ಶಾಂತಿ, ಕುಟುಂಬದಲ್ಲಿ ಸಂತೋಷ ಮತ್ತು ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹಸುವನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ಹಸುಗಳಿಗೆ ಆಹಾರ ನೀಡುವುದು ಕೇವಲ ಸಂಪ್ರದಾಯವಲ್ಲ. ಇದರ ಹಿಂದೆ ಆಳವಾದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಈ ಸಂಪ್ರದಾಯವು ಪ್ರಾಚೀನ ಕಾಲದಲ್ಲಿದ್ದಂತೆಯೇ ಇಂದಿಗೂ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ರತಿದಿನ ಹಸುವಿಗೆ ಆಹಾರ ನೀಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ.

ಹಸುವಿಗೆ ಆಹಾರ ನೀಡುವುದರ ಮಹತ್ವ:

ಗೋವಿನಲ್ಲಿ ಕೋಟಿ ದೇವತೆಗಳು ನೆಲೆಸಿದ್ದಾರೆಂದು ನಂಬಲಾಗಿದೆ. ಇದರೊಂದಿಗೆ, ಹಸುವನ್ನು ಭೂಮಿ ದೇವತೆಯ ಸಂಕೇತವಾಗಿಯೂ ನೋಡಲಾಗುತ್ತದೆ. ಬೌದ್ಧ ಧರ್ಮದಲ್ಲೂ ಹಸುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹಸುವಿಗೆ ಆಹಾರ ನೀಡುವುದು ಎಲ್ಲಾ ದೇವರುಗಳಿಗೆ ಆಹಾರ ನೀಡಿದಂತೆಯೇ. ಒಟ್ಟಾಗಿ, ಎಲ್ಲಾ ದೇವರುಗಳ ಆಶೀರ್ವಾದವನ್ನು ನೀವು ಪಡೆದಂತೆ.

ಇದನ್ನೂ ಓದಿ: ಮೇಷದಿಂದ ವೃಷಭ ರಾಶಿಗೆ ಬುಧ ಸಂಚಾರ; ಈ 3 ರಾಶಿಗಳ ಲಕ್‌ ಬದಲಾಗಲಿದೆ!

ಇದನ್ನೂ ಓದಿ
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ಪ್ರತಿದಿನ ಹಸುವಿಗೆ ಆಹಾರ ನೀಡುವ ವ್ಯಕ್ತಿಗೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಹಸುವಿಗೆ ಬೆಲ್ಲ ತಿನ್ನಿಸುವುದು ಯಜ್ಞ ಅಥವಾ ದಾನ ಮಾಡಿದಷ್ಟೇ ಶುಭವೆಂದು ಪರಿಗಣಿಸಲಾಗಿದೆ. ಶನಿ ಮತ್ತು ಪಿತೃ ದೋಷಗಳಿಂದ ಬಳಲುತ್ತಿರುವ ಜನರು ನಿಯಮಿತವಾಗಿ ಹಸುಗಳಿಗೆ ಆಹಾರ, ಮೇವು ಅಥವಾ ಬೆಲ್ಲವನ್ನು ತಿನ್ನಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿನ ದೋಷಗಳು ಕಡಿಮೆಯಾಗುವುದಲ್ಲದೆ, ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Wed, 14 May 25