July 2023 Full Moon: ಇಂದು ಆಕಾಶದಲ್ಲಿ ನಡೆಯಲಿದೆ ಖಗೋಳ ಕೌತುಕ! ಏನಿದು ಜುಲೈ ಬಕ್ ಮೂನ್? ಇಲ್ಲಿದೆ ಮಾಹಿತಿ

ಜುಲೈನಲ್ಲಿ ಸೂಪರ್ ಮೂನ್ ಸಾಮಾನ್ಯ ಹುಣ್ಣಿಮೆಯಂದು ನಡೆಯುವ ಘಟನೆಗಿಂತ ಭೂಮಿಗೆ 14,000 ಮೈಲಿ ಹತ್ತಿರವಿರುತ್ತದೆ.

July 2023 Full Moon: ಇಂದು ಆಕಾಶದಲ್ಲಿ ನಡೆಯಲಿದೆ ಖಗೋಳ ಕೌತುಕ! ಏನಿದು ಜುಲೈ ಬಕ್ ಮೂನ್? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2023 | 12:35 PM

ಬಕ್ ಅಥವಾ ಥಂಡರ್ ಮೂನ್ ಎಂದೂ ಕರೆಯಲ್ಪಡುವ ಇಂದಿನ ಹುಣ್ಣಿಮೆ, ಆಕಾಶವನ್ನು ಅಲಂಕರಿಸಲು ಸಜ್ಜಾಗಿದೆ. ಇದನ್ನು ಜುಲೈ ಫುಲ್‌ ಮೂನ್ (full moon July) ಎಂದೂ ಕರೆಯಲಾಗುತ್ತದೆ. ಈ ಹುಣ್ಣಿಮೆಯು ಖಗೋಳದ ವಿಸ್ಮಯವನ್ನು ಆನಂದಿಸುವರಿಗೆ ಶುಭ ದಿನವಾಗಿದೆ. ನಾಸಾ ವರದಿಯಂತೆ ಇಂದು (ಜುಲೈ 3) ಇದು ಆಗಸದಲ್ಲಿ ಈ ಖಗೋಳದ ಕೌತುಕ ಗೋಚರವಾಗಲಿದೆ.

ನಾಸಾದ ಪ್ರಕಾರ ಜುಲೈ 3, 2023ರಂದು ಬೆಳಿಗ್ಗೆ ಹುಣ್ಣಿಮೆ ಆರಂಭವಾಗುತ್ತದೆ. ಭೂಮಿಯ ಅಕ್ಷವು 7:39 ಎಂಎಂ ಇಡಿಟಿ ರೇಖಾಂಶದಲ್ಲಿ ಸೂರ್ಯನಿಗೆ ಎದುರುಗೊಳ್ಳುತ್ತದೆ. ಇದು ರವಿವಾರ ತಡರಾತ್ರಿ ಇಂಟರ್‌ನ್ಯಾಷನಲ್‌ ಡೇಟ್‌ ಲೈನ್‌ ವೆಸ್ಟ್‌ ಟೈಮ್‌ ಝೋನ್‌ನಿಂದ ಮತ್ತು ಮಂಗಳವಾರ ಮುಂಜಾನೆ ಚಾಥಮ್‌ ಐಲ್ಯಾಂಡ್‌ ಟೈಮ್‌ ಝೋನ್‌ವರೆಗೂ ಇರುತ್ತದೆ. ಈ ಸಮಯದಲ್ಲಿ ಶನಿವಾರ ಸಂಜೆಯಿಂದ ಮಂಗಳವಾರ ಸಂಜೆಯವರೆಗೆ 3 ದಿನಗಳ ಕಾಲ ಚಂದ್ರನು ಪೂರ್ಣ ಗಾತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಲ್ಲದೆ ಈ ದಿನದ ಮತ್ತೊಂದು ವಿಶೇಷವೆಂದರೆ ಜುಲೈನ ಸೂಪರ್ ಮೂನ್ ಸಾಮಾನ್ಯ ಹುಣ್ಣಿಮೆಯಂದು ನಡೆಯುವ ಘಟನೆಗಿಂತ ಭೂಮಿಗೆ 14,000 ಮೈಲಿ ಹತ್ತಿರವಿರುತ್ತದೆ.

ಬಕ್ ಮೂನ್ ಎಂದರೇನು?

ಬಕ್ ಮೂನ್ ಜಿಂಕೆಯ ಹಣೆಯ ಮೇಲೆ ಹೊರಹೊಮ್ಮುವ ಹೊಸ ಕೊಂಬುಗಳನ್ನು ಸೂಚಿಸುತ್ತದೆ. ಬಕ್‌ ಎಂದರೆ ಗಂಡು ಜಿಂಕೆ. ಈ ಸಮಯದಲ್ಲಿ ಗಂಡು ಜಿಂಕೆಗಳ ಕೊಂಬುಗಳು ವೇಗವಾಗಿ ಬೆಳೆಯುತ್ತವೆ. ಅದಕ್ಕೆ ಬಕ್‌ ಮೂನ್‌ ಎಂದು ಹೆಸರಿಸಲಾಗಿದೆ. ಇದನ್ನು ಥಂಡರ್‌ ಮೂನ್‌, ವೈರ್ಟ್‌ ಮೂನ್‌ ಎಂದೂ ಕರೆಯುಲಾಗುತ್ತದೆ. ಬೇಸಿಗೆಯಲ್ಲಿ ಆಗಾಗ ಗುಡುಗು ಸಹಿತ ಮಳೆಯಾಗುವುದರಿಂದ ಸ್ಥಳೀಯ ಅಮೆರಿಕನ್ನರು ಇದನ್ನು ಸಾಲ್ಮನ್ ಮೂನ್, ರಾಸ್ಪ್ಬೆರಿ ಮೂನ್ ಮತ್ತು ಥಂಡರ್ ಮೂನ್ ಎಂದೂ ಕರೆಯುತ್ತಾರೆ. “ಸೂಪರ್ ಮೂನ್ ” ಎಂಬ ಪದವನ್ನು ಜ್ಯೋತಿಷಿ ರಿಚರ್ಡ್ ನೋಲೆ 1979 ರಲ್ಲಿ ರಚಿಸಿದರು ಎಂದು ನಾಸಾ ಹೇಳಿದೆ. ಫುಲ್‌ ಮೂನ್‌ ಚಂದ್ರ ಶೇ 90ರಷ್ಟು ಪರಿಧಿಯೊಳಗೆ, ಭೂಮಿಗೆ ಹತ್ತಿರವಾಗಿರುವ ಸಂದರ್ಭದಲ್ಲಿ ಸಂಭವಿಸುತ್ತದೆ.

ಇದನ್ನೂ ಓದಿ;Strawberry Full Moon 2021: ಇಂದು ಸ್ಟ್ರಾಬೆರಿ ಮೂನ್​ ಗೋಚರಿಸುತ್ತಿದೆ! ಭಾರತದಲ್ಲಿ ಈ ವಿಸ್ಮಯವನ್ನು ನೋಡಬಹುದೇ?

ಈ ದಿನದ ಆಧ್ಯಾತ್ಮಿಕ ಮಹತ್ವ:

ಈ ದಿನದ ಮಹತ್ವವೆಂದರೆ ಹಿಂದೂ, ಬೌದ್ಧ ಮತ್ತು ಜೈನ ಸಮುದಾಯಗಳಲ್ಲಿ, ಹುಣ್ಣಿಮೆ ಅಥವಾ ಬಕ್ ಮೂನ್ ಗುರು ಪೂರ್ಣಿಮಾವನ್ನು ಸೂಚಿಸುತ್ತದೆ, ನಮ್ಮ ಜೀವನವನ್ನು ರೂಪಿಸಿದ ಮತ್ತು ನಮ್ಮ ಜೀವನವನ್ನು ಸರಿಯಾದ ರೀತಿಯಲ್ಲಿ ನಡೆಸಲು ಸಹಾಯ ಮಾಡಿದ ಗುರುವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವ್ಯಾಸ ಪೂರ್ಣಿಮಾ ಎಂದೂ ಕರೆಯಲ್ಪಡುವ ಗುರು ಪೂರ್ಣಿಮಾ ಹಬ್ಬವು ಅಪಾರ ಮಹತ್ವವನ್ನು ಹೊಂದಿದೆ ಮತ್ತು ಇದನ್ನು ದೇಶಾದ್ಯಂತ ಹೆಚ್ಚಿನ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಥೇರವಾಡ ಬೌದ್ಧರು, ಈ ಹುಣ್ಣಿಮೆಯನ್ನು ಅಸಲ್ಹಾ ಪೂಜೆ ಎಂದು ಕರೆಯುತ್ತಾರೆ. ಅಲ್ಲದೆ ಈ ದಿನವನ್ನು ಧರ್ಮ ದಿನ ಅಥವಾ ಎಸಲಾ ಪೋಯಾ ಎಂದೂ ಕರೆಯಲಾಗುತ್ತದೆ. ಆರಂಭದಲ್ಲಿ ಬೌದ್ಧ ಧರ್ಮವನ್ನು ಪ್ರಾರಂಭಿಸಿ ನಿರ್ವಾಣವನ್ನು ತಲುಪಿದ ನಂತರ ಬುದ್ಧನ ಮೊದಲ ಧರ್ಮೋಪದೇಶವನ್ನು ಆಚರಿಸುವ ಒಂದು ಪ್ರಮುಖ ಹಬ್ಬ ಇದಾಗಿದೆ.

ಬಕ್ ಮೂನ್ ವೀಕ್ಷಿಸುವುದು ಹೇಗೆ?

ಜುಲೈ ಸೂಪರ್ ಮೂನ್ ಅಥವಾ ಬಕ್ ಮೂನ್ ವೀಕ್ಷಿಸಲು ಉತ್ತಮ ಸಮಯವೆಂದರೆ ಚಂದ್ರೋದಯ ಅಥವಾ ಅಸ್ತಮಿಸುವ ಚಂದ್ರ. ಇದು ಚಂದ್ರನು ಆಕಾಶದಲ್ಲಿ ಅತಿ ದೊಡ್ಡದಾಗಿ ಕಾಣಿಸಿಕೊಳ್ಳುವ ಸಮಯವಾಗಿದೆ . ಆಕಾಶವು ಸ್ಪಷ್ಟವಾಗಿದ್ದರೆ, ಸೂಪರ್ ಮೂನ್​​ನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು, ಇಲ್ಲದಿದ್ದರೆ ಪರಿಪೂರ್ಣ ನೋಟವನ್ನು ಪಡೆಯಲು ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಬಹುದು. ಜೊತೆಗೆ ಮುಂದಿನ ಎರಡು ಸೂಪರ್ ಮೂನ್ ಗಳು ಆಗಸ್ಟ್‌ನಲ್ಲಿ ನಡೆಯಲಿದ್ದು, ವರ್ಷದ ಅಂತಿಮ ಸೂಪರ್ ಮೂನ್ ಸೆಪ್ಟೆಂಬರ್‌ನಲ್ಲಿ ಗೋಚರವಾಗಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ