Festivals in July 2023: ಜುಲೈ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು, ವ್ರತಗಳು
ಹಿಂದೂ ಧರ್ಮದಲ್ಲಿ ಜುಲೈ ತಿಂಗಳು ಬಹಳ ವಿಶೇಷವಾಗಿದೆ ಏಕೆಂದರೆ ಈ ತಿಂಗಳಿನಲ್ಲಿ ಶ್ರಾವಣ ಮಾಸ ಆರಂಭವಾಗುವುದರಿಂದ ಹಲವು ಹಬ್ಬಗಳು ಮತ್ತು ವ್ರತಗಳನ್ನು ಆಚರಿಸಲಾಗುತ್ತದೆ. ವರ್ಷದ ಏಳನೇ ತಿಂಗಳಾಗಿರುವ ಈ ಜುಲೈನಲ್ಲಿ ಪ್ರಮುಖ ಹಬ್ಬಗಳು ಮತ್ತು ವ್ರತಗಳ ಮಾಹಿತಿ ಇಲ್ಲಿದೆ.
ಧಾರ್ಮಿಕ ದೃಷ್ಟಿಕೋನದಿಂದ ಜುಲೈ ತಿಂಗಳನ್ನು ವಿಶೇಷವಾಗಿ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ತಿಂಗಳಿನಲ್ಲಿ ಪ್ರಮುಖ ಪೂರ್ಣಿಮೆಗಳು, ಏಕಾದಶಿ ಮತ್ತು ಅಮವಾಸ್ಯೆಯ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೆ ಜುಲೈ ತಿಂಗಳು ಆಷಾಢ ಮಾಸ ಕೊನೆಗೊಂಡು ಶ್ರಾವಣ ಮಾಸದ ಆರಂಭವನ್ನು ಸೂಚಿಸುತ್ತದೆ. ಶ್ರಾವಣ ಮಾಸ ಶಿವ ದೇವರ ನೆಚ್ಚಿನ ಮಾಸವಾಗಿರುದರಿಂದ ಅನೇಕ ಭಕ್ತರು ಈ ತಿಂಗಳಲ್ಲಿ ಶಿವ ದೇವರ ಪೂಜೆಯಲ್ಲಿ ತೊಡಗುತ್ತಾರೆ. ಜುಲೈ ತಿಂಗಳಿನಲ್ಲಿ ಶಿವನಿಗೆ ಸಮರ್ಪಿತವಾದ ಉಪವಾಸಗಳು ಮತ್ತು ಹಬ್ಬಗಳು ಹೆಚ್ಚು ನಡೆಯುತ್ತವೆ. ನಂಬಿಕಗಳ ಪ್ರಕಾರ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಹಾಗೂ ಈ ಮಾಸದಲ್ಲಿ ಬರುವ ಪ್ರತಿ ಸೋಮವಾರದಂದು ಉಪವಾಸ ವ್ರತ ಆಚರಿಸುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಶ್ರಾವಣ ಮಾಸ ವಿಶೇಷ:
ಈ ಬಾರಿ ಶ್ರಾವಣ ಮಾಸವು ಬಹಳ ವಿಶೇಷವಾಗಿರಲಿದೆ. ಏಕೆಂದರೆ ಅಧಿಕ ಮಾಸದ ಕಾರಣದಿಂದಾಗಿ, ಈ ಬಾರಿಯ ಶ್ರಾವಣ ಮಾಸವು ಜುಲೈ 4ರಂದು ಆರಂಭವಾಗಿ ಆಗಸ್ಟ್ 31ರಂದು ಕೊನೆಗೊಳ್ಳುತ್ತದೆ. ಹಾಗಾಗಿ ಶಿವಭಕ್ತರು ಎರಡು ತಿಂಗಳುಗಳ ಕಾಲ ಶಿವ ಪೂಜೆಯಲ್ಲಿ ತೊಡಗಬಹುದು. ಅಲ್ಲದೆ ಈ ಬಾರಿಯ ಶ್ರಾವಣದಲ್ಲಿ 8 ಶ್ರಾವಣ ಸೋಮವಾರ ಉಪವಾಸಗಳನ್ನು ಆಚರಿಸಲಾಗುತ್ತದೆ. ಅಲ್ಲದೆ ಶ್ರಾವಣ ಮಾಸದ ಈ ಜುಲೈ ತಿಂಗಳಲ್ಲಿ ಹಲವು ಹಬ್ಬಗಳು ಹಾಗೂ ವ್ರತಗಳು ನಡೆಯಲಿವೆ.
ಜುಲೈ ತಿಂಗಳಲ್ಲಿನ ಆಚರಿಸಲಾಗುವ ಪ್ರಮುಖ ಹಬ್ಬಗಳು ಮತ್ತು ವ್ರತಗಳ ಪಟ್ಟಿ:
ಜುಲೈ 3, ಸೋಮವಾರ: ಗುರು ಪೂರ್ಣಿಮಾ, ಆಷಾಢ ಪೂರ್ಣಿಮಾ ವ್ರತ
ಜುಲೈ 4 ಮಂಗಳವಾರ: ಶ್ರಾವಣ ಮಾಸದ ಆರಂಭ ಹಾಗೂ ಮೊದಲ ಮಂಗಳಗೌರಿ ವ್ರತ
ಜುಲೈ 6 ಗುರುವಾರ: ಜಯಪಾರ್ವತಿ ವ್ರತ, ಸಂಕಷ್ಟ ಚತುರ್ಥಿ
ಜುಲೈ 9, ಭಾನುವಾರ: ಭಾನು ಸಪ್ತಮಿ, ಕಲಾಷ್ಟಮಿ,
ಜುಲೈ 10 ಸೋಮವಾರ: ಮೊದಲ ಶ್ರಾವಣ ಸೋಮವಾರ ವ್ರತ
ಜುಲೈ 11 ಮಂಗಳವಾರ : ಶ್ರಾವಣ ಮಾಸದ ಎರಡನೇ ಮಂಗಳಗೌರಿ ವ್ರತ
ಜುಲೈ 13 ಗುರುವಾರ: ಕಾಮಿಕಾ ಏಕಾದಶಿ
ಜುಲೈ 14 ಶುಕ್ರವಾರ: ಪ್ರದೋಷ ವ್ರತ
ಜುಲೈ 15 ಶನಿವಾರ: ಶ್ರಾವಣ ಶಿವರಾತ್ರಿ, ಶನಿ ಪ್ರದೋಷ
ಜುಲೈ 16 ಭಾನುವಾರ: ಕರ್ಕ ಸಂಕ್ರಮಣ
ಜುಲೈ 17 ಸೋಮವಾರ: ಶ್ರಾವಣ ಅಮವಾಸ್ಯೆ, ಸೋಮವತಿ ಅಮವಾಸ್ಯೆ
ಜುಲೈ 18 ಮಂಗಳವಾರ: ಮೂರನೇ ಮಂಗಳಗೌರಿ ವ್ರತ, ಅಧಿಕ ಮಾಸ ಪ್ರಾರಂಭ
ಜುಲೈ 23 ಭಾನುವಾರ: ಸ್ಕಂದ ಷಷ್ಠಿ
ಜುಲೈ 24 ಸೋಮವಾರ: ಎರಡನೇ ಶ್ರಾವಣ ಸೋಮವಾರ
ಜುಲೈ 29 ಶನಿವಾರ: ಪದ್ಮಿನಿ ಏಕಾದಶಿ, ಮೊಹರಂ ಆಚರಣೆ
ಜುಲೈ 30 ಭಾನುವಾರ: ರವಿ ಪ್ರದೋಷ ವ್ರತ
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ