Shravana Masa: ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳನ್ನು ದಾನ ಮಾಡಿದರೆ ಶ್ರೀಮಂತರಾಗುವುದು ಗ್ಯಾರಂಟಿ

ಶಿವ ಪುರಾಣದ ಪ್ರಕಾರ, ಉಪ್ಪನ್ನು ದಾನ ಮಾಡುವುದರಿಂದ ಕೆಟ್ಟ ಸಮಯ ದೂರವಾಗುತ್ತವೆ. ಗ್ರಂಥಗಳಲ್ಲಿ, ಉಪ್ಪನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

Shravana Masa: ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳನ್ನು ದಾನ ಮಾಡಿದರೆ ಶ್ರೀಮಂತರಾಗುವುದು ಗ್ಯಾರಂಟಿ
ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳನ್ನು ದಾನ ಮಾಡಿದರೆ ಶ್ರೀಮಂತರಾಗುವುದು ಗ್ಯಾರಂಟಿ

Updated on: Jul 04, 2023 | 2:53 PM

ಶಾಸ್ತ್ರಗಳ ಪ್ರಕಾರ… ಶ್ರಾವಣದಲ್ಲಿ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದು, ಶಿವನ ಪೂಜೆ ಮತ್ತು ಉಪವಾಸ ಮಾಡುವುದು ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಶ್ರಾವಣ ಮಾಸದ ಸೋಮವಾರದಂದು ಈ ವಸ್ತುಗಳನ್ನು ದಾನ ಮಾಡುವುದು ಉತ್ತಮ (Daan In Shravan Month). ಶ್ರಾವಣದಲ್ಲಿ ಅಕ್ಕಿ ಕೊಡುವುದು ಮತ್ತು ಭೀಜನ ಹಾಕುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಶಿವ ಪುರಾಣದ ಪ್ರಕಾರ, ಶ್ರಾವಣ ಸೋಮವಾರದ ಪೂಜೆಯ ಸಮಯದಲ್ಲಿ ಶಿವಲಿಂಗಕ್ಕೆ ಒಂದು ಹಿಡಿ ಅಕ್ಷತೆ ಅರ್ಪಿಸಿ. ಅಗತ್ಯವಿರುವವರಿಗೆ ಅಕ್ಕಿ ಮತ್ತು ಭೋಜನ ಮಾಡಿಸಿ. ಇದು ಪ್ರಗತಿಯ ಹಾದಿಯನ್ನು ಸುಗಮಗೊಳಿಸುತ್ತದೆ.

ಕಪ್ಪು ಎಳ್ಳು – ಕಪ್ಪು ಎಳ್ಳು ಶಿವ ಮತ್ತು ಶನಿ ಮಹಾತ್ಮ -ಇಬ್ಬರಿಗೂ ಪ್ರಿಯವಾಗಿದೆ. ಶ್ರಾವಣ ಸೋಮವಾರ ಅಥವಾ ಶ್ರಾವಣ ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿ ಪ್ರಭಾವವು ಕಡಿಮೆಯಾಗುತ್ತದೆ. ರಾಹು-ಕೇತು ಜನ್ಮ ದೋಷಗಳೂ ದೂರವಾಗುತ್ತವೆ.

ಉಪ್ಪು – ಶಿವ ಪುರಾಣದ ಪ್ರಕಾರ, ಉಪ್ಪನ್ನು ದಾನ ಮಾಡುವುದರಿಂದ ಕೆಟ್ಟ ಸಮಯ ದೂರವಾಗುತ್ತವೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಗ್ರಂಥಗಳಲ್ಲಿ, ಉಪ್ಪನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ರುದ್ರಾಕ್ಷ – ರುದ್ರಾಕ್ಷವನ್ನು ಗ್ರಂಥಗಳಲ್ಲಿ ಶಿವನ ಭಾಗವೆಂದು ಪರಿಗಣಿಸಲಾಗಿದೆ. ಇದು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಶ್ರಾವಣದಲ್ಲಿ ರುದ್ರಾಕ್ಷ ದಾನ ಮಾಡುವುದರಿಂದ ಆಯಸ್ಸು ಹೆಚ್ಚುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇದು ಅಕಾಲಿಕ ಮರಣದ ಭಯವನ್ನು ನಿವಾರಿಸುತ್ತದೆ.

ಬೆಳ್ಳಿ – ಮಕ್ಕಳಾಗಲು, ಕಾಲ ಸರ್ಪದೋಷ ನಿವಾರಣೆಗೆ ಶ್ರಾವಣ ಮಾಸದಲ್ಲಿ ಬೆಳ್ಳಿಯ ವಸ್ತುಗಳನ್ನು ದಾನ ಮಾಡಿ.

Published On - 2:52 pm, Tue, 4 July 23